
ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಮೆದುಳನ್ನು ಚುರುಕುಗೊಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವರು ಇಂತಹ ಚಿತ್ರಗಳನ್ನು ಬಿಡಿಸಿ ತಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇದೀಗ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವ ಸಮಯ. ಈ ಚಿತ್ರದಲ್ಲಿ ಹಲ್ಲಿ (lizard) ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು. ನೀವು ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನೀವು ನಿಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಲೀಸಾಗಿ ನಿಭಾಯಿಸುತ್ತೀರಿ ಎಂದರ್ಥ. ಆದರೆ ಈ ಒಗಟನ್ನು ಹದಿನೈದು ಸೆಕೆಂಡುಗಳೊಳಗೆ ಬಿಡಿಸಲು ಸಾಧ್ಯವೇ ಎಂದು ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಹಜವಾಗಿರುವಂತೆ ಕಾಣಿಸುತ್ತದೆ. ಇದರಲ್ಲಿರುವ ಗುಪ್ತ ವಸ್ತುಗಳು ಅಷ್ಟು ಸುಲಭವಾಗಿ ಒಗಟು ಬಿಡಿಸುವವರ ಕಣ್ಣಿಗೆ ಬೀಳುವುದಿಲ್ಲ. ಈ ಇಲ್ಯೂಷನ್ ಚಿತ್ರದಲ್ಲಿ ನೀವು ಮನೆಯ ಹೊರಾಂಗಣ ನೋಟವನ್ನು ಕಾಣಬಹುದು. ಹೂ ಕುಂಡಗಳು, ಮರಗಳಿವೆ. ಇದೆಲ್ಲದರ ನಡುವೆ ಹಲ್ಲಿಯೊಂದು ಅಡಗಿ ಕುಳಿತಿದೆ. ನಿಮಗೆ ಈ ಜೀವಿಯನ್ನು ಕಂಡು ಹಿಡಿಯುವುದು ಕಷ್ಟವಾಗಬಹುದು. ಈ ಸವಾಲನ್ನು ನೀವು ಸ್ವೀಕರಿಸಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ
ಅನುಭವಿ ಆಟಗಾರರಿಗೂ ಈ ಇಲ್ಯೂಷನ್ ಚಿತ್ರವನ್ನು ಬಿಡಿಸಲಾಗುವುದಿಲ್ಲ. ಈ ಮೇಲಿನ ಚಿತ್ರದಲ್ಲಿ ಮರೆಮಾಡಲಾಗಿರುವ ಹಲ್ಲಿಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಚಿಂತಿಸಬೇಡಿ, ಹಲ್ಲಿ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಹಲ್ಲಿಯನ್ನು ಗುರುತಿಸಿದ್ದು, ನೀವು ಗಮನಿಸಿದ್ದೀರಿ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Fri, 30 January 26