AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ

ಗುಜರಾತ್‌ ರಾಜ್ಯದ ಗಿರ್ ಸೋಮನಾಥದಲ್ಲಿ ಚಿರತೆಯ ಮೇಲೆ ದಾಳಿಯಿಂದ ಮಗನನ್ನು ರಕ್ಷಿಸಲು ವೃದ್ಧರೊಬ್ಬರು ಕತ್ತಿಯಿಂದ ಕೊಚ್ಚಿ ಕೊಂದಿದ್ದಾರೆ. 60 ವರ್ಷದ ರೈತ ತನ್ನ ಮಗನನ್ನು ರಕ್ಷಣೆ ಮಾಡಲು ಚಿರತೆಯನ್ನು ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ
LeopardImage Credit source: PTI
ಸುಷ್ಮಾ ಚಕ್ರೆ
|

Updated on: Jan 29, 2026 | 7:48 PM

Share

ಅಹಮದಾಬಾದ್, ಜನವರಿ 29: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ 60 ವರ್ಷದ ರೈತರೊಬ್ಬರು ತನ್ನನ್ನು ಮತ್ತು ತನ್ನ ಮಗನನ್ನು ರಕ್ಷಿಸಿಕೊಳ್ಳಲು ಚಿರತೆಯನ್ನು (Leopard Attack) ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ದಾಳಿಯ ನಂತರ ರೈತ ಬಾಬು ಅವರ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಕೊಂದಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ರಾತ್ರಿ ಜಿಲ್ಲಾ ಕೇಂದ್ರವಾದ ವೆರಾವಲ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ಯಾಂಗ್ಡಾ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯ ವರಾಂಡಾದಲ್ಲಿ ಬಾಬು ವಾಜಾ ವಿಶ್ರಾಂತಿ ಪಡೆಯುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಹತ್ತಿರದ ಹೊಲದಿಂದ ಹೊರಬಂದ ಚಿರತೆಯೊಂದು ಬಾಬು ಅವರ ಮೇಲೆ ಹಾರಿತು. ಆಗ ಅಲ್ಲಿಗೆ ಬಂದ ಅವರ ಮಗನ ಮೇಲೂ ದಾಳಿ ಮಾಡಿತು.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಬಾಬು ವಾಜಾ ಅವರ ಪ್ರಕಾರ, ಚಿರತೆ ಅವರ ತೋಳನ್ನು ಕಚ್ಚಿ ಹಿಡಿದು ಎಳೆಯಲು ಪ್ರಾರಂಭಿಸಿತು. “ನನ್ನ ಕಿರುಚಾಟ ಕೇಳಿ ನನ್ನ ಮಗ ಶಾರ್ದೂಲ್ ನನ್ನನ್ನು ರಕ್ಷಿಸಲು ಓಡಿ ಬಂದ. ಆದರೆ, ಚಿರತೆ ಅವನ ಮೇಲೆ ಹಾರಿ ಗಾಯಗೊಳಿಸಿತು. ನಾನು ಶಾರ್ದೂಲ್​ನನ್ನು ಉಳಿಸಲು ಪ್ರಯತ್ನಿಸಿದಾಗ ಚಿರತೆ ಮತ್ತೆ ನನ್ನ ಮೇಲೆ ಹಾರಿತು. ಆಗ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಇದ್ದ ಕತ್ತಿಯನ್ನು ತೆಗೆದುಕೊಂಡು ಚಿರತೆಗೆ ಹೊಡೆದೆ” ಎಂದು ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಾಬು ಮತ್ತು ಅವರ ಮಗನ ಮುಂಗೈ ಮತ್ತು ಹಣೆಯ ಮೇಲೆ ಗಾಯಗಳಾಗಿವೆ. ವರಾಂಡಾದಲ್ಲಿ ಇರಿಸಲಾಗಿದ್ದ ಕತ್ತಿಯನ್ನು ಹಿಡಿದು ಚಿರತೆಯನ್ನು ಕೊಲ್ಲಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ನಂತರ, ಭರ್ವಾದ್ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿ ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?
4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?
ಏನ್ ನಡೀತಿದೆ ಅಲ್ಲಿ? ನಾಯಿಗೂ ಜಗಳ ನೋಡುವ ಕುತೂಹಲ
ಏನ್ ನಡೀತಿದೆ ಅಲ್ಲಿ? ನಾಯಿಗೂ ಜಗಳ ನೋಡುವ ಕುತೂಹಲ