AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ!

ಹೈದರಾಬಾದ್​​ನ ದಂಪತಿ ತಮ್ಮ ಮುದ್ದಿನ ಸಾಕುನಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈ ದಂಪತಿಗೆ ತಮ್ಮ ಸಾಕು ನಾಯಿಯ ಮೇಲೆ ವಿಪರೀತ ಪ್ರೀತಿ ಇತ್ತು. ಹೀಗಾಗಿ, ತಮ್ಮ ಜೊತೆ ಅ ನಾಯಿಯನ್ನು ಕೂಡ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಇಲ್ಲಿಂದ ಬೇರೆ ದೇಶಕ್ಕೆ ನಾಯಿಯನ್ನು ಕರೆದುಕೊಂಡು ಹೋಗಲು ಮಿಲಿಯನ್​​ಗಟ್ಟಲೆ ಖರ್ಚಾಗುತ್ತದೆ ಎಂದು ತಿಳಿದಿದ್ದರೂ ಅವರು ಆ ನಾಯಿಯನ್ನು ಬಿಟ್ಟು ಹೋಗಲು ಒಪ್ಪಲಿಲ್ಲ.

ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ!
Pet Dog In Australia
ಸುಷ್ಮಾ ಚಕ್ರೆ
|

Updated on: Jan 30, 2026 | 8:14 PM

Share

ಹೈದರಾಬಾದ್, ಜನವರಿ 30: ಹೈದರಾಬಾದ್‌ನ ದಂಪತಿ ತಮ್ಮ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಲು 1.5 ಮಿಲಿಯನ್ (15 ಲಕ್ಷ ರೂ.) ಖರ್ಚು ಮಾಡಿದ್ದಾರೆ. ಆದರೂ ಆ ನಾಯಿ (Dog) ಆಸ್ಟ್ರೇಲಿಯಾಕ್ಕೆ ಬರುವ ಮೊದಲು 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿಯ ಕುಟುಂಬಸ್ಥರು ಆ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುವ ಬದಲು ಅಲ್ಲಿಯೇ ಹೊಸ ನಾಯಿಯನ್ನು ಖರೀದಿಸಲು ಸೂಚಿಸಿದರು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ.

ಆ ದಂಪತಿ ತಾವು ಸಾಕಿದ ನಾಯಿಯನ್ನೇ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಅವರು ತಮ್ಮ ಸಾಕು ನಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಲಕ್ಷಾಂತರ ರೂ. ಬೇಕಾದರೂ ಖರ್ಚು ಮಾಡಲು ತಯಾರಿದ್ದರು. ಆ ನಾಯಿ ತಮ್ಮ ಮಗು, ಅದನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಅವರು ಹಠ ಹಿಡಿದರು.

ಇದನ್ನೂ ಓದಿ: ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!

ಹೀಗಾಗಿ, ಹೈದರಾಬಾದ್ ಬಿಟ್ಟು ಆಸ್ಟ್ರೇಲಿಯಾಕ್ಕೆ ಹೋಗಲು ನಿರ್ಧರಿಸಿದಾಗ ಅವರು ತಮ್ಮ ನಾಯಿ ‘ಸ್ಕೈ’ ಅನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ ಆ ನಾಯಿಯನ್ನು ನೇರವಾಗಿ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ತಿಳಿದು ಅವರು ತುಂಬಾ ದುಃಖಿತರಾಗಿದ್ದರು. ಇದಲ್ಲದೆ, ತಮ್ಮ ನಾಯಿ 6 ತಿಂಗಳ ಕಾಲ ರೇಬೀಸ್ ಮುಕ್ತ ದೇಶದಲ್ಲಿ ಇರಬೇಕಾಗುತ್ತದೆ ಎಂಬ ಅಂಶದ ಬಗ್ಗೆ ದಂಪತಿ ಇನ್ನಷ್ಟು ಚಿಂತಿತರಾಗಿದ್ದರು. ಆ ನಾಯಿ 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿ ಕೂಡ ಆ ನಾಯಿಗೆ ಸಹಾಯ ಮಾಡಲು ಒಂದು ತಿಂಗಳು ದುಬೈನಲ್ಲಿಯೇ ಇದ್ದರು. ಅದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.

ಉಳಿದ 5 ತಿಂಗಳು ಅವರು ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಆ ನಾಯಿಯನ್ನು ಪರಿಶೀಲಿಸುತ್ತಲೇ ಇದ್ದರು. “ಸ್ಕೈ ನಮ್ಮ ಸಾಕುಪ್ರಾಣಿ ಮಾತ್ರವಲ್ಲ, ಅದು ನಮ್ಮ ಮಗುವಿನಂತೆ” ಎಂದು ಅವರು ಹೇಳಿದ್ದಾರೆ. ಆರು ತಿಂಗಳ ನಂತರ ಸ್ಕೈ ಆಸ್ಟ್ರೇಲಿಯಾಕ್ಕೆ ಹೋದಾಗ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾಯಿಯ ಹೈದರಾಬಾದ್ ನಿಂದ ಆಸ್ಟ್ರೇಲಿಯಾ ಪ್ರಯಾಣಕ್ಕೆ ವಿಮಾನ ಪ್ರಯಾಣ ಸೇರಿದಂತೆ ಸುಮಾರು 1.5 ಮಿಲಿಯನ್ ರೂ. ಖರ್ಚಾಗಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್