Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಇಂತಹ ಚಿತ್ರಗಳು ನಿಮ್ಮ ಬುದ್ಧಿವಂತಿಕೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುವಂತಿರುತ್ತವೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ಶ್ವಾನವನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ಶ್ವಾನವನ್ನು ಪತ್ತೆ ಹಚ್ಚಿದ್ರೆ ನೀವು ಬುದ್ಧಿವಂತರು ಎನ್ನುವುದು ತಿಳಿಯುತ್ತದೆ.

ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಸಮಯ ಕಳೆಯಲು ಇಂತಹ ಒಗಟುಗಳನ್ನು ಬಿಡಿಸುವುದು ಒಳ್ಳೆಯದು. ಹೆಚ್ಚಿನವರು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಎಲ್ಲರಿಗೂ ಉತ್ತರ ಕಂಡು ಕೊಳ್ಳುವುದು ಕಷ್ಟವಾಗಬಹುದು. ಈ ಒಗಟಿನ ಚಿತ್ರದಲ್ಲಿ ಶ್ವಾನವೊಂದು (dog) ಅಡಗಿ ಕುಳಿತಿದೆ. ಈ ನಿಷ್ಠಾವಂತ ಪ್ರಾಣಿಯನ್ನು ನೀವು ಐದು ಸೆಕೆಂಡುಗಳಲ್ಲಿ ಪತ್ತೆ ಹಚ್ಚುವ ಸವಾಲು ಇದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.
ಈ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಉದ್ಯಾನವನದ ಸುಂದರ ನೋಟ. ಇಲ್ಲಿ ಸಾಲಾಗಿ ಮರಗಳಿದ್ದು, ನೆಲೆದ ಮೇಲೆ ಒಣಗಿದ ಎಲೆಗಳ ರಾಶಿಯಿದೆ. ಆದರೆ ಈ ಸ್ಥಳದಲ್ಲಿ ಶ್ವಾನವೊಂದು ಅಡಗಿ ಕುಳಿತಿದ್ದು ಈ ಪ್ರಾಣಿಯನ್ನು ಹುಡುಕುವುದೇ ನಿಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಟ್ರಿಕ್ಕಿ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ: ಗಿಳಿಗಳ ನಡುವೆ ಅಡಗಿದೆ ಬಣ್ಣದ ಚಿಟ್ಟೆ; ಜಸ್ಟ್ 15 ಸೆಕೆಂಡುಗಳಲ್ಲಿ ಗುರುತಿಸಿ
ನಿಷ್ಠಾವಂತ ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿತೇ?
ಈ ಆಪ್ಟಿಕಲ್ ಇಲ್ಯೂಷನ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಹುಡುಕುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಕಣ್ಣಿಗೆ ಶ್ವಾನವು ಬಿದ್ದಿಲ್ಲವೇ. ನಾವೇ ನಿಮಗೆ ಉತ್ತರ ಹೇಳುತ್ತೇವೆ. ಒಣಗಿದ ಎಲೆಗಳ ಮೇಲೆ ಕುಳಿತಿರುವ ಶ್ವಾನವನ್ನು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
