
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಹೀಗಾಗಿ ಹೆಚ್ಚಿನವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಆಟಗಳನ್ನು ಆಡಲು ಇಷ್ಟ ಪಡುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರ ಜತೆಗೆ ನೀವು ಬುದ್ಧಿವಂತರು ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಕಣ್ಣನ್ನು ಮೋಸಗೊಳಿಸಿ ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಚಿತ್ರವೊಂದು ವೈರಲ್ ಆಗಿದೆ. ಈ ಹಚ್ಚಹಸಿರಾದ ಗಾರ್ಡನ್‌ನಲ್ಲಿ ಹೆಬ್ಬಾವು (python) ಅಡಗಿ ಕುಳಿತಿದೆ. ಜಸ್ಟ್ 10 ಸೆಕೆಂಡುಗಳ ಒಳಗೆ ನೀವು ಈ ಹೆಬ್ಬಾವನ್ನು ಕಂಡುಹಿಡಿದರೆ ನೀವು ಜಾಣರು ಎಂದರ್ಥ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಮೊದಲ ನೋಟದಲ್ಲೇ ನಿಮ್ಮನ್ನು ಸೆಳೆಯುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಹಚ್ಚ ಹಸಿರಾದ ಗಾರ್ಡನ್. ಬಣ್ಣ ಬಣ್ಣದ ಆಕರ್ಷಕ ಹೂವುಗಳು ಹಾಗೂ ಹಚ್ಚ ಹಸಿರಾದ ಹೂವಿನ ಗಿಡಗಳನ್ನು ನೀವಿಲ್ಲಿ ಕಾಣಬಹದು. ಈ ಹಚ್ಚಹಸಿರಿನಿಂದ ಆವೃತ್ತವಾದ ಆಕರ್ಷಕ ಹೂವಿರುವ ಈ ಗಾರ್ಡನ್ ನಲ್ಲಿ ಹೆಬ್ಬಾವೊಂದು ಅಡಗಿ ಕುಳಿತಿದೆ. ಇಲ್ಲಿರುವ ಸವಾಲು ಹೆಬ್ಬಾವು ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದಾಗಿದೆ. ಹೀಗಾಗಿ ನೀವು ಹತ್ತು ಸೆಕೆಂಡುಗಳಲ್ಲಿ ಹೆಬ್ಬಾವನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬಹುದು.
ಇದನ್ನೂ ಓದಿ:ಜನರ ಗುಂಪಿನಲ್ಲಿ ಮರೆಮಾಡಲಾಗಿರುವ ಬಟ್ಟಲನ್ನು ಹುಡುಕಿ ನೋಡೋಣ
ಆಲೋಚನಾ ಕೌಶಲ್ಯ ಹೆಚ್ಚಿಸಿ, ನಿಮ್ಮ ಮೆದುಳನ್ನು ಚುರುಕುಗೊಳಿಸುವಲ್ಲಿ ಈ ಒಗಟುಗಳು ಪ್ರಮುಖ ಪಾತ್ರವಹಿಸುತ್ತವೆ ಎನ್ನುವುದು ತಿಳಿದೇ ಇದೆ. ಆದರೆ ನಿಮಗೆ ಈ ಟ್ರಿಕ್ಕಿ ಒಗಟು ಬಿಡಿಸುವುದು ಕಷ್ಟವಾಗಬಹುದು. ಆದರೆ ಈ ಗಾರ್ಡನ್‌ನಲ್ಲಿ ಅಡಗಿರುವ ಹೆಬ್ಬಾವನ್ನು ಕಂಡುಹಿಡಿಯುಲು ಸಾಧ್ಯವಾಯಿತೇ. ಹಾಗಾದರೆ, ನೀವು ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಹೆಬ್ಬಾವು ಎಲ್ಲಿದೆ ಎಂದು ಹೇಳಲು ಪ್ರಯತ್ನಿಸಿ. ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಗದೇ ಇದ್ದಲ್ಲಿ, ನಾವೇ ನಿಮಗೆ ಹೆಬ್ಬಾವು ಎಲ್ಲಿದೆ ಎಂದು ತೋರಿಸುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಹೆಬ್ಬಾವು ಎಲ್ಲಿದೆ ಎಂದು ಗುರುತಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Sun, 23 November 25