Optical Illusion: ಜನರ ಗುಂಪಿನಲ್ಲಿ ಮರೆಮಾಡಲಾಗಿರುವ ಬಟ್ಟಲನ್ನು ಹುಡುಕಿ ನೋಡೋಣ
ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಹಾಗೂ ಒಗಟಿನ ಆಟಗಳು ಬಿಡಿಸುವುದರಲ್ಲಿ ಇರುವ ಖುಷಿಯೇ ಬೇರೆ. ಟ್ರಿಕ್ಕಿ ಹಾಗೂ ಮೆದುಳಿಗೆ ಕೈ ಹಾಕುವ ಬಹಳ ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಜನರ ಗುಂಪಿನ ನಡುವೆ ಇರುವ ಬಟ್ಟಲನ್ನು ಕಂಡುಹಿಡಿಯುವ ಸವಾಲನ್ನು ನೀಡಲಾಗಿದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ನಮ್ಮ ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸಗುವಂತಹದ್ದು. ಇದು ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮೋಜಿನ ಆಟಗಳನ್ನು ಆಡುವ ಖುಷಿಯೇ ಬೇರೆ. ಈ ಆಪ್ಟಿಕಲ್ ಇಲ್ಯೂಷನ್ ಅಂತಹ ಮೋಜಿನ ಆಟವಾಗಿದ್ದು, ಇದರಲ್ಲಿ ಗುಪ್ತ ವಸ್ತುಗಳನ್ನು ಕಂಡುಹಿಡಿಯುವುದೇ ಬಹುದೊಡ್ಡ ಸವಾಲು. ಇದೀಗ ಇಲ್ಲೊಂದು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವ ಫೋಟೋವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣದಂತೆ ಊಟ ಮಾಡುವ ಬಟ್ಟಲು ಅಥವಾ ಪ್ಲೇಟ್‌ನ್ನು ಜಾಣತನದಿಂದ ಮರೆಮಾಡಲಾಗಿದೆ. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 20 ಸೆಕೆಂಡುಗಳು ಮಾತ್ರ. ಸವಾಲಿನ ಚಿತ್ರಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.
ಈ ಚಿತ್ರದಲ್ಲಿ ಅಂತಹದ್ದು ಏನಿದೆ?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡಿ ಮೆದುಳಿಗೆ ಕೆಲಸವನ್ನು ನೀಡುತ್ತವೆ. ಕೆಲವೊಮ್ಮೆ ಇಂತಹ ಕಠಿಣ ಒಗಟಿನ ಚಿತ್ರವನ್ನು ಬಿಡಿಸುವುದೇ ಕಷ್ಟಕರ. ಎತ್ತಿನ ಗಾಡಿ, ಕಲ್ಲಂಗಡಿ ಹಣ್ಣಿನ ರಾಶಿಗಳು, ಮನೆಯ ಮುದ್ದಿನ ಸಾಕು ಪ್ರಾಣಿಗಳು ಹಾಗೂ ಜನರ ಗುಂಪುಗಳನ್ನು ಕಾಣಬಹುದು. ಆದರೆ ಈ ಜನರ ಗುಂಪಿನ ನಡುವೆ ಬಟ್ಟಲನ್ನು ಮರೆಮಾಡಲಾಗಿದೆ. ಹೀಗಾಗಿ ನೀವು ಈ ಚಿತ್ರದಲ್ಲಿ ಬಟ್ಟಲು ಎಲ್ಲಿದೆ ಎಂದು 20 ಸೆಕೆಂಡುಗಳೊಳಗೆ ಹೇಳಬೇಕು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೀವು ನೋಡಿ, ನಿಮ್ಮ ಮೆದುಳಿಗೆ ಈ ಕೂಡಲೇ ಕೆಲಸ ನೀಡಿ.
ಇದನ್ನೂ ಓದಿ:ಈ ಚಿತ್ರದಲ್ಲಿ ಯಾವ ಕಾರು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ ಹೇಳುವಿರಾ
ಬಟ್ಟಲನ್ನು ಕಂಡುಹಿಡಿಯಲು ಸಾಧ್ಯವಾಯಿತೇ?
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ, ನಮ್ಮ ಕಣ್ಣುಗಳು ಮೋಸ ಹೋಗುತ್ತಿವೆ ಎನ್ನುವುದು ಅರಿವಿಗೆ ಬರುತ್ತದೆ. ನೀವು ಯಾರೊಬ್ಬರ ಐಕ್ಯೂ ಪರೀಕ್ಷಿಸಲು ಬಯಸಿದರೆ, ಈ ಚಿತ್ರ ಆಯ್ಕೆಯು ಸೂಕ್ತವಾಗಿದೆ. ಇಂತಹ ಚಿತ್ರಗಳಲ್ಲಿ ಗುಪ್ತ ವಸ್ತುಗಳನ್ನು ಕಂಡು ಹಿಡಿಯುವುದು ಕಷ್ಟದಾಯಕ. ನೀವು ಎಷ್ಟೇ ಪ್ರಯತ್ನ ಪಟ್ಟರೂ ಇಪ್ಪತ್ತು ಸೆಕೆಂಡುಗಳಲ್ಲಿ ಬಟ್ಟಲು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ, ಹಾಗಾದ್ರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜನರ ಗುಂಪಿನ ನಡುವೆ ಬಟ್ಟಲು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ಬಟ್ಟಲು ಕಾಣಿಸಿತು, ನೀವು ಟೆನ್ಶನ್ ಫ್ರೀ ಆಗಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




