Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಕಣ್ಣು ಹಾಗೂ ಮೆದುಳು ಗ್ರಹಿಸುವುದಕ್ಕಿಂತ ವಿಭಿನ್ನವಾಗಿರುತ್ತದೆ. ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ಚಿತ್ರಗಳನ್ನು ಬಿಡಿಸಲು ಆಸಕ್ತಿ ತೋರಿಸುತ್ತಾರೆ. ಈ ಒಗಟಿನ ಚಿತ್ರಗಳು ನಿಮ್ಮ ಮೆದುಳು ಹಾಗೂ ಕಣ್ಣಿಗೆ ಕೆಲಸ ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದೀಗ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು ಇಲ್ಲಿ ನೀವು ಎರಡನೇ ವ್ಯಕ್ತಿಯನ್ನು 12 ಸೆಕೆಂಡುಗಳಲ್ಲಿ ಗುರುತಿಸಬೇಕು.

Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌

Updated on: Sep 19, 2025 | 4:18 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಟ್ರಿಕ್ಕಿ ಒಗಟಿನ ಚಿತ್ರಗಳು. ಇವುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಈ ಚಿತ್ರಗಳು ಯೋಚನಾ ಸಾಮರ್ಥ್ಯ, ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವಂತಿರುತ್ತದೆ. ಈ ರೀತಿಯ ಒಗಟುಗಳು ಟ್ರಿಕ್ಕಿಯಾಗಿ ಕಂಡರೂ, ತಲೆ ಕೆಡಿಸಿಕೊಳ್ಳುವಂತೆ ಇದ್ದರೂ ಅದನ್ನು ಬಿಡಿಸುವ ಮಜಾನೇ ಬೇರೆ. ನೀವು ಕೂಡ ಇಂತಹ ಒಗಟಿನ ಆಟವನ್ನು ಇಷ್ಟ ಪಡುತ್ತಿದ್ದರೆ , ಇದೀಗ ಕಠಿಣ ಸವಾಲಿನ ಒಗಟನ್ನು ಬಿಡಿಸಲು ಪ್ರಯತ್ನಿಸಿ. ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದ್ದು, ಎರಡನೇ ವ್ಯಕ್ತಿ ಎಲ್ಲಿದ್ದಾನೆ ಎಂದು ನೀವು ಹೇಳಬೇಕು. ಈ ಒಗಟು ಬಿಡಿಸಲು ಇರುವ ಕಾಲಾವಕಾಶ ಕೆಲವೇ ಹನ್ನೆರಡು ಸೆಕೆಂಡುಗಳು ಮಾತ್ರ, ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಈ ಭ್ರಮೆಯ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಸಹಜವಾಗಿ ನಿಮ್ಮ ಕಣ್ಣನ್ನು ಪರೀಕ್ಷಿಸುತ್ತದೆ. ಮೊದಲ ನೋಟದಲ್ಲಿ ನೀವು ಈ ಚಿತ್ರವನ್ನು ನೋಡಿದಾಗ ನಿಮಗೆ ಗಿಣಿಯನ್ನು ಭುಜದ ಮೇಲೆ ಕೂರಿಸಿಕೊಂಡಿರುವ ವ್ಯಕ್ತಿಯೊಬ್ಬನು ಕಾಣಿಸುತ್ತಾನೆ. ಆದರೆ ಉತ್ತಮ ವೀಕ್ಷಣಾ ಕೌಶಲ್ಯ ಹೊಂದಿದವರು ಮಾತ್ರ ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಲು ಸಾಧ್ಯ. ಈ ಒಗಟು ಬಿಡಿಸಲು ಇರುವ ನಿರ್ದಿಷ್ಟ ಸಮಯ ಹನ್ನೆರಡು ಸೆಕೆಂಡುಗಳು ಮಾತ್ರ, ಪ್ರಯತ್ನಿಸಿ ನೋಡಿ.

ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ?

ಆಪ್ಟಿಕಲ್‌ ಇಲ್ಯೂಷನ್‌ ನೋಡಿದ ತಕ್ಷಣ ನೀವು ಗೊಂದಲಕ್ಕೆ ಒಳಗಾಗುವುದು ಸಾಮಾನ್ಯ. ಈ ಪ್ರಾರಂಭದಲ್ಲಿ ನಿಮಗೆ ಈ ಒಗಟು ಬಿಡಿಸುವುದು ಕಷ್ಟಕರ ಎಂದೆನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಉತ್ತರ ಸುಲಭದಾಯಕವಾಗಿದೆ. ಆದರೆ ಈ ಚಿತ್ರವನ್ನು ಒತ್ತಡಕ್ಕೆ ಒಳಗಾಗದೇ ನೋಡುತ್ತಲೇ ಇರಿ. ಹನ್ನೆರಡು ಸೆಕೆಂಡುಗಳ ಒಳಗೆ ನೀವು ಎರಡನೇ ವ್ಯಕ್ತಿಯನ್ನು ಗುರುತಿಸಲು ಸಾಧ್ಯ. ನೀವು ಈ ಕಠಿಣ ಸವಾಲಿನ ಚಿತ್ರವನ್ನು ಬಿಡಿಸಲು ರೆಡಿ ಇದ್ದೀರಾ ಎಂದು ಭಾವಿಸುತ್ತೇವೆ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು 7 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಪುಟ್ಟ ಹಕ್ಕಿಯನ್ನು ಕಂಡುಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಹುಡುಕಿ ನೋಡೋಣ
ಈ ಚಿತ್ರದಲ್ಲಿ ಮರೆಮಾಡಿರುವ ಗಜರಾಜನನ್ನು ಹುಡುಕಬಲ್ಲಿರಾ?

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು 7 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೆ ಎರಡನೇ ವ್ಯಕ್ತಿ ಬಿದ್ದನೇ?

ನಿರ್ದಿಷ್ಟ ಸಮಯದೊಳಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎನ್ನುವುದು ಖಚಿತವಾಗುತ್ತದೆ. ನಿಮಗೆ ಉತ್ತರ ಕಂಡು ಕೊಳ್ಳಲು ಕೆಲವು ಸುಳಿವುಗಳನ್ನು ನೀಡುತ್ತೇವೆ. ಮುಖದಂತೆ ಕಾಣುವ ಪಕ್ಕದಲ್ಲಿನ ಆಕೃತಿಗಳನ್ನು ಗಮನಿಸಿ. ರೂಪುಗೊಳ್ಳುವ ರೇಖೆಗಳು, ಬಣ್ಣಗಳು ಹಾಗೂ ಬಾಹ್ಯರೇಖೆಗಳತ್ತ ಕಣ್ಣಾಯಿಸಿ. ಎರಡನೇ ವ್ಯಕ್ತಿ ನೆರಳಿನಲ್ಲಿ ಅಡಗಿಕೊಂಡಿರಬಹುದು. ಆದರೆ ಈ ಒಗಟನ್ನು ಬಿಡಿಸಲು ಸಾಧ್ಯವಾಗದೇ ಹೋದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಉತ್ತರವನ್ನು ನಾವು ಹಳದಿ ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Fri, 19 September 25