Optical Illusion: ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸ ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಇತ್ಯಾದಿ ಒಗಟಿನ ಆಟಗಳು ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟನ್ನು ಬಿಡಿಸುವುದು ಕಷ್ಟವಾದರೂ ಉತ್ತರ ಕಂಡುಕೊಂಡಾಗ ಆಗುವ ಖುಷಿಯೇ ಬೇರೆ. ಇದೀಗ ಇಲ್ಲೊಂದು ಬಹಳ ಕಷ್ಟಕರವಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದ್ದು, ಈ ಎರಡು ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

Optical Illusion: ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸ ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Dec 08, 2025 | 10:09 AM

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ದೃಷ್ಟಿ ಮತ್ತು ಬುದ್ಧಿಗೆ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಕಾರಿಯಾಗಿದೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟಗಳನ್ನು ಬಿಡಿಸುವಾಗ ಸಮಯ ಮೀರಿದ್ದೇ ತಿಳಿಯದು. ಇದೀಗ ನಿಮಗೆ ಸವಾಲೊಡ್ದುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಆಪ್ಟಿಕಲ್ ಭ್ರಮೆಯ ಈ ಎರಡು ಚಿತ್ರಗಳಲ್ಲಿನ ನಡುವೆ ಇರುವ ವ್ಯತ್ಯಾಸಗಳನ್ನು ಹತ್ತು ಸೆಕೆಂಡುಗಳೊಳಗೆ ಗುರುತಿಸಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾದರೆ ನೀವು ಉಳಿದವರಿಗಿಂತ ಬುದ್ದಿವಂತರು ಎಂದರ್ಥ.

ಈ ಚಿತ್ರವು ಏನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ನೋಡಲು ಸುಲಭವಾಗಿ ಕಂಡರೂ ಅದರಲ್ಲಿ ವಿಭಿನ್ನವಾದ ಸವಾಲು ಇರುತ್ತದೆ. ಈ ಚಿತ್ರದಲ್ಲಿ ಪುಟ್ಟ ಹುಡುಗಿಯೊಬ್ಬಳು ಬೀಚ್‌ನಲ್ಲಿ ನಿಂತು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದಾಳೆ. ಇಲ್ಲಿರುವ ಎರಡು ಫೋಟೋ ಒಂದೇ ಆಗಿದ್ದರೂ, ಈ ಫೋಟೋಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. ನೀವು 10 ಸೆಕೆಂಡುಗಳ ಒಳಗೆ ಆ ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ಮೆದುಳು ವೇಗವಾಗಿ ಕೆಲಸ ಮಾಡುತ್ತಿದೆ ಎಂದರ್ಥ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಹುಡುಕಿದ್ರೆ ನೀವು ಬುದ್ಧಿವಂತರು

ವ್ಯತ್ಯಾಸಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರು ಈ ಎರಡು ಚಿತ್ರಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇ. ನೀವು ಎರಡು ಚಿತ್ರಗಳನ್ನು ಬಹಳ ಎಚ್ಚರಿಕೆಯಿಂದ ನೋಡುವುದು ಮುಖ್ಯ. ಉತ್ತರ ಸಿಗಲಿಲ್ಲವೆಂದಾದರೆ ಚಿಂತಿಸಬೇಡಿ, ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ತೆಂಗಿನ ಮರದಲ್ಲಿ ತೆಂಗಿನಕಾಯಿ, ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿ, ನೆಲದ ಮೇಲೆ ಬಿದ್ದ ಚೆಂಡು ಈ ಮೂರನ್ನು ನೀವು ಮತ್ತೊಂದು ಫೋಟೋದಲ್ಲಿ ಕಾಣಲಾಗದು. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ