Optical Illusion: ಈ ಚಿತ್ರದಲ್ಲಿ ವ್ಯತ್ಯಾಸವಿರುವ ಸಿಂಹವನ್ನು ಪತ್ತೆಹಚ್ಚಬೇಕು; ಸವಾಲು ಸ್ವೀಕರಿಸುವಿರಾ?

| Updated By: Rakesh Nayak Manchi

Updated on: Jul 29, 2022 | 2:43 PM

ನಿಮ್ಮ ಮಿದುಳಿನ ಸಾಮರ್ಥ್ಯ ಮತ್ತು ಕಣ್ಣಿನ ಸೂಕ್ಷ್ಮತೆಯನ್ನು ಪರೀಕ್ಷಿಸಿಕೊಳ್ಳಲು ಇಲ್ಲೊಂದು ಆಪ್ಟಿಕಲ್ ಭ್ರಮೆ ಚಿತ್ರವಿದೆ. ಇದರಲ್ಲಿ ನೀವು ಬೆಸ ಸಿಂಹಿಣಿಯನ್ನು ಪತ್ತೆಹಚ್ಚಬೇಕು. ಸವಾಲು ಸ್ವೀಕರಿಸುವಿರಾ?

Optical Illusion: ಈ ಚಿತ್ರದಲ್ಲಿ ವ್ಯತ್ಯಾಸವಿರುವ ಸಿಂಹವನ್ನು ಪತ್ತೆಹಚ್ಚಬೇಕು; ಸವಾಲು ಸ್ವೀಕರಿಸುವಿರಾ?
ಸಾಂದರ್ಭಿಕ ಚಿತ್ರ
Image Credit source: depositphotos
Follow us on

ಕೆಲವು ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳು ಮಿದುಳಿನ ಕಸರತ್ತುಗಳಾಗಿದ್ದು, ಅವುಗಳು ನಿಮ್ಮ ತಲೆಯನ್ನು ಕೆಡೆಸಿಕೊಳ್ಳುವಂತೆ ಮಾಡುತ್ತದೆ. ಇಂತಹ ಚಿತ್ರಗಳು ನಿಮ್ಮ ಮಿದುಳಿನ ಸಾಮರ್ಥ್ಯವನ್ನು, ಕಣ್ಣಿನ ಸೂಕ್ಷ್ಮತೆಯನ್ನು ಪರೀಕ್ಷಿಸಿಕೊಳ್ಳಲು ಕೂಡ ಸಹಾಯಕವಾಗಲಿದೆ. ಈಗ ನಿಮ್ಮ ಮುಂದೆ ಒಂದು ಆಪ್ಟಿಕಲ್ ಭ್ರಮೆ ಚಿತ್ರವನ್ನು ಇಡುತ್ತಿದ್ದೇವೆ. ಈ ಚಿತ್ರದಲ್ಲಿ ಇರುವ ಬೆಸ ಸಿಂಹಿಣಿಯನ್ನು ಪತ್ತೆಹಚ್ಚಬೇಕು. ಇದಕ್ಕೆ ಸಮಯದ ಷರತ್ತು ಕೂಡ ಇದೆ. ಇತರವುಗಳಿಗೆ ಹೊಂದಿಕೆಯಾಗದ ಬೆಸ ಸಿಂಹಿಣಿಯನ್ನು 4 ನಿಮಿಷಗಳ ಒಳಗಾಗಿ ಪತ್ತೆಹಚ್ಚಬೇಕು. ಕೆಳಗೆ ನೀಡಲಾದ ಈ ಆಪ್ಟಿಕಲ್ ಭ್ರಮೆ ಚಿತ್ರವು ಸರಿಯಾಗಿ ಗಮನಿಸಿ ಸವಾಲನ್ನು ಗೆಲ್ಲಿ.

ಮೇಲಿನ ಚಿತ್ರವು ಅನೇಕ ಸಿಂಹಿಣಿಗಳನ್ನು ಫುಟ್ಬಾಲ್ ಆಟಗಾರನಂತೆ ಚಿತ್ರಿಸಲಾಗಿದೆ. ಕ್ಯಾಸುಮೊ ಹಂಚಿಕೊಂಡ ಈ ಚಿತ್ರದಲ್ಲಿ ಒಟ್ಟು 43 ಸಿಂಹಿಣಿಗಳಿವೆ ಮತ್ತು ಅವುಗಳಲ್ಲಿ ಬೆಸವನ್ನು ಕಂಡುಹಿಡಿಯುವುದು ಅಷ್ಟೊಂದು ಸುಲಭವಲ್ಲ. ಬೆಸ ಸಿಂಹಿಣಿಯನ್ನು ಅದರ ನೋಟ ಮತ್ತು ಗುಣಲಕ್ಷಣಗಳ ಮೇಲೆ ನಿರ್ಣಯಿಸಬೇಕು ಎಂದು ನಾವು ನಿಮಗೆ ಕೊಡುತ್ತಿರುವ ಒಂದು ಸುಳಿವು. ಬೆಸ ಸಿಂಹಿಣಿಯನ್ನು ಗುರುತಿಸಲು ಸರಾಸರಿ ವ್ಯಕ್ತಿ ಸುಮಾರು 5 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಾವು ನಿರೀಕ್ಷಿಸಿದಂತೆ ಒಬ್ಬ ವ್ಯಕ್ತಿಯು 4 ನಿಮಿಷಗಳ ಒಳಗಾಗಿ ಪತ್ತೆಹಚ್ಚಬೇಕು.

ಈಗ ನೀವು ಬೆಸ ಸಿಂಹಿಣಿಯನ್ನು ಕಂಡುಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ. ಅಲ್ಲದೆ ನಿಮ್ಮ ಸಾಮರ್ಥ್ಯಕ್ಕೆ ಹಾಗೂ ಚುರುಕು ಸೂಕ್ಷ್ಮತೆಗಾಗಿ ಅಭಿನಂದನೆಗಳು. ನೀವು ಈಗಲೂ ಬೆಸ ಸಿಂಹಿಣಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೇ? ಚಿಂತಿಸಬೇಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ. ಕೆಳಗಿನ ಸಾಲಿನಲ್ಲಿ ಕಿತ್ತಳೆ ಮೈಬಣ್ಣ ಮತ್ತು ಕೆಂಪು ಬಣ್ಣದ ಜೆರ್ಸಿ ಹಾಕಿರುವ ಸಿಂಹಿಣಿಯೇ ನಿಜವಾದ ಉತ್ತರ.

 

ಸರಿಯಾಗಿ ಗಮನಿಸಿ ಉಳಿದ ಸಿಂಹಿಣಿಗಳ ಮೈಗೊಂದು ಬಣ್ಣ, ಜೆರ್ಸಿಗೊಂದು ಬಣ್ಣ, ಬಾಲಕ್ಕೊಂದು ಬಣ್ಣ, ಮುಖಕ್ಕೊಂದು ಬಣ್ಣ ಸೇರಿದಂತೆ ವಿವಿಧ ಬಣ್ಣಗಳಿಂದ ಕೂಡಿವೆ. ಉತ್ತರವಾಗಿರುವ ಸಿಂಹಿಣಿಯ ಬಾಲ ಸಹಿತ ಮೈಬಣ್ಣ ಮತ್ತು ಜೆರ್ಸಿ ಎರಡು ಬಣ್ಣಗಳಿಂದ ಮಾತ್ರ ಕೂಡಿದೆ.

Published On - 1:42 pm, Fri, 29 July 22