Viral Video: ಪ್ರಥಮ ಚಿಕಿತ್ಸೆ ಮೂಲಕ ಉಸಿರುಗಟ್ಟಿದ ತನ್ನ ಮರಿಯ ಜೀವ ಉಳಿಸಿದ ಕೋತಿ ತಾಯಿ; ವಿಡಿಯೋ ವೈರಲ್ ಆಗಿದೆ
ಉಸಿರುಗಟ್ಟಿದ ತನ್ನ ಮಗುವನ್ನು ಕೋತಿಯೊಂದು ಕಿಬ್ಬೊಟ್ಟೆಯನ್ನು ಒತ್ತುವ ಮೂಲಕ ಜೀವ ಉಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರಾಣಿಗಳಿಗೆ ಮಾತು ಬರುವುದಿಲ್ಲ ಎಂಬುದನ್ನೊಂದು ಬಿಟ್ಟರೆ ಅವುಗಳಿಗೆ ಬುದ್ಧಿ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಕಷ್ಟಕಾಲದಲ್ಲಿ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಅದೆಷ್ಟೋ ಬಾರಿ ಪ್ರಾಣಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸುವುದನ್ನು ನೋಡಿದ್ದೇವೆ. ಹಾಗೆಂದು ಮಂಗನ ಬುದ್ಧಿವಂತಿಕೆ ಇದರಿಂದ ಹೊರತಾಗಿಲ್ಲ. ಮಕ್ಕಳು ಏನಾದರು ವಸ್ತುವನ್ನು ನುಂಗಿ ಗಂಟಲಿನಲ್ಲಿಯೋ ಅಥವಾ ಶ್ವಾಸಕೋಶದಲ್ಲಿಯೋ ಸಿಕ್ಕಿಹಾಕಿಕೊಂಡಾಗ ಹೇಗೆ ತಾಯಿ ಪ್ರಾರ್ಥಮಿಕ ಚಿಕಿತ್ಸೆ ನೀಡುತ್ತಾಳೋ ಅದೇ ರೀತಿ ಕೋತಿಯೊಂದು ನೀಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. ಇದನ್ನು ನೋಡಿದರೆ ನೀವು ಮಂಗನ ಬುದ್ಧಿಯನ್ನು ಶ್ಲಾಘಿಸುತ್ತೀರಿ. ಕೋತಿಮರಿಯೊಂದು ವಸ್ತುವನ್ನು ನುಂಗಿದ ಪರಿಣಾಮವಾಗಿ ಉಸಿರಿನ ಸಮಸ್ಯೆಯನ್ನು ಅನುಭವಿಸಲು ಪ್ರಾರಂಭಿಸಿದೆ. ಜೀವದ ಅಪಾಯದಲ್ಲಿದ್ದ ತನ್ನ ಮಗುವಿನ ಕಿಬ್ಬೊಟ್ಟೆಯನ್ನು ಒತ್ತಿ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರಹಾಕುವ ಮೂಲಕ ತಾಯಿ ಕೋತಿಯು ಪ್ರಾಣವನ್ನು ಉಳಿಸುವುದನ್ನು ವಿಡಿಯೋ ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಕೋತಿಮರಿ ಬೀಜದಂತಿರುವ ವಸ್ತುವನ್ನು ನುಂಗಿದೆ. ಪರಿಣಾಮವಾಗಿ ಆ ವಸ್ತು ಶ್ವಾಸಕೋಶದ ಬಳಿ ನಿಂತು ಉಸಿರುಗಟ್ಟಿಸಿದೆ. ಕೂಡಲೇ ಎಚ್ಚೆತ್ತ ಮರಿಯ ತಾಯಿ, ಕಿಬ್ಬೊಟ್ಟೆಯನ್ನು ಒತ್ತುವ ಮೂಲಕ ಸಿಕ್ಕಿಹಾಕಿಕೊಂಡ ವಸ್ತುವನ್ನು ಹೊರಹಾಕಿದೆ.
ಈ ವಿಡಿಯೋವನ್ನು ಫಿಗೆನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹೀಮ್ಲಿಚ್ ಮ್ಯಾನುವೆರ್ ಮೂಲಕ ತನ್ನ ಮಗುವನ್ನು ರಕ್ಷಿಸಿದ ತಾಯಿ ಕೋತಿ” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದು 2.9 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 64 ಸಾವಿರಕ್ಕೂ ಹೆಚ್ಚು ಲೈಕ್ಗಳು, 9ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳು ಆಗಿವೆ.
A mother monkey who saves her baby with the Heimlich Maneuver…. ?❤️pic.twitter.com/Hv4C6EAxcv
— Figen (@TheFigen) July 25, 2022
ವ್ಯಕ್ತಿಯ ಶ್ವಾಸನಾಳದಿಂದ ಅಡಚಣೆಯನ್ನು ಹೊರಹಾಕುವ ಒಂದು ಪ್ರಥಮ ಚಿಕಿತ್ಸಾ ವಿಧಾನವೇ ಹೀಮ್ಲಿಚ್ ಮ್ಯಾನುವೆರ್. ಈ ಚಿಕಿತ್ಸಾ ವಿಧಾನದ ಮೂಲಕ ಹೊಕ್ಕುಳ ಮತ್ತು ಪಕ್ಕೆಲುಬಿನ ನಡುವೆ ಅವರ ಹೊಟ್ಟೆಯ ಮೇಲೆ ಹಠಾತ್ ಬಲವಾದ ಒತ್ತಡವನ್ನು ಹಾಕಲಾಗುತ್ತದೆ. ತನ್ನ ಮರಿಗೆ ಕೋತಿ ಮಾಡಿದ್ದು ಕೂಡ ಇದೇ ವಿಧಾನವನ್ನು.
Published On - 11:52 am, Fri, 29 July 22