Viral Video: ಒಂದು ವರ್ಷದ ಬಾಲೆಯ ಮೇಲೆ ರಾಕ್ಷಸಿ ಕೃತ್ಯ ಎಸಗಿದ ಪಾಪಿ ತಾಯಿ; ವಿಡಿಯೋಗಳು ವೈರಲ್
ರಾಕ್ಷಸಿ ಪ್ರವೃತ್ತಿ ಹೊಂದಿರುವ ತಾಯಿಯೊಬ್ಬಳು ತನ್ನ 1 ವರ್ಷದ ಮಗಳನ್ನು ಜೌಗು ಪ್ರದೇಶಕ್ಕೆ ಎಸೆದಿದ್ದಲ್ಲದೆ ಅಂಗಳದಲ್ಲಿ ಚಪ್ಪಲಿಯಿಂದ ಮನಸೋ ಇಚ್ಛೆ ಥಳಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಪ್ರಕರಣ ಸಂಬಂಧ ಮಹಿಳೆ ವಿರುದ್ಧ ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈರಲ್ ವಿಡಿಯೋ: ಹೆತ್ತ ತಾಯಿ ದೇವರಿಗೆ ಸಮ, ತಾಯಿಯೇ ದೇವರು ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ಸತ್ಯ. ಆದರೆ ಕೆಲವು ತಾಯಂದಿರು ರಾಕ್ಷಸಿ ಪ್ರವೃತ್ತಿ ಹೊಂದಿರುತ್ತಾರೆ. ಮಕ್ಕಳಿಗೆ ಮನಬಂದಂತೆ ಥಳಿಸುವುದು, ಚಿತ್ರಹಿಂಸೆ ನೀಡುವುದು, ಹತ್ಯೆ ಮಾಡುವುದು, ಕೋಪದಿಂದ ಎಸೆಯುವುದು ಇತ್ಯಾದಿ ಹೇಯ ಕೃತ್ಯಗಳನ್ನು ಎಸಗುವ ವಿಡಿಯೋಗಳನ್ನು ನೋಡಿದ್ದೀರಿ. ಇದೀಗ ಅಂತಹದ್ದೇ ಒಂದು ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನಿಮ್ಮ ಬಾಯಲ್ಲಿ ಅಯ್ಯೋ ದೇವರೇ… ಇವಳೆಂಥ ತಾಯಿ? ಎಂದು ಹೇಳದೆ ಇರಲಾರರು. ಅಷ್ಟಕ್ಕೂ ರಾಕ್ಷಸಿ ಮನಸ್ಥಿತಿಯ ಆ ತಾಯಿ ತನ್ನ ಸಣ್ಣ ಮಗುವನ್ನು ಜೌಗು ಪ್ರದೇಶಕ್ಕೆ ಎಸೆಯುತ್ತಾಳೆ. ನಂತರ ಅಂಗಳದಲ್ಲಿ ಚಪ್ಪಲಿಯಿಂದ ಮನಬಂದಂತೆ ರಪಾ ರಪಾ ಅಂತ ಥಳಿಸುವುದನ್ನು ವೈರಲ್ ವಿಡಿಯೋಗಳು (Viral Videos) ತೋರಿಸುತ್ತವೆ.
ಉತ್ತರಪ್ರದೇಶದ ಹಾಪುರ್ ಬಳಿ ಮಹಿಳೆಯೊಬ್ಬರು ತನ್ನ 1 ವರ್ಷದ ಮಗಳ ಮೇಲೆ ಹಲ್ಲೆ ನಡೆಸಿದ್ದು, ಇದರ ಎರಡು ವಿಡಿಯೋ ಕ್ಲಿಪ್ಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊದಲ ವಿಡಿಯೋದಲ್ಲಿ ಮಗುವನ್ನು ಜೌಗು ಪ್ರದೇಶಕ್ಕೆ ಎಸೆಯುತ್ತಾಳೆ. ಎರಡನೇ ಕ್ಲಿಪ್ನಲ್ಲಿ ಮಗು ಕಾಂಕ್ರೀಟ್ ನೆಲದ ಮೇಲೆ ತೆವಳುತ್ತಿರುವಾ ಮಹಿಳೆಯು ಚಪ್ಪಳಿಯಿಂದ ಮನಸೋ ಇಚ್ಛೆ ಥಳಿಸುವುದನ್ನು ಕಾಣಬಹುದು.
ಈ ವಿಡಿಯೋಗಳು ಜಸ್ರೂಪ್ ನಗರ ಗ್ರಾಮದಿಂದ ಬಂದಿದ್ದು, ಸಾಮಾನ್ಯವಾಗಿ ಸ್ಥಳೀಯ ಸುದ್ದಿಗಳನ್ನು ಹೊಂದಿರುವ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಾಗ ಗಮನಕ್ಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 (ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಯನ್ನು ಸಬ್ಇನ್ಸ್ಪೆಕ್ಟರ್ಗೆ ವಹಿಸಲಾಗಿದೆ.
Published On - 10:00 am, Fri, 29 July 22