ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಆಟಗಳು ನಮ್ಮ ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತವೆ. ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟಗಳನ್ನು ಆಡಲು ಅನೇಕ ಜನರು ಇಷ್ಟಪಡುತ್ತಾರೆ. ಈ ಮೋಜಿನ ಆಟಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮವನ್ನು ಸಹ ನೀಡುತ್ತದೆ. ಇದೀಗ ಇಲ್ಲೊಂದು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವ ಫೋಟೋವೊಂದು ವೈರಲ್ ಆಗಿದ್ದು, ಕಪ್ಪು ಬಿಳುಪಿನ ಗೆರೆಗಳಿರುವ ಈ ಫೋಟೋದಲ್ಲಿ ಯಾವ ಪ್ರಾಣಿ ಅಡಗಿದೆ ಎಂದು ಹುಡುಕಾಡಿ ಎಂದು ಚಾಲೆಂಜ್ ಎಸೆಯಲಾಗಿದೆ. ಕೇವಲ 15 ಸೆಕೆಂಡುಗಳ ಒಳಗೆ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕಲು ಸಾಧ್ಯವೇ ಎಂಬುದನ್ನು ಟ್ರೈ ಮಾಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡಿ ಮೆದುಳಿಗೆ ಕೆಲಸವನ್ನು ನೀಡುತ್ತವೆ. ಚಿತ್ರದಲ್ಲಿ ಏನೋ ಇದ್ದರೂ ಇಲ್ಲದಂತೆ ತೋರಿ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇದೀಗ ಅಂತಹದ್ದೇ ಸವಾಲಿನ ಫೋಟೋವೊಂದು ವೈರಲ್ ಆಗಿದ್ದು, ಕಪ್ಪು ಬಿಳುಪಿನ ಅಂಕುಡೊಂಕಾದ ಗೆರೆಗಳ ಮಧ್ಯೆ ಅಡಗಿರುವ ಪ್ರಾಣಿ ಯಾವುದೆಂಬುದನ್ನು ಹುಡುಕಲು ಸವಾಲು ನೀಡಲಾಗಿದೆ.
ಕಪ್ಪು ಮತ್ತು ಬಿಳುಪಿನ ಅಂಕುಡೊಂಕಾದ ಗೆರೆಗಳಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ, ಅದರಲ್ಲಿ ಪ್ರಾಣಿ ಅಡಗಿದೆ. ಕೇವಲ 15 ಸೆಕೆಂಡುಗಳಲ್ಲಿ ನೀವು ಆ ಪ್ರಾಣಿ ಯಾವುದೆಂದು ಕಂಡು ಹಿಡಿಯಬೇಕು.
ಇದನ್ನೂ ಓದಿ: ಕಡಿಮೆ ಬೆಲೆಗೆ ಸ್ಟೈಲಿಶ್ ಕಾರು ಹುಡುಕುತ್ತಿದ್ದೀರಾ?: ಇಲ್ಲಿದೆ 8 ಲಕ್ಷದೊಳಗಿನ ಕಾರುಗಳು
ಎಷ್ಟೇ ಪ್ರಯತ್ನಿಸಿದರೂ ತಲೆ ನೋವು ಬರುತ್ತಿದೆಯೇ ಹೊರತು ಉತ್ತರ ಸಿಗುತ್ತಿಲ್ಲ ಎಂದು ಯೋಚಿಸುತ್ತಿರುವವರಿಗೆ ಒಂದು ಸುಳಿವು ಇಲ್ಲಿದೆ, ಅದೇನೆಂದರೆ ಪ್ರಾಣಿಯನ್ನು ಪತ್ತೆಹಚ್ಚಲು ಆ ಚಿತ್ರವನ್ನು ಮೇಲಕ್ಕೆ, ಕೆಳಕ್ಕೆ ಸರಿಸಲು ಪ್ರಯತ್ನಿಸಿ ಆಗ ನಿಮಗೆ ಚಿತ್ರದಲ್ಲಿ ಅಡಗಿರುವ ʼಗೊರಿಲ್ಲಾʼ ಕಾಣಿಸುತ್ತದೆ.
ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ