ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಬ್ಬರು ಹೆಂಡತಿಯರು; ವಿಚಿತ್ರ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗ್ರಾಮವೊಂದರಲ್ಲಿ ಅನೇಕ ತಲೆಮಾರುಗಳಿಂದ ಎರಡು ಮದುವೆಯ ಸಂಪ್ರದಾಯ ನಡೆಯುತ್ತಿದೆ. ಈ ಸಂಪ್ರದಾಯವು ಪುರುಷರಲ್ಲಿ ಸಾಮಾನ್ಯವಾಗಿದ್ದರೂ, ಇಲ್ಲಿನ ಮಹಿಳೆಯರೂ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಮಹಿಳೆಯರು ತಮ್ಮ ಪತಿ ಹಾಗೂ ಅವರ ಎರಡನೇ ಪತ್ನಿಯನ್ನು ಕುಟುಂಬದ ಭಾಗವಾಗಿ ಪರಿಗಣಿಸುತ್ತಾರೆ.

ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಬ್ಬರು ಹೆಂಡತಿಯರು; ವಿಚಿತ್ರ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ
Follow us
|

Updated on: Nov 06, 2024 | 5:42 PM

ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಂಪ್ರದಾಯಗಳಿವೆ. ಅದೇ ರೀತಿ, ಮದುವೆಗೆ ಸಂಬಂಧಿಸಿದ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗ್ರಾಮವೊಂದರ ವಿಚಿತ್ರ ಸಂಪ್ರದಾಯ ಸದ್ಯ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನಿಗೂ ಇಬ್ಬರು ಮಹಿಳೆಯರನ್ನು ಮದುವೆಯಾಗುವ ಹಕ್ಕಿದೆ. ಇದಲ್ಲದೇ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ.

ಈ ಸಂಪ್ರದಾಯವು ವಿಚಿತ್ರವೆನಿಸಬಹುದು, ಆದರೆ ಇಲ್ಲಿನ ಸ್ಥಳೀಯ ಜನರು ಇದನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ವಾಸ್ತವವಾಗಿ, ರಾಮದೇವ್ ಕಿ ಬಸ್ತಿ ಎಂಬುದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಒಂದು ಹಳ್ಳಿಯ ಹೆಸರು, ಇಲ್ಲಿ ಅನೇಕ ತಲೆಮಾರುಗಳಿಂದ ಎರಡು ಮದುವೆಯ ಸಂಪ್ರದಾಯ ನಡೆಯುತ್ತಿದೆ. ಇಲ್ಲಿನ ಜನರು ತಮ್ಮ ಸಂಪ್ರದಾಯಗಳನ್ನು ಬಹಳ ಹೆಮ್ಮೆಯಿಂದ ಅನುಸರಿಸುತ್ತಾರೆ. ಆದ್ದರಿಂದಲೇ ಗಂಡನ ಎರಡನೇ ಮದುವೆಗೆ ಮೊದಲ ಹೆಂಡತಿಯಿಂದ ಯಾವುದೇ ವಿರೋಧವಿರುವುದಿಲ್ಲ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಾಮದೇವರ ಬಸ್ತಿ ಗ್ರಾಮದ ಜನರು ಯಾವುದೇ ಪುರುಷನ ಮೊದಲ ಹೆಂಡತಿ ಎಂದಿಗೂ ಗರ್ಭಧರಿಸಲು ಸಾಧ್ಯವಿಲ್ಲ ಎಂದು ನಂಬುತ್ತಾರೆ. ಹೇಗಾದರೂ ಮಾಡಿ ಗರ್ಭಧರಿಸುವಲ್ಲಿ ಯಶಸ್ವಿಯಾದರೂ ಆಕೆಗೆ ಪುತ್ರಿಯೇ ಹೊರತು ಪುತ್ರನಾಗುವುದಿಲ್ಲ. ಇದರಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ, ಇದರಿಂದ ಅವರ ಕುಟುಂಬದಲ್ಲಿ ಮಗ ಹುಟ್ಟುತ್ತಾನೆ. ಆದಾಗ್ಯೂ, ಇಂದಿನ ಹೊಸ ಮತ್ತು ವಿದ್ಯಾವಂತ ಪೀಳಿಗೆಯು ಈ ಸಂಪ್ರದಾಯವನ್ನು ಸಂಪೂರ್ಣವಾಗಿ ಸರಿಯಾಗಿ ಪರಿಗಣಿಸುವುದಿಲ್ಲ.

ಇದನ್ನೂ ಓದಿ: ಮದುವೆಯಾಗುವ ಹುಡುಗ ಮತದಾನ ಮಾಡಲ್ಲ ಎಂದು ಹೇಳಿದ್ದಕ್ಕೆ ನಿಶ್ಚಿತಾರ್ಥ ಬೇಡ ಎಂದ ಯುವತಿ

ಇದಲ್ಲದೇ, ಕಾಲಕಾಲಕ್ಕೆ ಈ ಪ್ರದೇಶದಲ್ಲಿ ಪುರುಷರ ಸಂಖ್ಯೆ ಕಡಿಮೆಯಾಗಿರುವುದು, ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಲು ಎರಡು ಮದುವೆಗಳು ನಡೆದಿರುವುದು ಈ ಸಂಪ್ರದಾಯದ ಹಿಂದಿನ ಕಾರಣಗಳಲ್ಲಿ ಒಂದು ಎಂದು ಕೆಲವರು ವಾದಿಸುತ್ತಾರೆ.

ಈ ಸಂಪ್ರದಾಯವು ಪುರುಷರಲ್ಲಿ ಸಾಮಾನ್ಯವಾಗಿದ್ದರೂ, ಇಲ್ಲಿನ ಮಹಿಳೆಯರೂ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಮಹಿಳೆಯರು ತಮ್ಮ ಪತಿ ಹಾಗೂ ಅವರ ಎರಡನೇ ಪತ್ನಿಯನ್ನು ಕುಟುಂಬದ ಭಾಗವಾಗಿ ಪರಿಗಣಿಸುತ್ತಾರೆ. ಅನೇಕ ಬಾರಿ ಮೊದಲ ಹೆಂಡತಿಯೇ ತನ್ನ ಪತಿಗೆ ಎರಡನೇ ಹೆಂಡತಿಯನ್ನು ಆಯ್ಕೆ ಮಾಡುತ್ತಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಕ್ಫ್ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲ ಜಾತಿಗಳಿಗೆ ಸೇರಿದ್ದು: ಯತ್ನಾಳ್
ವಕ್ಫ್ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲ ಜಾತಿಗಳಿಗೆ ಸೇರಿದ್ದು: ಯತ್ನಾಳ್
ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ
ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ