Optical Illusions: ಹುಡುಗನ ಒಂದು ಶೂ ಕಳೆದುಹೋಗಿದೆ; ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ?

ಕೆಳಗೆ ನೀಡಲಾದ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ, ಹುಡುಗನ ಒಂದು ಶೂ ಕಾಣೆಯಾಗಿದೆ. ಶೂ ಅವನ ಕೋಣೆಯಲ್ಲಿ ಎಲ್ಲೋ ಮೂಲೆಯಲ್ಲಿ ಬಿದ್ದಿದೆ. ಕೇವಲ 7 ಸೆಕೆಂಡುಗಳಲ್ಲಿ ಶೂ ಹುಡುಕಿಕೊಡಲು ನಿಮ್ಮಿಂದ ಸಾಧ್ಯವೇ? ಸಾಧ್ಯವಾಗಿಲ್ಲವೆಂದಾದರೆ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusions: ಹುಡುಗನ ಒಂದು ಶೂ ಕಳೆದುಹೋಗಿದೆ; ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ?
To find the boy's missing shoe
Image Credit source: Bright Side

Updated on: Feb 14, 2024 | 7:00 PM

ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲು ಕಷ್ಟಕರವಾಗಿದ್ದು, ಶೇ.2ರಷ್ಟು ಮಂದಿ ಮಾತ್ರ ಉತ್ತರವನ್ನು ಕಂಡು ಹಿಡಿಯಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಕಣ್ಣುಗಳೂ ನಮ್ಮನ್ನು ಮೋಸಗೊಳಿಸುತ್ತವೆ. ಸದ್ಯ ಇಂತಹ ಆಪ್ಟಿಕಲ್ ಇಲ್ಯೂಷನ್ ಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರವನ್ನು ನೀವು ಸರಿಯಾಗಿ ಗಮನಿಸಿದರೆ ಒಂದು ಶೂ ಎಲ್ಲೋ ಮೂಲೆಯಲ್ಲಿ ಬಿದ್ದಿರುವುದನ್ನು ನೀವು ಪತ್ತೆ ಹಚ್ಚಬಹುದು. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಕೇವಲ 7 ಸೆಕೆಂಡ್ ಗಳ ಒಳಗೆ ಈ ಚಿತ್ರದಲ್ಲಿ ಅಡಗಿರುವ ಶೂ ಕಂಡುಹಿಡಿಯಬಲ್ಲಿರಾ?

ಈಗ ಮೇಲೆ ಕೊಟ್ಟಿರುವ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಮಗು ಆಟವಾಡಲು ಹೊರಗೆ ಹೋಗಬೇಕು, ಆದರೆ ಅವನ ಒಂದು ಶೂ ಕಾಣೆಯಾಗಿದೆ. ಶೂ ತನ್ನ ಕೋಣೆಯಲ್ಲಿ ಎಲ್ಲೋ ಬಿದ್ದಿದೆ. ಮನೆಯೊಳಗೆ ಸಾಕಷ್ಟು ಆಟಿಕೆ ಹಾಗೂ ಸಾಮಾನುಗಳನ್ನು ಹರಡಿಕೊಂಡಿರುವುದನ್ನು ನೀವು ಕಾಣಬಹುದು.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

7 ಸೆಕೆಂಡುಗಳಲ್ಲಿ ಕಾಣೆಯಾದ ಶೂ ಅನ್ನು ನೀವು ಕಂಡುಕೊಂಡರೆ, ನಿಮ್ಮ ದೃಷ್ಟಿ ತುಂಬಾ ತೀಕ್ಷ್ಣವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಚಿತ್ರ ಸಾಕಷ್ಟು ಸಿಂಪಲ್​​ ಎಂದೆನಿಸಿದರೂ ಕೂಡ ಉತ್ತರವನ್ನು ಕಂಡುಹುಡುಕುವುದು ಅಷ್ಟು ಸುಲಭವಲ್ಲ. ಹಾಗಿದ್ದರೆ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದ ವೃತ್ತಗಳಲ್ಲಿ ಹುಡುಗನ ಕಳೆದುಹೋಗಿರುವ ಶೂವನ್ನು ಗುರುತಿಸಲಾಗಿದೆ. ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ