Viral Video: ಪ್ರಾಣಿಗಳೇ ಗುಣದಲಿ ಮೇಲು; ಹುಲಿರಾಯನ ಸ್ವಚ್ಛತಾ ಅಭಿಯಾನ ಹೇಗಿದೆ ನೋಡಿ
ಪರಿಸರ ಸಂರಕ್ಷಣೆ ಮಾಡಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಸರ್ಕಾರಗಳು ಅನೇಕ ಯೋಜನೆಗಳನ್ನು ತಂದು ಜಾಗೃತಿ ಮೂಡಿಸಿದರೂ, ಮನುಷ್ಯ ಮಾತ್ರ ಜಾಣ ಕಿವುಡನಂತೆ ವರ್ತಿಸುತ್ತಿದ್ದಾನೆ. ಎಲ್ಲೆಂದರಲ್ಲಿ ಕಸಕಡ್ಡಿಗಳು ಬಿಸಾಡುತ್ತಿದ್ದಾನೆ. ಆದರೆ ಇಲ್ಲೊಂದು ಹುಲಿರಾಯ ಮಾಡಿರುವ ಕಾರ್ಯ ಇಂತಹವರಿಗೆ ಪಾಠ ಕಲಿಸುವಂತಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಲಿಯ ಈ ಬುದ್ಧಿವಂತಿಕೆ ಮತ್ತು ಪರಿಸರ ಕಾಳಜಿಗೆ ಹ್ಯಾಟ್ಸಾಫ್ ಹೇಳಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
ಮನುಜನಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂದು ಹೇಳುತ್ತಾರೆ. ಕೆಲವೊಂದು ನಿದರ್ಶನಗಳನ್ನು ನೋಡಿದಾಗ ಈ ಮಾತು ಅಕ್ಷರಶಃ ನಿಜವೆಂದು ಭಾಸವಾಗುತ್ತೆ ಅಲ್ವಾ. ಹೌದು ಪ್ರಾಣಿಗಳಿಗಿರುವ ಒಳ್ಳೆಯ ಗುಣ, ಮುಗ್ಧತೆ, ಬುದ್ಧಿವಂತಿಕೆ, ಮಾನವೀಯತೆ ಮಾನವನಲ್ಲಿ ತುಸು ಕಡಿಮೆಯೇ ಇದೆ. ಬುದ್ಧಿವಂತ ಜೀವಿ ಎಂದೆನಿಸಿಕೊಂಡಿರುವ, ವಿದ್ಯಾವಂತರಾಗಿರುವ ಮಾನವರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬದಲು ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸುವ ವಿಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನುಷ್ಯರಾದ ನಾವೆಲ್ಲರೂ ಎಲ್ಲೆಂದರಲ್ಲಿ ಕಸಗಳನ್ನು ಎಸೆದುಬಿಟ್ಟು ಹೋಗುತ್ತೇವೆ. ಆದರೆ ಇಲ್ಲೊಂದು ಹುಲಿರಾಯ ಕೆರೆ ನೀರಿನಲ್ಲಿ ಬಿದ್ದಂತಹ ಕಸವನ್ನು ಸ್ವಚ್ಛಗೊಳಿಸುವಂತಹ ಕಾರ್ಯವನ್ನು ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಲಿರಾಯ ಪ್ರವಾಸಿಗರು ಕೆರೆಗೆ ಎಸೆದಂತಹ ಪ್ಲಾಸ್ಟಿಕ್ ಬಾಟಲಿಯೊಂದನ್ನು ಬಾಯಲ್ಲಿ ಕಚ್ಚಿ ಎತ್ತಿಕೊಂಡು ಬರುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದೆ. ಈ ವಿಡಿಯೋ ತುಣುಕನ್ನು IFS ಸುಸಾಂತ ನಂದ (@susantananda3) ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ (ಅ)ನಾಗರಿಕರು ಎಸೆಯುವಂತಹ ಕಸವನ್ನು ಪ್ರಾಣಿಗಳು ಏಕೆ ಸ್ವಚ್ಛಗೊಳಿಸಬೇಕು, ದಯವಿಟ್ಟು ಅರಣ್ಯ ಪ್ರದೇಶಗಳಿಗೆ ಹೋಗುವಾಗ ಪ್ಲಾಸ್ಟಿಕ್ ಗಳನ್ನು ಕೊಂಡೊಯ್ಯುವುದನ್ನು ನಿಲ್ಲಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
&nbs
Why should the wild clean the garbage of the (un)civilised 😞😞 Please stop carrying plastics & styrofoams into the wilderness🙏
(Credit it the clip) pic.twitter.com/fSTekEYe5f
— Susanta Nanda (@susantananda3) February 14, 2024
ವೈರಲ್ ವಿಡಿಯೋದಲ್ಲಿ ಯಾವುದೋ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಕೆರೆ ನೀರಿನಲ್ಲಿ ಎಸೆದುಹೋದಂತಹ ಪ್ಲಾಸ್ಟಿಕ್ ಬಾಟಲಿಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಂಡು ಬರುವ ಮೂಲಕ ಹುಲಿಯೊಂದು ಕೆರೆ ನೀರನ್ನು ಸ್ವಚ್ಛಗೊಳಿಸುವಂತಹ ಕಾರ್ಯವನ್ನು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ
ಫೆಬ್ರವರಿ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಾವು ಮನುಷ್ಯರು ಎಂದಿಗೂ ಸುಧಾರಿಸುವಂತೆ ಕಾಣುತ್ತಿಲ್ಲ, ಅರಣ್ಯ ಪ್ರದೇಶಗಳಲ್ಲೂ ಪ್ಲಾಸ್ಟಿಕ್ ಬಳಕೆ ಮಾಡುವ ಅವಶ್ಯಕತೆಯಿತ್ತೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರವಾಸಿಗರಿಗೆ ಅರಣ್ಯ ಪ್ರದೇಶದೊಳಗೆ ಕಸಗಳನ್ನು ಎಸೆಯಬೇಡಿ ಎಂದು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತರಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಾನವರು ಜವಬ್ದಾರಿಯಿಂದ ವರ್ತಿಸಬೇಕು ಮತ್ತು ಕಸಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕುʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ʼಪ್ರಾಣಿಗಳಲ್ಲಿರುವ ಒಳ್ಳೆಯ ಗುಣ, ಮೌಲ್ಯ ವಿದ್ಯಾವಂತರೆನಿಸಿಕೊಂಡಿರುವ ಮಾನವರಲ್ಲಿ ಇಲ್ಲʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ