AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಸ್ಟ್​​​ ನೈಟ್​​ಗೆ ವಯಾಗ್ರ ತೆಗೆದುಕೊಂಡ ವರ! ವಧು ಸಾವು -ಸಂತ್ರಸ್ತೆ ಸ್ಥಿತಿ ಗ್ಯಾಂಗ್ ರೇಪ್‌ನಷ್ಟು ಕೆಟ್ಟದಾಗಿತ್ತು ಎಂದ ವೈದ್ಯರು

Viagra for First Night: ಸಂತ್ರಸ್ತೆಯ ಸ್ಥಿತಿ ಗ್ಯಾಂಗ್ ರೇಪ್‌ನಷ್ಟು ಕೆಟ್ಟದಾಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತರ ಸಂಬಂಧಿಕರು ಈಗಾಗಲೇ ಉತ್ತರ ಪ್ರದೇಶದ ಹಮೀರ್‌ಪುರ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಇದನ್ನು ತಿಳಿದ ವರ ತನ್ನ ಹೆತ್ತವರೊಂದಿಗೆ ಪರಾರಿಯಾಗಿದ್ದನು.

ಫಸ್ಟ್​​​ ನೈಟ್​​ಗೆ ವಯಾಗ್ರ ತೆಗೆದುಕೊಂಡ ವರ! ವಧು ಸಾವು -ಸಂತ್ರಸ್ತೆ ಸ್ಥಿತಿ ಗ್ಯಾಂಗ್ ರೇಪ್‌ನಷ್ಟು ಕೆಟ್ಟದಾಗಿತ್ತು ಎಂದ ವೈದ್ಯರು
ಫಸ್ಟ್​​​ನೈಟ್​​ಗೆ ವಯಾಗ್ರ ತೆಗೆದುಕೊಂಡ ವರ, ವಧು ಸಾವು
ಸಾಧು ಶ್ರೀನಾಥ್​
|

Updated on:Feb 15, 2024 | 12:58 PM

Share

ಹಲವು ಕನಸುಗಳಿಂದ ತುಂಬಿದ್ದ ಅವಳ ಮೊದಲ ರಾತ್ರಿ ಕರಾಳ ರಾತ್ರಿಯಾಯಿತು. ಪತಿಯ ಆರ್ಭಟದ ಚಟುವಟಿಕೆಗೆ ಬಲಿಯಾದಳು. ಮೊದಲ ರಾತ್ರಿ, ಪತಿ ಮಹಾಶಯ ವಯಾಗ್ರ ಮಾತ್ರೆ ಬಳಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. ವಿವೇಚನೆಯಿಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ ಯುವಕ ಆಕೆಯ ಪ್ರಾಣವನ್ನೇ ತೆಗೆದಿದ್ದಾನೆ. 3 ದಿನಗಳ ಕಾಲ ತೀವ್ರ ರಕ್ತಸ್ರಾವ ಹಾಗೂ ಸೋಂಕಿನಿಂದ ಬಳಲುತ್ತಿದ್ದ ಸಂತ್ರಸ್ತೆ ಕೊನೆಗೂ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದೆ.

ಹಮೀರ್‌ಪುರದ ಎಂಜಿನಿಯರ್ ಫೆಬ್ರವರಿ 3 ರಂದು ವಿವಾಹವಾದರು. ಫಸ್ಟ್ ನೈಟ್ ಗಾಗಿ ವರ ವಯಾಗ್ರ ಮಾತ್ರೆ ತೆಗೆದುಕೊಂಡಿದ್ದ. ಇದರಿಂದಾಗಿ ಆಕೆಯ ಖಾಸಗಿ ಭಾಗಗಳಿಗೆ ಗಂಭೀರ ಗಾಯ, ರಕ್ತಸ್ರಾವ ಹಾಗೂ ತೀವ್ರ ಸೋಂಕು ತಗುಲಿ ಅಸ್ವಸ್ಥಳಾದಳು. ನಂತರ ಅವಳ ಆರೋಗ್ಯ ತೀವ್ರವಾಗಿ ಹದಗೆಟ್ಟಿತು.

ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ

ತಕ್ಷಣ ಕಾನ್ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಲಾಗಿತ್ತು. ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರೂ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ನವ ವಧುವನ್ನು ಫೆಬ್ರವರಿ 7 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ವಿಫಲವಾದ ಕಾರಣ ಅವರು ಫೆಬ್ರವರಿ 10 ರ ಶನಿವಾರದಂದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂತ್ರಸ್ತೆಯ ಸ್ಥಿತಿ ಗ್ಯಾಂಗ್ ರೇಪ್‌ನಷ್ಟು ಕೆಟ್ಟದಾಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತರ ಸಂಬಂಧಿಕರು ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಪತಿ ಹಾಗೂ ಕುಟುಂಬದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನು ತಿಳಿದ ವರ ತನ್ನ ಹೆತ್ತವರೊಂದಿಗೆ ಪರಾರಿಯಾಗಿದ್ದನು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Thu, 15 February 24