AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಚಿತ್ರದಲ್ಲಿ ಭಿನ್ನವಾಗಿರುವ ಒಂದು ಸೇಬು ಹಣ್ಣನ್ನು ಗುರುತಿಸಬಲ್ಲಿರಾ?

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ಒಂದೇ ಒಂದು ಭಿನ್ನವಾಗಿರುವ ಸೇಬು ಹಣ್ಣನ್ನು ನೀವು ಗುರುತಿಸಬೇಕಿದೆ. ಅಷ್ಟೂ ಸೇಬು ಹಣ್ಣುಗಳ ಮಧ್ಯೆ ಭಿನ್ನವಾಗಿರುವ ಒಂದು ಸೇಬು ಹಣ್ಣನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ? ಸಾಧ್ಯವಾಗಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusion: ಚಿತ್ರದಲ್ಲಿ ಭಿನ್ನವಾಗಿರುವ ಒಂದು ಸೇಬು ಹಣ್ಣನ್ನು ಗುರುತಿಸಬಲ್ಲಿರಾ?
Find the Odd Apple
ಅಕ್ಷತಾ ವರ್ಕಾಡಿ
|

Updated on: Feb 13, 2024 | 11:00 AM

Share

ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ನಿಮಗೆ ಚಿತ್ರವನ್ನು ಮೊದಲು ನೋಡಿದಾಗ ಎಲ್ಲ ಸೇಬು ಹಣ್ಣು ಒಂದೇ ರೀತಿ ಇರುವಂತೆ ಕಾಣಿಸುತ್ತಿರಬಹುದು. ಆದರೆ ಈ ಚಿತ್ರವನ್ನು ನೀವು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಭಿನ್ನ ಸೇಬು ಹಣ್ಣನ್ನು ಪತ್ತೆ ಹಚ್ಚಲು ಸಾಧ್ಯ. ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಮೂರೇ ಸೆಕೆಂಡುಗಳಲ್ಲಿ ಭಿನ್ನವಾಗಿರುವ ಸೇಬು ಹಣ್ಣನ್ನು ಪತ್ತೆ ಹಚ್ಚಬಹುದು. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಪತ್ತೆ ಹಚ್ಚಿ ನೋಡೋಣ.

ಈ ಸವಾಲಿನ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ಮೇಲೆ ನೀಡಿರುವ ಚಿತ್ರದಲ್ಲಿ ಸಾಕಷ್ಟು ಸೇಬು ಹಣ್ಣುಗಳನ್ನು ಕಾಣಬಹುದು. ಆದರೆ ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಒಂದೇ ಒಂದು ಭಿನ್ನವಾಗಿರುವುದನ್ನು ಪತ್ತೆಹಚ್ಚಬಹುದು. ಇದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಮೆದುಳನ್ನು ಚುರುಕುಗೊಳಿಸಲು ಸಹಾಯಕವಾಗಿದೆ.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ಇನ್ನೂ ನಿಮಗೆ ಭಿನ್ನವಾಗಿರುವ ಸೇಬು ಹಣ್ಣು ಹುಡುಕಲು ಕಷ್ಟವಾಗುತ್ತಿದೆಯೇ? ಚಿತ್ರವನ್ನು ಸರಿಯಾಗಿ ನೋಡಿ. ಚಿತ್ರ ಸಾಕಷ್ಟು ಸಿಂಪಲ್​​ ಎಂದೆನಿಸಿದರೂ ಕೂಡ ಉತ್ತರವನ್ನು ಕಂಡುಹುಡುಕುವುದು ಅಷ್ಟು ಸುಲಭವಲ್ಲ. ಹಾಗಿದ್ದರೆ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದ ವೃತ್ತಗಳಲ್ಲಿ ಭಿನ್ನವಾಗಿರುವ ಸೇಬು ಹಣ್ಣನ್ನು ಗುರುತಿಸಲಾಗಿದೆ.ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಉತ್ತರ ಇಲ್ಲಿದೆ ನೋಡಿ:

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್