ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ

|

Updated on: Jan 26, 2024 | 4:42 PM

ನೃತ್ಯಗಾರ್ತಿಯ ಪ್ರಾಣಕ್ಕೆ ಕಂಟಕವಾಯಿತು ಒಂದು ಕುಕ್ಕೀಸ್. ​​​​ತಪ್ಪಾಗಿ ಲೇಬಲ್ ಮಾಡಲಾದ ಕುಕೀಸ್ ಸೇವಿಸಿ ತೀವ್ರವಾದ ಅಲರ್ಜಿಗೆ ಒಳಗಾಗಿದ್ದ ನೃತ್ಯಗಾರ್ತಿ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾರೆ.

ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ
Orla Baxendale
Image Credit source: instagram/Orla Baxendale
Follow us on

ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ವೃತ್ತಿಪರ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್(25) ಅವರ ಸಾವು ಅಭಿಮಾನಿಗಳಲ್ಲಿ ಶಾಕ್​​ ಉಂಟು ಮಾಡಿದೆ. ತೀವ್ರವಾದ ಅಲರ್ಜಿದಿಂದ ಕೋಮಾಗೆ ಹೋಗಿದ್ದ ಓರ್ಲಾ ಜನವರಿ 11 ರಂದು ಇಹಲೋಕ ತ್ಯಜಿಸಿದ್ದಾರೆ. ಈ ನೃತ್ಯಗಾರ್ತಿಯ ಪ್ರಾಣಕ್ಕೆ ಕಂಟಕವಾಯಿತು ಒಂದು ಕುಕ್ಕೀಸ್. ​​​​ತಪ್ಪಾಗಿ ಲೇಬಲ್ ಮಾಡಲಾದ ಕುಕೀಸ್ ಸೇವಿಸಿ ತೀವ್ರವಾದ ಅಲರ್ಜಿಗೆ ಒಳಗಾಗಿದ್ದ ನೃತ್ಯಗಾರ್ತಿ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾರೆ.

ಸಾವಿಗೆ ಅಲರ್ಜಿಗೆ ಹೇಗೆ ಕಾರಣ?

ಚರ್ಮದ ಅಲರ್ಜಿಯ ಹೊರತಾಗಿ ಜಗತ್ತಿನಲ್ಲಿ ನಾನಾ ರೀತಿಯ ಅಲರ್ಜಿ ಇದೆ. ಕೆಲವರಿಗೆ ಧೂಳು ಅಲರ್ಜಿಯನ್ನು ಉಂಟು ಮಾಡಿದರೆ, ಇನ್ನು ಕೆಲವರಿಗೆ ಆಹಾರ ಅಲರ್ಜಿಯನ್ನುಂಟು ಮಾಡುತ್ತದೆ.ಈ ಅಲರ್ಜಿಯೇ ಕೆಲವರ ಪ್ರಾಣ ತೆಗೆದ ಉದಾಹರಣೆ ಇದೆ. ಇದೀಗಾ ಕಡಲೆ ಕಾಯಿಯ ಅಲರ್ಜಿಯನ್ನು ಹೊಂದಿದ್ದ ಓರ್ಲಾ ಬ್ಯಾಕ್ಸೆಂಡೇಲ್ ಕುಕ್ಕೀಸ್​​​ ಬಾಕ್ಸ್​​​ನಲ್ಲಿ ಕಡಲೆಕಾಯಿ ಸೇರಿಸಿರುವುದರ ಬಗ್ಗೆ ನಮೂದಿಸಿರದ ಕಾರಣ ಅದನ್ನು ಆಕೆ ಸೇವಿಸಿದ್ದಾಳೆ. ಇದು ಆಕೆಯ ಪ್ರಾಣಕ್ಕೆ ಕಂಟಕವಾಗಿದೆ.

ಇದನ್ನೂ ಓದಿ: ಮದುವೆ ಮಂಟಪದಿಂದಲೇ ನವದಂಪತಿಗಳು ಸೇರಿ 37 ಅತಿಥಿಗಳು ಆಸ್ಪತ್ರೆಗೆ ದಾಖಲು

“ಒರ್ಲಾ ತಿನ್ನುವ ಎಲ್ಲದರ ಬಗ್ಗೆ ಬಹಳ ಜಾಗರೂಕರಾಗಿದ್ದರು. ಯಾವಾಗಲೂ ಎಲ್ಲಾ ಪ್ಯಾಕೇಜಿಂಗ್‌ಗಳಲ್ಲಿನ ಪದಾರ್ಥಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದರು. ಆದರೆ ವೆನಿಲ್ಲಾ ಫ್ಲೋರೆಂಟೈನ್ ಕುಕೀಸ್​​​​ಗಳಲ್ಲಿ ಕಡಲೆಕಾಯಿ ಇದೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಅವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಕಾರಣ ಸಾವಿಗೆ ಕಾರಣವಾಗಿದೆ ಎಂದು ಆಕೆಯ ವಕೀಲರು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:41 pm, Fri, 26 January 24