Viral Video: ಲಾಹೋರ್​ನ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಉಷ್ಟ್ರ ಪಕ್ಷಿ; ವಿಡಿಯೊ ವೈರಲ್

| Updated By: shruti hegde

Updated on: Oct 28, 2021 | 10:55 AM

ಲಾಹೋರ್​ನ ಹೆದ್ದಾರಿ ಮಧ್ಯೆ ಉಷ್ಟ್ರ ಪಕ್ಷಿಯೊಂದು ಓಡುತ್ತಿರುವುದು ಕಂಡು ಬಂದಿದೆ. ಸುತ್ತಲೂ ವಾಹನಗಳೆಲ್ಲ ಸಂಚರಿಸುತ್ತಿದೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ಲಾಹೋರ್​ನ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಉಷ್ಟ್ರ ಪಕ್ಷಿ; ವಿಡಿಯೊ ವೈರಲ್
ಉಷ್ಟ್ರ ಪಕ್ಷಿ
Follow us on

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಆಶ್ಚರ್ಯವನ್ನುಂಟು ಮಾಡುವ ದೃಶ್ಯದ ವಿಡಿಯೊಗಳು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಉಷ್ಟ್ರ ಪಕ್ಷಿ ಲಾಹೋರ್​ನ ಹೆದ್ದಾರಿಯಲ್ಲಿ ಓಡಾಡುತ್ತಿತ್ತು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಲಾಹೋರ್​ನ ಹೆದ್ದಾರಿ ಮಧ್ಯೆ ಉಷ್ಟ್ರ ಪಕ್ಷಿಯೊಂದು ಓಡುತ್ತಿರುವುದು ಕಂಡು ಬಂದಿದೆ. ಸುತ್ತಲೂ ವಾಹನಗಳೆಲ್ಲ ಸಂಚರಿಸುತ್ತಿದೆ. ಅದೇ ವೇಳೆ ಉಷ್ಟ್ರಪಕ್ಷಿಯೂ ಸಹ ಓಡುತ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ಪ್ರಯಾಣಸುತ್ತಿದ್ದ ಪ್ರಯಾಣಿಕರು ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ವರದಿಗಳ ಪ್ರಕಾರ ಲಾಹೋರ್​ನ ಕೆನಾಲ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮಾರು 80,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಉಷ್ಟ್ರ ಪಕ್ಷಿಯನ್ನು ವಿಡಿಯೊದಲ್ಲಿ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜನದಟ್ಟಣೆಯ ಮಧ್ಯದಲ್ಲಿ ಚುರುಕುತನದಿಂದ ಪಕ್ಷಿ ಓಡುತ್ತಿದೆ ಎಂದು ಓರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Viral Video: ರೆಸ್ಟೋರೆಂಟ್​ನಲ್ಲಿ ಮಾಸ್ಕ್ ಧರಿಸದಿದ್ದರೆ ಪ್ರವೇಶವಿಲ್ಲ ಎಂದಿದ್ದಕ್ಕೆ ಜಗಳ; ವಯಸ್ಕನನ್ನು ತಳ್ಳಿದ ವ್ಯಕ್ತಿಯ ಪರಿಸ್ಥಿತಿ ಏನಾಯ್ತು ನೋಡಿ

Published On - 10:54 am, Thu, 28 October 21