Video: ತಪ್ಪಿಸಿಕೊಂಡ ಅಪರಾಧಿಯನ್ನು ಹಿಡಿಯಲು ತಪ್ಪಾದ ಮನೆ ಪ್ರವೇಶಿಸಿದ ಮಾರ್ಷಲ್ಗಳು; ಹೆದರಿ ಕಂಗಾಲಾಗಿ ಮಗುವನ್ನು ಬಿಗಿದಪ್ಪಿ ಹಿಡಿದ ತಾಯಿ
ತಪ್ಪಾದ ಮನೆಗೆ ನುಗ್ಗಿದ ಮಾರ್ಷಲ್ಗಳು ತಾಯಿ ಮತ್ತು ಪುಟ್ಟ ಮಗುವನ್ನು ಗನ್ ಪಾಯಿಂಟ್ನಲ್ಲಿ ಹಿಡಿಟ್ಟಿದ್ದರು. ಹೆದರಿ ಕಂಗಾಲಾದ ತಾಯಿ, ಮಗುವನ್ನು ಬಿಗಿದಪ್ಪಿ ಹಿಡಿದು ನಿಂತಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಪ್ಪಿಸಿಕೊಂಡ ಅಪರಾಧಿಯನ್ನು ಹುಡುಕಲು ಮಾರ್ಷಲ್ಗಳು ಅಪಾರ್ಟ್ಮೆಂಟ್ಗಳಿಗೆ ನುಗ್ಗುವ ದೃಶ್ಯಗಳನ್ನು ನೀವು ಈ ಹಿಂದೆ ನೋಡಿರಬಹುದು. ಏತನ್ಮಧ್ಯೆ ತಪ್ಪಾದ ಮನೆ ಮೇಲೆ ದಾಳಿ ನಡೆಸಿ ಅಮಾಯಕರನ್ನು ಗನ್ ಪಾಯಿಂಟ್ನಲ್ಲಿ ಹಿಡಿದಿಟ್ಟುಕೊಳ್ಳುವ ಹಲವಾರು ದೃಶ್ಯಗಳಿವೆ. ಇತ್ತೀಚೆಗೆ ಫ್ಲೋರಿಡಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ತಪ್ಪಾದ ಮನೆಗೆ ನುಗ್ಗಿದ ಮಾರ್ಷಲ್ಗಳು ಗನ್ ಪಾಯಿಂಟ್ನಲ್ಲಿ ತಾಯಿ ಮತ್ತು ಪುಟ್ಟ ಮಗುವನ್ನು ಹಿಡಿದಿಟ್ಟಿದ್ದರು. ಹೆದರಿ ಕಂಗಾಲಾದ ತಾಯಿ, ಮಗುವನ್ನು ಬಿಗಿದಪ್ಪಿ ಹಿಡಿದು ನಿಂತಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಕ್ಟೋಬರ್ 22ರಂದು ಘಟನೆ ನಡೆದಿದ್ದು, ತಾಯಿ 3 ತಿಂಗಳ ಪುಟ್ಟ ಮಗುವನ್ನು ಮಲಗಿಸುತ್ತಾ ತಾನೂ ನಿದ್ರೆಗೆ ಜಾರಿದ್ದಳು. ಈ ವೇಳೆ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆದಿದೆ. ಮನೆ ಬಾಗಿಲೆದುರು ನಿಂತಿದ್ದ ಮಾರ್ಷಲ್ಗಳು ಗನ್ ಪಾಯಿಂಟ್ನಿಂದ ತಾಯಿ ಮಗುವನ್ನು ಹಿಡಿದಿಟ್ಟಿದ್ದರು. 22 ವರ್ಷದ ಮಹಿಳೆ ಕಂಗಾಲಾಗಿ ನಿಂತಿದ್ದ ದೃಶ್ಯ ಇದೀಗ ವೈರಲ್ ಆಗಿದೆ. ಶಸ್ತ್ರಸಜ್ಜಿತ ಮಾರ್ಷಲ್ಗಳು ಮಹಿಳೆಯ ಮನೆಯ ಬಾಗಿಲ ಎದುರು ಬಂದರು. ಮಹಿಳೆಯನ್ನು ಹೊರ ಬರುವಂತೆ ಹೇಳಿದರು. ಹೊರಗೆ ಬಾ ಎಂದು ಮಾರ್ಷಲ್ಗಳು ಹೇಳುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಮಹಿಳೆ, ಮಾರ್ಷಲ್ಗಳ ಆದೇಶದಂತೆ ಮನೆಯೊಳಗಿದ್ದ ನಾಯಿಯನ್ನು ಪಂಜರದೊಳಗೆ ಇರಿಸಿ ಮನೆಯ ಬಾಗಿಲನ್ನು ತೆರೆದಳು. ತಕ್ಷಣವೇ ಮಾರ್ಷಲ್ಗಳು ಮನೆಯೊಳಗೆ ನುಗ್ಗಿದರು. ಬಂದಿದ್ದ 7 ಮಾರ್ಷಲ್ಗಳು ಬಂದೂಕುಗಳನ್ನು ಹಿಡಿದಿದ್ದರು. ಅವರು ನನ್ನನ್ನು ಹೊರಗೆ ತಳ್ಳಿದರು, ಮಗುವನ್ನು ಮತ್ತು ನಾನು ನಿಂತಿದ್ದಾಗ ಗನ್ ಪಾಯಿಂಟ್ನಿಂದ ಹಿಡಿದಿಟ್ಟಿದ್ದರು. ನನಗೆ ತುಂಬಾ ಭಯವಾಗಿತ್ತು. ಏಕೆಂದರೆ ಒಟ್ಟು 7 ರಿಂದ 8 ಜನರಲ್ಲಿ ಅಷ್ಟೂ ಜನ ಬಂದೂಕುಗಳನ್ನು ಹಿಡಿದು ನಿಂತಿದ್ದರು ಎಂದು ಮಹಿಳೆ ಹೇಳಿದ್ದಾರೆ.
ಮಾರ್ಷಲ್ಗಳು ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರಿಯುವ ಮುನ್ನವೇ ಗನ್ ಪಾಇಂಟ್ನಿಂದ ಹಿಡಿದಿಟ್ಟಿದ್ದರು, ಆ ಬಳಿಕ ಅವರಲ್ಲಿ ಓರ್ವರು ತಪ್ಪು ಅಪಾರ್ಟ್ಮೆಂಟ್ ತಪ್ಪು ಅಪಾರ್ಟ್ಮೆಂಟ್ ಎಂದು ಹೇಳುತ್ತಿರುವುದು ಕೇಳಿಸಿದೆ. ಸುಮಾರು ಒಂದು ಗಂಟೆಯ ಬಳಿಕ ಅಪಾರ್ಟ್ಮೆಂಟ್ನಿಂದ ಅವರೆಲ್ಲಾರೂ ಹೊರ ಹೋದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ ನಡೆದ ಕೊಲೆಯ ನಂತರ ವಾರೆಂಟ್ನಲ್ಲಿ ಶಮರ್ ಜಾನ್ಸರ್ಗಾಗಿ ಹುಡುಕುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:
Shocking Video: ಬಕೆಟ್ನಲ್ಲಿ ನೀರು ಹಿಡಿದು ದೈತ್ಯ ನಾಗರ ಹಾವಿನ ತಲೆಯ ಮೇಲೆ ಸುರಿದ ಭೂಪ! ವಿಡಿಯೋ ನೋಡಿ
Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ 8 ತಿಂಗಳ ಗರ್ಭಿಣಿ