ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?

|

Updated on: May 20, 2021 | 11:10 AM

ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ.

ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ವಾಸ್ಕೋಡಿಗಾಮ
Follow us on

ದೆಹಲಿ: ಇವತ್ತಿಗೆ ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್​ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್​ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್​ಗೆ ತಲುಪಿದನು. ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ.

ಭಾರತವನ್ನು ವಾಸ್ಕೋಡಿಗಾಮನಿಗಿಂತ ಮೊದಲು ಅನೇಕರು ಹುಡುಕಲು ಪ್ರಯತ್ನಿಸಿದ್ದರು. ಆದರೆ ಯಾರೂ ಕೂಡ ಯಶಸ್ವಿಯಾಗಿರಲಿಲ್ಲ. ಭಾರತ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿ ಹೊಂದಿತ್ತು. ಈ ಮೂಲಕ ಅನೇಕ ದೇಶಗಳು ಆಮದು ಮಾಡಿಕೊಳ್ಳಲು ಭಾರತಕ್ಕೆ ಬರುತ್ತಿದ್ದರು. ಯುರೋಪ್​ ಮತ್ತು ಭಾರತದ ನಡುವೆ ಸಮುದ್ರಯಾನದ ಮೂಲಕ ಸಂಚರಿಸಿ ಮಾರ್ಗ ಕಂಡು ಹಿಡಿದ ಮೊದಲಿಗ ವಾಸ್ಕೋಡಿಗಾಮ .

ಕ್ರಿಸ್ಟೋಫರ್​ ಕೊಲಂಬಸ್​ 1492ರಲ್ಲಿ ಪ್ರಯಾಣವನ್ನು ಕೈಗೊಂಡಿದ್ದ. ಅದಾದ 5 ವರ್ಷದ ಬಳಿಕ ವಾಸ್ಕೋಡಿಗಾಮ ಪ್ರಯಾಣ ಕೈಗೊಂಡನು. ಆದರೆ, ಭಾರತದ ಮಾರ್ಗ ಕಂಡುಹಿಡಿಯುವ ಉದ್ದೇಶದಿಂದ ಸಂಚಾರ ಕೈಗೊಂಡಿದ್ದು ಮೊದಲು ಕಂಡು ಹಿಡಿದ ದೇಶ ಅಮೇರಿಕಾ.

ಸಮುದ್ರಯಾನ ಪ್ರಯಾಣ ಕೈಗೊಂಡ ಸಮಯದಲ್ಲಿ ವಾಸ್ಕೋಡಿಗಾಮ ನೌಕಾಪಡೆ ಕ್ರಿಸ್​ಮಸ್​ದಿನದಂದು ನಟಾಲ್​ ತೀರವನ್ನು ತಲುಪಿತು. ವಿವಿಧ ನದಿಗಳನ್ನು ದಾಟಿ ಮೊಜಾಂಬಿಕ್​ ಎಂಬ ದ್ವೀಪದಲ್ಲಿ ನೌಕಾಪಡೆ ಸೇರಿತು. ಅಲ್ಲೇ ಒಂದು ತಿಂಗಳ ಕಾಲ ನೆಲೆಸಿದರು.

ಮೊಜಾಂಬಿಕ್​ನಲ್ಲಿ ನೆಲೆಸಿದ್ದ ಒಂದು ತಿಂಗಳ ಕಾಲದಲ್ಲಿ ವಾಸ್ಕೋಡಿಗಾಮ ಅರಬ್ಬರ ಜೊತೆಗಿನ ತಮ್ಮ ವಾಣಿಜ್ಯ ಸಂಪರ್ಕವನ್ನು ಪ್ರಾರಂಭಿಸಿದನು. ಚಿನ್ನ, ಬೆಳ್ಳಿ ಮತ್ತು ಸಾಂಬಾರು ಪದಾರ್ಥದ ವ್ಯಾಪಾರದ ಕುರಿತಾಗಿ ತಿಳಿದುಕೊಂಡನು. ಈ ಮೂಲಕ ವಾಸ್ಕೋಡಿಗಾಮ ಭಾರತಕ್ಕೆ ಹೋಗಬಹುದು ಎಂಬ ಭರವಸೆ ಹೊಂದಿದನು. 1598 ಏಪ್ರಿಲ್​ 7ರಂದು ಮೊಂಬಾಸಾಕ್ಕೆ (ಈಗಿನ ಕೀನ್ಯಾ) ತಲುಪಿ ಗುಜರಾತಿ ಪೈಲೆಟ್​ ಓರ್ವರನ್ನು ಭೇಟಿ ಮಾಡಿದನು.

ಗುಜರಾತಿ ಪೈಲೆಟ್​ ಸಹಾಯದಿಂದ 20 ದಿನಗಳ ಕಾಲ ಸಂಚರಿಸಿ ಭಾರತದ ಮಾರ್ಗದೆಡೆಗೆ ಪ್ರಯಾಣ ಬೆಳೆಸಿದನು. 1498 ಮೇ 17ರಂದು ಭಾರತವನ್ನು ತಲುಪಿದ ಮೊದಲ ಯುರೋಪಿಯನ್​ ನಾವಿಕ ವಾಸ್ಕೋಡಿಗಾಮ.

ಭಾರತದಿಂದ ಪೋರ್ಚುಗಲ್​ಗೆ ಸಂಬಾರ ಪದಾರ್ಥ ಮತ್ತು ರೇಷ್ಮೆಯನ್ನು ಖರೀದಿಸಿ ಪುನಃ ಪೋರ್ಚುಗಲ್​ಗೆ ಹಿಂತಿರುಗಿದನು. ಭಾರತಕ್ಕೆ ಮೂರನೇ ಪ್ರಯಾಣ ಕೈಗೊಂಡ ಸಮಯದಲ್ಲಿ 1524ರ ಸಂದರ್ಭದಲ್ಲಿ ವಾಸ್ಕೋಡಾಗಾಮಾ ಸಾವಿಗೀಡಾದರು.