ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಪಾಯಕಾರಿ ರೀತಿಯಲ್ಲಿ ವ್ಯಾಪಿಸುತ್ತಿದ್ದು ಇಡೀ ದೇಶವನ್ನೇ ಮತ್ತೊಮ್ಮೆ ಆತಂಕದ ಸುಳಿಗೆ ಸಿಲುಕಿಸಿದೆ. ಮೊದಲ ಅಲೆಗಿಂತಲೂ ಈ ಬಾರಿ ಹೆಚ್ಚು ಗಂಭೀರ ಸ್ವರೂಪಕ್ಕೆ ತಿರುಗಿರುವ ಕೊರೊನಾ ಸೋಂಕು ಆರೋಗ್ಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ಆಸ್ಟ್ರಾಜೆನಕಾ ಲಸಿಕೆ ಪೂರೈಕೆ ಮಾಡುವುದಾಗಿ ಯುಎಸ್ ಚೇಂಬರ್ ಆಫ್ ಕಾಮರ್ಸ್ ಬೆಂಬಲವನ್ನೂ ಸೂಚಿಸಿದೆ. ಇನ್ನೂ ಅಚ್ಚರಿಯ ವಿಚಾರವೆಂದರೆ ಭಾರತ ಸಂಕಷ್ಟಕ್ಕೆ ಸಿಲುಕಿರುವುದಕ್ಕೆ ನೆರೆಯ ಪಾಕಿಸ್ತಾನದಲ್ಲಿ #PakistanstandswithIndia ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
ಭಾರತ ಇಂತಹ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ನೆರೆಯ ರಾಷ್ಟ್ರವಾಗಿ ಪಾಕಿಸ್ತಾನ ಕಾಳಜಿ ತೋರಿಸುತ್ತಿರುವುದಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಮತ್ತು ಪಾಕಿಸ್ತಾನ ವೈರಿ ರಾಷ್ಟ್ರಗಳೆಂದೇ ಬಿಂಬಿಸಲ್ಪಟ್ಟಿದ್ದರೂ ಈ ಹೊತ್ತಿನಲ್ಲಿ ಎಲ್ಲವನ್ನೂ ಮರೆತು ಭಾರತಕ್ಕೆ ಬೆಂಬಲ ಸೂಚಿಸುತ್ತಿರುವ ಪಾಕಿಸ್ತಾನೀಯರಿಗೆ ಭಾರತದ ಅನೇಕರು ಧನ್ಯವಾದ ಅರ್ಪಿಸಿದ್ದಾರೆ.
ನಾವು ನೆರೆಹೊರೆಯವರು, ಶತ್ರುಗಳಲ್ಲ. ನಾವು ಎದುರಾಳಿಗಳು, ವಿರೋಧಿಗಳಲ್ಲ. ನಮ್ಮ ದೇಶಗಳ ನಡುವೆ ಗಡಿಯಿದೆ, ನಮ್ಮ ಹೃದಯದಲ್ಲಿ ಅಲ್ಲ. ನಾವು ಮನುಷ್ಯರು ನಮಗೀಗ ನೋವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಕೆಲವರು ಭಾರತಕ್ಕೆ ಆಮ್ಲಜನಕ ಪೂರೈಕೆ ಆಗಬೇಕು ಮತ್ತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಭಾರತಕ್ಕೆ ಶಕ್ತಿ ತುಂಬಬೇಕು ಎಂದು ಬೇಡಿಕೊಂಡಿದ್ದಾರೆ.
ಸಾವು ಬದುಕಿನ ಪ್ರಶ್ನೆ ಎದುರಾದಾಗ ನಾವು ಒಂದಾಗಿ ನಿಲ್ಲಬೇಕು. ಇಂತಹ ಸಂದರ್ಭದಲ್ಲಿ ಮಾನವೀಯತೆಯನ್ನು ತೋರಿಸುವುದು ಮುಖ್ಯ. ಪಾಕಿಸ್ತಾನದಲ್ಲಿ ಇರುವವರು ನಿಜವಾಗಿಯೂ ಭಾರತದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯರು ಎದುರಿಸುತ್ತಿರುವ ಕಷ್ಟಕ್ಕೆ ಮರುಗುತ್ತಿದ್ದಾರೆ ಎಮದು ವಾಸಿಮ್ ಅಬ್ಬಾಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್ ಕೂಡಾ ಪಾಕಿಸ್ತಾನೀಯರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, #PakistanstandswithIndia ಟ್ರೆಂಡ್ ಆಗಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
Heartwarming to see top trend from Pakistan #PakistanstandswithIndia #भारत_का_वीर_पुत्र_मोदी provided the country with vaccine nice to see them appreciate his kindness and reciprocate with love, we too acknowledge their empathy in these testing times #भारत_का_वीर_पुत्र_मोदी
— Kangana Ranaut (@KanganaTeam) April 24, 2021
We are neighbors not enemy`s
We are rivals not opponents
We have boundries but not in our hearts
We are humans, we have pain? #IndiaNeedsOxygen #PakistanstandswithIndia pic.twitter.com/wNZcOMrijC— Kamran Zaidi (@KamranZaidiPTI) April 23, 2021
ಪಾಕಿಸ್ತಾನದ ಅಬ್ದುಲ್ ಸತ್ತಾರ್ ಈದಿ ಫೌಂಡೇಶನ್ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಳಾಸಕ್ಕೆ ಪತ್ರವೊಂದನ್ನು ಬರೆಯಲಾಗಿದ್ದು, ಪತ್ರದಲ್ಲಿ ಭಾರತೀಯರು ಎದುರಿಸುತ್ತಿರುವ ಕಷ್ಟಕ್ಕೆ ನಾವು ನೆರೆಯ ರಾಷ್ಟ್ರವಾಗಿ ಸ್ಪಂದಿಸುತ್ತೇವೆ. ನಿಮಗೆ ಏನೇ ಅಗತ್ಯವಿದ್ದರೂ ಅದನ್ನು ಈಡೇರಿಸಲು ನಾವು ಸಿದ್ದ. ನೀವು ಅನುಮತಿ ನೀಡಿದರೆ ಭಾರತಕ್ಕೆ ಬಂದು ಸೇವೆ ಸಲ್ಲಿಸುತ್ತೇವೆ. ಮಾನವೀಯತೆಯೇ ಮುಖ್ಯವಾಗಿದ್ದು 50 ಆ್ಯಂಬುಲೆನ್ಸ್ಗಳನ್ನು ಭಾರತಕ್ಕೆ ತಕ್ಷಣವೇ ಕಳುಹಿಸಿಕೊಡಲು ತಯಾರಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Edhi foundation offers 50 ambulances Ambulance to India
humanity stands first then anything else
We are neighbours not enemy`s
We are rivals not opponents
We have boundaries but not in our hearts
We are humans, we have pain Broken heart #PakistanstandswithIndia pic.twitter.com/NWRhPWmg6z— Sushant Singht Rajput (CBI 302 FOR SSR Case) (@its_FatimaJutt) April 23, 2021
Prayers all the way ?#PakistanstandswithIndia pic.twitter.com/DPt0PBnGVQ
— Asim Jofa (@asimjofa) April 24, 2021
ಇದನ್ನೂ ಓದಿ:
ಪಾಕಿಸ್ತಾನದಲ್ಲೂ ಟ್ರೆಂಡ್ ಆಗ್ತಿದೆ #IndiaNeedsOxygen.. ನಾವು ಸಹ ಭಾರತೀಯರಿಗಾಗಿ ಪ್ರಾರ್ಥಿಸುತ್ತಿದ್ದೇವೆ: ಶೋಯೆಬ್ ಅಖ್ತರ್
ಪಾಕ್ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!