Mobile : ಮೊಬೈಲ್ ನೋಡಬೇಡ ಎಂದು ಮಕ್ಕಳನ್ನು ಗದರುವಾಗಲೂ ಪೋಷಕರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಹೀಗಿದ್ದಾಗ ಪೋಷಕರು ಹೇಳಿದ್ದರ ಕಡೆ ಮಕ್ಕಳ ಗಮನವಾದರೂ ಹೇಗೆ ಹೋಗಬೇಕು? ಇದು ಇಂದಿನ ವಿಪರ್ಯಾಸ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ. ಹೀಗಾದರೆ ಹೇಗೆ? ಮಕ್ಕಳಿಗೆ ತಿಳಿಹೇಳುವುದು ಬಹಳೇ ಕಷ್ಟ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Girl jumps into Chitrakote Waterfalls in Chhattisgarh after scolded by parents for using mobile.
Spending too much time on the smartphone can have an adverse effect on children’s physical and mental health.
Help your children break away from overreliance on smartphones. pic.twitter.com/nMCjRajrb2 ಇದನ್ನೂ ಓದಿ— Sushree sangita dash (@Sushree_journo) July 19, 2023
ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ಈ ಘಟನೆ ನಡೆದಿದೆ. ಈ ಬಾಲಕಿ ಹೀಗೆ ಜಲಪಾತಕ್ಕೆ ಹಾರುವ ದೃಶ್ಯವನ್ನು ನೋಡಿದ ಯಾರಿಗೂ ಭಯವಾಗುತ್ತದೆ. ಅವರವರ ಮನೆಯ ಮಕ್ಕಳ ಬಗ್ಗೆ ಆತಂಕವಾಗುತ್ತದೆ. ಆದರೆ ಅದೃಷ್ಟವಶಾತ್ ಈ ಬಾಲಕಿ ಬದುಕುಳಿತಿದ್ದಾಳೆ! ಈ ವಿಡಿಯೋ ಅನ್ನು ಸುಶ್ರೀ ಸಂಗೀತಾ ಎಂಬ ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ. ‘ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಪೋಷಕರು ಗದರಿದ್ದಕ್ಕೆ ಈ ಹುಡುಗಿ ಛತ್ತೀಸ್‌ಗಢದ ಚಿತ್ರಕೋಟೆಯ ಜಲಪಾತಕ್ಕೆ ಹಾರಿದ್ದಾಳೆ. ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಮಾರ್ಟ್ಫೋನ್ಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ’ ಎಂದು ಆಕೆ ಒಕ್ಕಣೆ ಬರೆದಿದ್ದಾರೆ.
ಇದನ್ನೂ ಓದಿ : Viral Video: ನಮ್ಮ ದೇಶದಲ್ಲಿ ಇಂಥ ಐಡಿಯಾ ಇತ್ತೇ, ಇದೆಯೇ? ನೆಟ್ಟಿಗರ ಜಗಳ ಬಿಡಿಸಿ
ಮಂಗಳವಾರ ಈ ಘಟನೆ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ. ಆದರೂ ಆಕೆ ಧುಮುಕಿಯೇಬಿಟ್ಟಿದ್ದಾಳೆ. ಚಿತ್ರಕೋಟೆ ಜಲಪಾತದ ಮೂಲ ಇಂದ್ರಾವತಿ ನದಿ. ಬಸ್ತಾರ್ನ ಜಗದಲ್ಪುರದಿಂದ 38.ಕೀಮೀ ದೂರದಲ್ಲಿ ಈ ಜಲಪಾತವಿದೆ. ಇದನ್ನು ಮಿನಿ ನಯಾಗರ ಜಲಪಾತ ಎಂದೂ ಕರೆಯುತ್ತಾರೆ.
ವಿಷಯ ತಿಳಿದ ಪೊಲೀಸರು ತನಿಖೆ ನಡೆಸಿದ್ದಾರೆ. ಮೊಬೈಲ್ ಬಳಕೆಯ ವಿಷಯವಾಗಿ ಪೋಷಕರು ಗದರಿದ್ದರಿಂದ ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದು ಸಾಬೀತಾಗಿದೆ. ಕೊನೆಗೆ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:05 pm, Thu, 20 July 23