Video: ಏನ್ ತಲೆ ಇವನದ್ದು; ರೈಲಿನ ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಿದ ಪ್ರಯಾಣಿಕ
ನಮ್ಮಲ್ಲಿ ವಿಭಿನ್ನವಾದ ಪ್ರತಿಭೆಗಳು ಇದ್ದಾರೆ. ಆದರೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಅಂತಹ ಪ್ರತಿಭೆಗಳು ಹೊರಬರುತ್ತವೆ. ಇದೀಗ ವ್ಯಕ್ತಿಯೊಬ್ಬ ರೈಲಿನ ಶೌಚಾಲಯವನ್ನು ತಾತ್ಕಾಲಿಕ ಮಲಗುವ ಕೋಣೆಯನ್ನಾಗಿ ಪರಿವರ್ತಿಸಿದ್ದಾನೆ. ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈತನ ಬುದ್ಧಿವಂತಿಕೆ ಹಾಗೂ ತಲೆ ಉಪಯೋಗಿಸಿ ರೀತಿ ಕಂಡು ಬೆರಗಾಗಿದ್ದಾರೆ.

ನಮ್ಮಲ್ಲಿ ಜುಗಾಡ್ ಐಡಿಯಾಗಳಿಗೇನೂ (Jugad idea) ಕೊರತೆಯಿಲ್ಲ ಬಿಡಿ. ಮನೆಯಲ್ಲಿ ಯಾವುದಾದರೂ ವಸ್ತುಗಳು ಇದ್ದರೆ ಅದನ್ನು ವಿಭಿನ್ನವಾಗಿ ಬಳಸುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಆದರೆ ಕೆಲವರ ಬುದ್ಧಿವಂತಿಕೆ ನೋಡಿದ್ರೆ ಇವರೆಲ್ಲಾ ಎಲ್ಲೋ ಇರ್ಬೇಕಿತ್ತು ಎಂದೆನಿಸುತ್ತದೆ. ಇದೀಗ ಈ ದೃಶ್ಯ ನೋಡಿದ ಮೇಲೆ ನಿಮ್ಗೂ ಹಾಗೆ ಅನಿಸದೇ ಇರದು. ವ್ಯಕ್ತಿಯೊಬ್ಬ ತನ್ನ ಬುದ್ಧಿವಂತಿಕೆಯನ್ನು ಈ ರೀತಿ ಉಪಯೋಗಿಸಿಕೊಂಡಿದ್ದಾನೆ. ವ್ಯಕ್ತಿಯೊಬ್ಬ ರೈಲಿನ ಶೌಚಾಲಯವನ್ನು (Railways washroom) ತಾತ್ಕಾಲಿಕ ಮಲಗುವ ಕೋಣೆಯಾಗಿ ಪರಿವರ್ತಿಸುತ್ತಿದ್ದಾನೆ. ಈ ವಿಚಿತ್ರ ವಿಡಿಯೋ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ವ್ಯಕ್ತಿ ಮಾಡಿದ ಕೆಲಸ ನೋಡಿ
ವಿಶಾಲ್ (mr.vishalsharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ರೈಲಿನ ಶೌಚಾಲಯದೊಳಗೆ ಆರಾಮವಾಗಿ ಮಲಗಿರುವುದನ್ನು ಕಾಣಬಹುದು. ರೈಲಿನ ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಿಕೊಂಡಂತೆ ಇದೆ. ವಾಶ್‌ರೂಮ್‌ನ್ನು ಲಾಕ್ ಮಾಡಿಕೊಂಡಿದ್ದು ತನ್ನ ವೈಯಕ್ತಿಕ ಸ್ಥಳವನ್ನಾಗಿ ಮಾಡಿಕೊಂಡಿದ್ದಾನೆ. ಈ ವ್ಯಕ್ತಿಯೂ ಪ್ಲಾಸ್ಟಿಕ್ ಹಾಳೆಯ ಮೇಲೆ ಕುಳಿತುಕೊಂಡು ವಾಶ್ ಬೇಸಿನ್ ಮೇಲೆ ಕಾಲುಗಳನ್ನು ಇಟ್ಟುಕೊಂಡಿದ್ದಾನೆ. ವೈಯಕ್ತಿಕ ವಸ್ತುಗಳನ್ನು ಪಕ್ಕದಲ್ಲಿ ಅಚ್ಚುಕಟ್ಟಾಗಿ ಜೋಡಿಸಿಕೊಂಡು ಜಾಗವನ್ನು ಉಳಿಸಲು ಶೌಚಾಲಯದ ಕಿಟಕಿಗೆ ತಮ್ಮ ಮಡಿಸಬಹುದಾದ ಮಂಚವನ್ನು ಕಟ್ಟಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ವಿಶಾಲ್ ಎನ್ನುವ ವ್ಯಕ್ತಿಯೂ ಈ ಬುದ್ಧಿವಂತ ವ್ಯಕ್ತಿಯನ್ನು ಮಾತನಾಡಿಸಿದ್ದು, ಇದು ಭಾಯ್ ಸ್ಟೈಲ್ ಎಂದು ಹೇಳುವುದನ್ನು ನೋಡಬಹುದು. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾ ಈ ವಾಶ್‌ರೂಮ್‌ನ್ನು ಮಲಗುವ ಕೋಣೆಯಾಗಿ ಪರಿವರ್ತಿಸಿದ್ದಾನೆ ಎನ್ನುತ್ತಾನೆ. ಆ ಬಳಿಕ ಈ ಮಲಗುವ ಕೋಣೆ ಹೇಗಿದೆ? ಅದು ಚೆನ್ನಾಗಿದೆಯೇ? ಎಂದು ಕೇಳುತ್ತಿದ್ದಂತೆ ಹೌದು, ಇದು ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಿಯೆ ನೀಡುವುದನ್ನು ಕಾಣಬಹುದು.
ಇದನ್ನೂ ಓದಿ:Video: ಬಾಯಲ್ಲಿ ಪಟಾಕಿ ಹಚ್ಚಿಕೊಂಡ ಯುವಕ, ಮುಂದೇನಾಯ್ತು ನೋಡಿ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ರೈಲು ಕಳಪೆ ಗುಣಮಟ್ಟದ ಹೊಂದಿರಲು ಸರ್ಕಾರ ಕಾರಣವಲ್ಲ, ಪ್ರಯಾಣಿಕರೇ ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಿದ್ದು ಇದರಿಂದ ಆರೋಗ್ಯದ ಅಪಾಯಗಳೇ ಹೆಚ್ಚು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವ್ಯಕ್ತಿಯ ಬುದ್ಧಿವಂತಿಕೆಗೆ ಒಂದು ಸಲಾಂ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Sun, 26 October 25








