Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ‘ಜಿರಳೆದೇವೋಭವ’

|

Updated on: Aug 08, 2023 | 3:46 PM

Indian Railways : ರಾತ್ರಿ ಈ ರೈಲಿನಲ್ಲಿ ಮಲಗಿದ್ದಾಗ ಮೈಮೇಲೆಲ್ಲ ಜಿರಳೆಗಳು ಹರಿದಾಡಿವೆ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಎಲ್ಲಿದೆ ಶುಚಿತ್ವದ ಭರವಸೆ ಎಂದು ಪ್ರಶ್ನಿಸಿದ್ಧಾರೆ. ನೆಟ್ಟಿಗರನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಜಿರಳೆದೇವೋಭವ
ದೆಹಲಿ ತಿರುಪತಿ ಎಕ್ಸ್​​ಪ್ರೆಸ್​ನಲ್ಲಿ ಪತ್ತೆಯಾದ ಜಿರಳೆಗಳು.
Follow us on

Cockroach : ಕೆಲ ದಿನಗಳ ಹಿಂದೆಯಷ್ಟೇ ವಂದೇಭಾರತ ಎಕ್ಸ್​ಪ್ರೆಸ್​ನಲ್ಲಿ (Vande Bharat Express) ಐಆರ್​ಸಿಟಿಸಿಯ ಚಪಾತಿಯಲ್ಲಿ ಜಿರಳೆಯೊಂದು ಪತ್ತೆಯಾಗಿದ್ದನ್ನು ಓದಿದ್ದಿರಿ. ಇದೀಗ ದೆಹಲಿ ತಿರುಪತಿ ಎಕ್ಸ್​​ಪ್ರೆಸ್​ (Delhi Tirupati Express) ರೈಲಿನಲ್ಲಿಯೂ ಜಿರಳೆ ಪತ್ತೆಯಾಗಿದ್ದು ಪ್ರಯಾಣಿಕರೊಬ್ಬರು, ‘ದೆಹಲಿ ತಿರುಪತಿ ಎಕ್ಸ್​ಪ್ರೆಸ್ ರೈಲಿನ​ (12708 A/C) ಕಂಪಾರ್ಟ್‌ಮೆಂಟ್​ನಲ್ಲಿ ಮಲಗಿದ್ದಾಗ ನಮ್ಮ ಮೈಮೇಲೆಲ್ಲ ಜಿರಳೆಗಳು ಹರಿದಾಡುತ್ತಿದ್ದವು. ಶುಚಿತ್ವದ ಭರವಸೆ ಎಲ್ಲಿದೆ?’ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಮತ್ತೀಗ ಭಾರತೀಯ ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಆತಿಫ್ ಅಲಿ ಎಂಬ ಪ್ರಯಾಣಿಕರು ದೆಹಲಿ-ತಿರುಪತಿ ಎಕ್ಸ್‌ಪ್ರೆಸ್‌ನ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹಾಸಿಗೆ ಮತ್ತು ಮೈಮನೇಲೆಲ್ಲ ಜಿರಳೆಮರಿಗಳು ಹರಿದಾಡಿದ್ದರಿಂದ ಕೋಪಗೊಂಡ ಪ್ರಯಾಣಿಕರು ದಿಂಬಿನ ಮೇಲೆ ಮತ್ತು ರೈಲಿನ ಗೋಡೆಯ ಮೇಲೆ ಜಿರಳೆಗಳು ಹರಿದಾಡುತ್ತಿರುವ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ವಂದೇಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಪಾತಿಯಲ್ಲಿ ಸಿಕ್ಕ ಜಿರಳೆಯ ಫೋಟೋ ಈ ಕೆಳಗಿದೆ.

ಭಾರತೀಯ ರೈಲ್ವೇಯ ಅಧಿಕೃತ ಖಾತೆಯಾದ ರೈಲ್ವೇ ಸೇವಾ, ದೆಹಲಿ-ತಿರುಪತಿ ರೈಲಿನ ಪ್ರಯಾಣಿಕರ ಮತ್ತು ವಂದೇಭಾರತ ಎಕ್ಸ್​ಪ್ರೆಸ್​ ರೈಲಿನ ಪ್ರಯಾಣಿಕರ ಟ್ವೀಟ್​ಗೆ ಪ್ರತಿಕ್ರಿಯಿಸಿದೆ. ಈ ವಿಷಯವನ್ನು ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ದಯವಿಟ್ಟು ಪ್ರಯಾಣದ ವಿವರಗಳನ್ನು (PNR/UTS No.) ಮತ್ತು ಮೊಬೈಲ್ ನಂಬರ್​ ಅನ್ನು ಮೆಸೇಜ್ ಮಾಡಿ ಎಂದು ವಿನಂತಿಸಿಕೊಂಡಿದೆ. ಇಲ್ಲವೆ http://railmadad.indianrailways.gov.in ನಲ್ಲಿ ಕೂಡ ನೇರವಾಗಿ ದೂರು ಸಲ್ಲಿಸಬಹುದು. ಇನ್ನು ತುರ್ತು ಪರಿಹಾರಕ್ಕಾಗಿ 139 ಗೆ ಕರೆ ಮಾಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ : Viral Video: ವೃದ್ಧರೊಬ್ಬರ ಕಾಲ್ಪನಿಕ ಕ್ರಿಕೆಟ್​; ನೆಟ್ಟಿಗರಲ್ಲಿ ಚಿಮ್ಮಿದ ಉತ್ಸಾಹ

ಇಂಥ ಮೆಸೇಜುಗಳಿಂದ ಕಣ್ಣೊರೆಸುವ ತಂತ್ರವನ್ನು ರೈಲ್ವೇ ಇಲಾಖೆಯು ಕೈಬಿಡಬೇಕು. ಒಟ್ಟಾರೆಯಾಗಿ ಶುಚಿತ್ವದ ಕಡೆ ಗಮನ ಕೊಟ್ಟು ಪ್ರಯಾಣಿಕರ ಹಿತ ಮತ್ತು ಸುರಕ್ಷತೆಗಾಗಿ ಶ್ರಮಿಸಬೇಕು ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 3:43 pm, Tue, 8 August 23