Viral Video : ‘ಹಾರ್ಸ್ ಥೆರಪಿ’; ಅದ್ಯಾವ ನೋವು ಇವನಲ್ಲಿ ಅದೆಷ್ಟು ವರ್ಷಗಳಿಂದ ಹೂತಿತ್ತೋ?

| Updated By: ಶ್ರೀದೇವಿ ಕಳಸದ

Updated on: Aug 12, 2022 | 1:48 PM

Horse Therapy : ಬ್ರೆಝಿಲ್​ನ ದಿ ಇಕ್ವಿನೈನ್​ ಥೆರಪಿ ಸೆಂಟರ್​ನಲ್ಲಿ ಪಕೋಕಾ ಎಂಬ ಕುದುರೆ ಈ ವ್ಯಕ್ತಿಗೆ ಥೆರಪಿ ನೀಡುವಾಗ ಆತ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಯಾಕೆ? ಎಂದು ಕೇಳಲಾದೀತೆ. ಇದು ಅನುಭವಕ್ಕೆ ನಿಲುಕುವಂಥದ್ದು. ನೋಡಿ ವಿಡಿಯೋ.

Viral Video : ‘ಹಾರ್ಸ್ ಥೆರಪಿ’; ಅದ್ಯಾವ ನೋವು ಇವನಲ್ಲಿ ಅದೆಷ್ಟು ವರ್ಷಗಳಿಂದ ಹೂತಿತ್ತೋ?
ಹಾರ್ಸ್​ ಥೆರಪಿ
Follow us on

Viral : ಎಲ್ಲ ರೋಗಗಳಿಗೂ ಔಷಧಿಯೇ ಸಂಪೂರ್ಣ ಮದ್ದಾಗಿರುವುದಿಲ್ಲ. ರೋಗದ ಮೂಲ ಮನಸ್ಸೇ. ಮನಸೇ ಮನಸಿನ ಮನಸ ನಿಲ್ಲಿಸುವುದು ಎಂದು ಶಿಶುನಾಳ ಶರೀಫರ ತತ್ವಪದದಲ್ಲಿ ಕೇಳಿದ್ದೀರಲ್ಲ? ಮನಸ್ಸು ಎಂದಾಗ ಅದು ಮನುಷ್ಯನಿಗೆ ಮಾತ್ರ ಸೀಮಿತವೆ? ಮನುಷ್ಯನ ಒಡನಾಡಿಗಳಾಗಿರುವ ಪ್ರಾಣಿಸಂಕುಲಗಳಿಗೂ ಮನಸ್ಸಿದೆ. ಅವುಗಳ ಮನಸ್ಸು ಮನುಷ್ಯನಿಗೆ ಅರ್ಥವಾಗುತ್ತದೆ. ಮನುಷ್ಯನ ಮನಸ್ಸು ಅವುಗಳಿಗೂ ಅರ್ಥವಾಗುತ್ತದೆ. ಈ ಎಲ್ಲ ಜೀವಸಂಕುಲವು ಪರಸ್ಪರ ಪೋಷಿಸುತ್ತಿರಲೆಂದು ಪ್ರಕೃತಿ ತನ್ನದೇ ಆದ ತಾರ್ಕಿಕ ಶಕ್ತಿಯಿಂದಲೇ ಜೀವಬಂಧವನ್ನು ಹೆಣೆಯುತ್ತ ಬಂದಿರುವುದು. ಯಾವ ಕಾಲಕ್ಕೂ ಜೀವಜೀವಗಳ ನಡುವೆ ಪರಸ್ಪರ ಆಸರೆಯೇ ದಿವ್ಯೌಷಧಿ. ಈ ವಿಡಿಯೋ ನೋಡಿ, ಇಲ್ಲೊಬ್ಬ ರೋಗಿಯ ಎದೆಯ ಮೇಲೆ ಕುದುರೆಯೊಂದು ತನ್ನ ಬಾಯಿಯನ್ನಿಟ್ಟು ಸಂತೈಸುತ್ತಿದೆ. ಸ್ವಲ್ಪ ಹೊತ್ತಿನ ನಂತರ ರೋಗಿಯ ಕಣ್ಣುಗಳು ಭಾವಪರವಶತೆಯಿಂದ ತುಂಬಿಕೊಳ್ಳುತ್ತವೆ, ಬಿಕ್ಕಲಾರಂಭಿಸುತ್ತಾನೆ. ಓಶೋ ಹೇಳಿದ್ದು ನೆನಪಿದೆಯೇ? ಅಳು ಕೂಡ ಒಂದು ಥೆರಪಿಯೇ. ಪಾಪ, ಯಾವ ನೋವು ಎಷ್ಟು ವರ್ಷಗಳಿಂದ ಅವನೆದೆಯಲ್ಲಿ ಹೂತಿತ್ತೋ? ಅಂತೂ ಬಿಡುಗಡೆ ಪಡೆದಿದೆ.

ವಿಡಿಯೋ ಮೋಡಿ…

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

 

Patient is moved to tears when this therapy horse named Paçoca calmly rests its head on patient’s chest. The equinine therapy center in Brazil stated that had they never seen any of their horses act like this with their patients.

ಹೀಗೆ ಈ ವ್ಯಕ್ತಿಯನ್ನು ಥೆರಪಿ ಮೂಲಕ ಸಾಂತ್ವನಿಸಿದ ಕುದುರೆಯ ಹೆಸರು ಪಕೋಕಾ, ಥೆರಪಿ ಕುದುರೆಯೆಂದೇ ಇದನ್ನು ಕರೆಯುತ್ತಾರೆ.  ತರಬೇತುಗೊಳಿಸಿದ ಕುದುರೆಗಳು ಈ ಥೆರಪಿಯಲ್ಲಿ ಭಾಗಿಯಾಗುತ್ತವೆ. ಈ ವಿಡಿಯೋ ಗುಡ್​ನ್ಯೂಸ್​ ಕರೆಸ್ಪಾಂಡೆಂಟ್​ ಎಂಬ ಟ್ವಿಟರ್ ಖಾತೆಯಲ್ಲಿದೆ. ಬ್ರೆಝಿಲ್​ನ ದಿ ಇಕ್ವಿನೈನ್​ ಥೆರಪಿ ಸೆಂಟರ್​ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ರೋಗಿಯೊಂದಿಗೆ ಹೀಗೆ ವರ್ತಿಸಿದ ಯಾವ ಕುದುರೆಯನ್ನೂ ನೋಡಿರಲಿಲ್ಲ ಈ ತನಕ ಎಂದು ಖಾತೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 2.4 ಮಿಲಿಯನ್ ವೀಕ್ಷಕರನ್ನು ಸೆಳೆದಿದೆ.

ಅನೇಕ ನೆಟ್ಟಿಗರು, ತಾವು ಆಘಾತಕ್ಕೊಳಗಾದಾಗ ಅದರಿಂದ ಹೊರಬರಲು ತಮ್ಮ ಸಾಕುಪ್ರಾಣಿಗಳು ಅಥವಾ ಇತರೇ ಪ್ರಾಣಿಗಳು ಹೇಗೆ ಸಹಾಯ ಮಾಡಿದವು ಎಂಬುದನ್ನು ಪ್ರತಿಕ್ರಿಯೆಗಳ ಮೂಲಕ ಹಂಚಿಕೊಂಡಿದ್ದಾರೆ. ಒಂದು ಪ್ರತಿಕ್ರಿಯೆ ಹೀಗಿದೆ,  ‘ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುವ ಮೊದಲೇ ನನ್ನ ಬೆಕ್ಕಿಗೆ ಗೊತ್ತಾಗಿತ್ತು. ಒಂಬತ್ತು ವರ್ಷಗಳ ಕಾಲ ನನ್ನೊಂದಿಗೇ ಕುಳಿತು ಮುದ್ದಾಡುತ್ತಲೇ ಇರುತ್ತಿತ್ತು. ಪ್ರಾಣಿಗಳ ಗ್ರಹಣ ಶಕ್ತಿ ಬಹಳ ಅದ್ಭುತ.’

ಸ್ಪರ್ಶಕ್ಕೆ ಜೀವವನ್ನು ಮರಳಿಸುವ ಶಕ್ತಿ ಇದೆ ಎನ್ನುವುದು ಇದಕ್ಕೇ. ಕೊರೆದುಕೊಂಡ ಎಲ್ಲ ಗಡಿರೇಖೆಗಳನ್ನು ಬದಿಗಿಟ್ಟು ಒಮ್ಮೆ ಯೋಚಿಸಿ, ಅನುಭವಿಸಿ ನೋಡಿ.

ಸ್ಪರ್ಶರಾಹಿತ್ಯ ಕಾಲದಲ್ಲಿ ಬದುಕುತ್ತಿರುವ ನಮ್ಮನ್ನು e-ಕಾಲ ಮೆಲ್ಲಗೆ ಹಳೆಯ ಪದ್ಧತಿಗಳಿಗೆ, ಪರ್ಯಾಯ ಚಿಕಿತ್ಸೆಗಳಿಗೆ, ಜೀವನಶೈಲಿಗೆ ಕರೆದೊಯ್ಯುತ್ತಿದೆ ಎನ್ನುವುದನ್ನು ಗಮನಿಸುತ್ತಿದ್ದೀರಲ್ಲ? ನಾವೇ ಅನ್ವೇಷಿಸಿದ ತಂತ್ರಜ್ಞಾನದ ಫಲ!

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 1:40 pm, Fri, 12 August 22