ಬಿಹಾರದ ಪಾಟ್ನಾದ ವ್ಯಕ್ತಿಯೊಬ್ಬ ಪತ್ನಿಯನ್ನು ಹನಿಮೂನ್‌ಗೆಂದು ಕತಾರ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಶೇಖ್‌ಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿಯನ್ನು ಮಾರಾಟ ಮಾಡಿ ಪಾಟ್ನಾಗೆ ತಲುಪಿದ್ದ ಈತ ಪತ್ನಿಗೆ ಅಂಚೆ ಮೂಲಕ ತ್ರಿವಳಿ ತಲಾಖ್ ಕಳುಹಿಸಿದ್ದಾನೆ. ಮತ್ತೊಂದೆಡೆ, ಭದ್ರತಾ ಸಿಬ್ಬಂದಿಯ ಸಹಾಯದಿಂದ ಮಹಿಳೆ ತನಗಾದ ಕಹಿ ಅನುಭವವನ್ನು ಪತ್ರದಲ್ಲಿ ಬರೆದು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದ್ದಾಳೆ. ನಂತರ ರಾಯಭಾರ ಕಚೇರಿಯ ಸಿಬ್ಬಂದಿಗಳು ಮಹಿಳೆಯನ್ನು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತಕ್ಕೆ ಬಂದ ಮಹಿಳೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ. ನಂತರ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ದಿಘಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
2021 ರಲ್ಲಿ ಆರೋಪಿ ಶಹಬಾಜ್ ಹಸನ್ನೊಂದಿಗೆ ಈ ಮಹಿಳೆಗೆ ವಿವಾಹವಾಗಿತ್ತು. ಮನೆಯವರಿಗೆ ಯುವಕ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ತಿಳಿಸಿದ್ದರು. ಆದರೆ, ಮದುವೆ ಬಳಿಕ ಗಂಡನ ಮನೆಗೆ ಹೋದಾಗ ಪತಿ ಎನ್ ಜಿಒದಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2021 ರ, ಅಕ್ಟೋಬರ್ 29 ರಂದು, ಅವನು ತನ್ನ ಹೆಂಡತಿಯನ್ನು ಮನವೊಲಿಸಿ ಕತಾರ್‌ಗೆ ಕರೆದುಕೊಂಡು ಹೋಗಿದ್ದಾನೆ.
ಪತಿ ಆಕೆಯನ್ನು ಕತಾರ್ ನ ಶೇಖ್ ಎಂಬುವವರಿಗೆ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಇದಾದ ನಂತರ ಅವರು ಭದ್ರತಾ ಸಿಬ್ಬಂದಿಯ ಸಹಾಯದಿಂದ ಹೇಗೋ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಇದೀಗ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ್ದಾಳೆ.
ಇದನ್ನೂ ಓದಿ: 56ನೇ ವಯಸ್ಸಿನ ಈ ರಾಜನಿಗೆ 16 ಮದುವೆ, 45 ಮಕ್ಕಳು
ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ, ಮಹಿಳೆ ಇದೀಗ ರಾಜಧಾನಿಯ ದಿಘಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇಲ್ಲಿ ಒನ್ ಸ್ಟಾಪ್ ಸೆಂಟರ್ ಮೂಲಕ ಮಹಿಳೆಗೆ ಕಾನೂನು ನೆರವು ನೀಡಲಾಗುತ್ತಿದೆ. ಕೇಂದ್ರಕ್ಕೆ ಬಂದಿರುವ ಮಾಹಿತಿ ಪ್ರಕಾರ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಮಹಿಳೆಯ ಅತ್ತೆ ಮಾವಂದಿರಿಗೆ ನೋಟಿಸ್ ನೀಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ