Trending: ಚಿಟ್ಟೆಗಾಗಿ ಗುಂಪು ದಾಳಿ, ಮನರಂಜನೆ ವಿಡಿಯೋ ನೀವೂ ನೋಡಿ

ಒಂದು ಚಿಟ್ಟಿಗಾಗಿ ಗುಂಪು ದಾಳಿ ನಡೆಸಿ ವಿಫಲ ಪ್ರಯತ್ನ ಮಾಡಿದ ಪೆಂಗ್ವಿನ್​ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, 3.2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

Trending: ಚಿಟ್ಟೆಗಾಗಿ ಗುಂಪು ದಾಳಿ, ಮನರಂಜನೆ ವಿಡಿಯೋ ನೀವೂ ನೋಡಿ
ಚಿಟ್ಟೆಯನ್ನು ಬೆನ್ನಟ್ಟುತ್ತಿರುವ ಪೆಂಗ್ವಿನ್​ಗಳು
Edited By:

Updated on: Jun 06, 2022 | 7:23 PM

ಕೇವಲ ಒಂದೇ ಒಂದು ಚಿಟ್ಟಿಗಾಗಿ ಗುಂಪು ದಾಳಿ ನಡೆಸಿ ವಿಫಲ ಪ್ರಯತ್ನ ಮಾಡಿದ ಪೆಂಗ್ವಿನ್​ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದರೆ ನೆಟ್ಟಿಜನ್​ಗಳ ಮುಖದಲ್ಲಿ ನಗು ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೆಂಗ್ವಿನ್​ (penguin)ಗಳ ಸಾಕಷ್ಟು ವೈರಲ್ ವಿಡಿಯೋ (Viral video)ಗಳನ್ನು ಕಾಣಬಹುದು. ಇದನ್ನೂ ಓದಿ: Viral Video: ಚೀನಾದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಹೇಗಿರುತ್ತದೆ ಗೊತ್ತಾ? ಇಲ್ಲಿ ನೋಡಿ

ವೈರಲ್ ವೀಡಿಯೋದಲ್ಲಿ ಇರುವಂತೆ, ಒಟ್ಟು 11 ಪೆಂಗ್ವಿನ್​ಗಳಿದ್ದ ಗುಂಪೊಂದು ಹಾರುತ್ತಿರುವ ಚಿಟ್ಟೆಯನ್ನು ಹಿಡಿಯಲು ದಾಳಿ ನಡೆಸುವುದನ್ನು ಕಾಣಬಹುದು. ಕೇವಲ ಒಂದೇ ಒಂದು ಚಿಟ್ಟೆಗಾಗಿ ಪೆಂಗ್ವಿನ್​ಗಳು ಮೇಲಕ್ಕೆ ಚಿಮ್ಮುತ್ತಾ ವಿಫಲಯ ಪ್ರಯತ್ನ ನಡೆಸಿವೆ. ಕೇವಲ ಎರಡು ಸೆಕೆಂಡುಗಳ ಅವಧಿಯ ಕ್ಲಿಪ್ ಅನ್ನು ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 3.2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

ನೆಟಿಜನ್‌ಗಳು ಕಿರು ಕ್ಲಿಪ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಕೆಲವು ಬಳಕೆದಾರರು ಪೆಂಗ್ವಿನ್‌ಗಳ ಇತರ ತಮಾಷೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. “ಆ ಚಿಟ್ಟೆಯು ತನ್ನ ಹಾರುವ ಸಾಮರ್ಥ್ಯದಿಂದ ಪೆಂಗ್ವಿನ್​ಗಳನ್ನು ಅಪಹಾಸ್ಯ ಮಾಡುತ್ತಿದೆ!” ”ಅದು ನನ್ನನ್ನು ನಗಿಸಿದೆ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, “ಇಂದು ನಾನು ಅಂತರ್ಜಾಲದಲ್ಲಿ ನೋಡಿದ ಅತ್ಯುತ್ತಮ ವೀಡಿಯೊ!” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Trending: ತಂದೆಯ ಹಾಡಿಗೆ ಇ ಐ ಇ ಐ ಓ… ಎಂದ ಮುದ್ದಾದ ಮಗು, ವಿಡಿಯೋ ವೈರಲ್

ಕಳೆದ ವರ್ಷ ಜನವರಿಯಲ್ಲಿ ವೈರಲ್​ ಆಗಿದ್ದ  26-ಸೆಕೆಂಡ್‌ಗಳ ಕ್ಲಿಪ್​ನ ವಿಡಿಯೋದಲ್ಲಿ ಪೆಂಗ್ವಿನ್​ಗಳ ಎರಡು ಗುಂಪುಗಳ ನಡುವೆ ಜಗಳಗಳು ನಡೆಯುವುದನ್ನು ಕಾಣಬಹುದು. ಸಮುದ್ರಕ್ಕೆ ಹೋಗುವಾಗ ಒಂದು ಗುಂಪು ಮತ್ತು ಸಮುದ್ರದಿಂದ ಮರಳುವ ಇನ್ನೊಂದು ಗುಂಪಿನ ನಡುವೆ ಪರಸ್ಪರ ಜಗಳ ನಡೆಯುತ್ತಿದೆ. ಈ ವಿಡಿಯೋ ನೆಟ್ಟಿಜನ್​ಗಳ ಭರ್ಜರಿ ಮನರಂಜನೆ ನೀಡಿತ್ತು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Mon, 6 June 22