ಇಂದು ದೇಶದಾದ್ಯಂತ ರಂಗಿನಾಟ ಹೋಳಿ (Holi) ಹಬ್ಬದ ಸಂಭ್ರಮ. ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹಬ್ಬ ಆಚರಿಸಲಾಗಿತ್ತಿದೆ. ಹೋಳಿ ಎಂದರೆ ಸಿಹಿ ಹಂಚಿ, ಹೊಸ ಬಟ್ಟೆ ತೊಟ್ಟು ಖುಷಿಯಿಂದ ಆಚರಿಸಲಾಗುತ್ತದೆ. ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಈ ಹಬ್ಬವನ್ನು ಶೃದ್ಧೆಯಿಂದ ಆಚರಿಸಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿ ಪರಸ್ಪರ ಚಪ್ಪಲಿ (slippers) ಎಸೆದುಕೊಂಡು ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಇದನ್ನು ಚಪ್ಪಲ್ ಮಾರ್ ಹೋಳಿ (Chappal Maar Holi) ಎಂದು ಕರೆಯಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH पटना : वाटर पार्क में होली के जश्न के दौरान लोग एक-दूसरे पर चप्पल फेंकते दिखे। pic.twitter.com/eFAY65wsU7
— ANI_HindiNews (@AHindinews) March 17, 2022
ಬಿಹಾರದ ಪಾಟ್ನಾದ ವಾಟರ್ ಪಾರ್ಕ್‌ನಲ್ಲಿ ಹೋಳಿ ಆಡಲು ಜನರು ಪರಸ್ಪರ ಚಪ್ಪಲಿ ಎಸೆಯಲು ಪ್ರಾರಂಭಿಸಿದಾಗ ಸಂಭ್ರಮಾಚರಣೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಾರ್ಚ್ 17 ರಂದು ನಡೆದ ಛೋಟಿ ಹೋಳಿವೇಳೆ ವಾಟರ್ ಪಾರ್ಕ್ನಲ್ಇ ನೂರಾರು ಚಪ್ಪಲಿಗಳು ಗಾಳಿಯಲ್ಲಿ ಹಾರಾಡುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಜನ ವಾಟರ್ ಪಾರ್ಕ್‌ಗೆ ಭೇಟಿ ನೀಡಿ ವಾಟರ್ ಸ್ಲೈಡ್‌ಗಳ ಬಳಿ ಬಣ್ಣದ ನೀರಿನ ಬೃಹತ್ ಕೊಳದಲ್ಲಿ ಚಪ್ಪಲಿ ಎಸೆಯುತ್ತಾ ಆಡುತ್ತಿರುವುದನ್ನು ಕಾಣಬಹುದು. ಒಬ್ಬರಿಗೊಬ್ಬರು ಬಣ್ಣ ಹಚ್ಚಿದ ನಂತರ ಜನರು ಪರಸ್ಪರ ಚಪ್ಪಲಿ ಎಸೆಯಲು ಆರಂಭಿಸಿದರು. ಚಪ್ಪಲ್ ಮಾರ್ ಹೋಳಿ (ಚಪ್ಪಲಿ ಏಟಿನ ಹೋಳಿ) ಎನ್ನುವ ಆಟವನ್ನು ಆಡುವಾಗ ಜನರು ಒಬ್ಬರನ್ನೊಬ್ಬರು ಗುರಿಯಾಗಿಸಿಕೊಂಡು ಚಪ್ಪಲಿಗಳನ್ನು ಎಸೆಯುವುದನ್ನು ಕಾಣಬಹುದು. ಬಣ್ಣದ ನೀರಿನಲ್ಲಿ ಹಲವು ಚಪ್ಪಲಿಗಳು ತೇಲುತ್ತಿರುವುದನ್ನು ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ 36 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಸಂಬಳ ಕಡಿಮೆ ಎಂದು ವರ್ಕ್ ಫ್ರಾಮ್ ಹೋಮ್ನಲ್ಲಿಯೂ ಆಫೀಸ್ನಲ್ಲಿ ಬಂದು ಉಳಿದುಕೊಂಡ ವ್ಯಕ್ತಿ