Shocking Video: ರಿಪೇರಿ ಮಾಡೋವಾಗ್ಲೇ ಬ್ಲಾಸ್ಟ್​ ಆದ ಮೊಬೈಲ್​ ಪೋನ್​!

ಮೊಬೈಲ್​ ರಿಪೇರಿ ಮಾಡೋವಾಗ​ ಬ್ಲಾಸ್ಟ್​ ಆದ ಘಟನೆ ನಡೆದಿದೆ. ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಶಾಕಿಂಗ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ.

Shocking Video: ರಿಪೇರಿ ಮಾಡೋವಾಗ್ಲೇ ಬ್ಲಾಸ್ಟ್​ ಆದ ಮೊಬೈಲ್​ ಪೋನ್​!
ಮೊಬೈಲ್​ ಫೋನ್​ ಬ್ಲಾಸ್ಟ್​
Updated By: shruti hegde

Updated on: Nov 22, 2021 | 12:47 PM

ಮೊಬೈಲ್ ರಿಪೇರಿ ಮಾಡೋವಾಗ್ಲೇ ಮೊಬೈಲ್ ಫೋನ್ ಸ್ಟೋಟಗೊಂಡ (Mobile Blast) ಘಟನೆಯೊಂದು ನಡೆದಿದೆ. ಈ ಘಟನೆ ವಿಯೆಟ್ನಾಂನಲ್ಲಿ ನಡೆದಿದ್ದು, ಸಿಸಿಟಿಯಲ್ಲಿ ದೃಶ್ಯ ಸೆರೆಯಾಗಿದೆ. ಈ ಶಾಕಿಂಗ್ ವಿಡಿಯೊ (Shocking video) ಸಾಮಾಜಿಕ ಜಾಲತಾಣದಲ್ಲಿ (Social media) ಫುಲ್ ವೈರಲ್ ಆಗುತ್ತಿದೆ. ಕೆಲಸಗಾರನೊಬ್ಬ ಅಂಗಡಿಯಲ್ಲಿ ಮೊಬೈಲ್ (Mobile) ರಿಪೇರಿ ಮಾಡುತ್ತಿರುವಾಗ ಫೋನ್ ಬ್ಲಾಸ್ಟ್ (Blast)​ ಆಗಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿದೆ. ನವೆಂಬರ್ 17ರಂದು ವಿಡಿಯೊವನ್ನು ಯೂಟ್ಯೂಬ್​ನಲ್ಲಿ (YouTube) ಹಂಚಿಕೊಳ್ಳಲಾಗಿದ್ದು, ಏಳು ಸೆಕೆಂಡುಗಳಿರುವ ವಿಡಿಯೊ ಕ್ಲಿಪ್ ಫುಲ್ ವೈರಲ್ ಆಗಿದೆ.

ವಿಯೆಟ್ನಾಂನ ಥಾಯ್​ನಲ್ಲಿರುವ ರಿಪೇರಿ ಅಂಗಡಿಯೊಳಗೆ ಕುಳಿತು ವ್ಯಕ್ತಿ ಮೊಬೈಲ್ ರಿಪೇರಿ ಮಾಡುತ್ತಿದ್ದಾನೆ. ವಿಡಿಯೊದಲ್ಲಿ ಗಮನಿಸುವಂತೆ, ವ್ಯಕ್ತಿ ಟೇಬಲ್ ಮುಂದೆ ಖುರ್ಚಿಯಲ್ಲಿ ಕುಳಿತು ಕೈಗಳಲ್ಲಿ ಮೊಬೈಲ್ ಹಿಡಿದಿದ್ದಾನೆ. ಇದ್ದಕ್ಕಿದ್ದಂತೆ ಫೋನ್ ಬ್ಲಾಸ್ಟಾಗಿ ಬೆಂಕಿ ಹೊತ್ತಿ ಉರಿದಿದೆ. ಕಂಗಾಲಾದ ವ್ಯಕ್ತಿ ಮೊಬೈಲ್​ಅನ್ನು ದೂರಕ್ಕೆ ಎಸೆದಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಅದೃಷ್ಟವಶಾತ್ ಯಾರಿಗೂ ಏನೂ ಅಪಾಯವಾಗಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾ ಬಳಕೆದಾದರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಜೇಬಿನಲ್ಲಿದ್ದಾಗಲೇ ಬ್ಲಾಸ್ಟ್ ಆಗಿದ್ದರೆ ಏನಾಗಿರಬಹುದು ಯೋಚಿಸಿ! ಎಂದು ಓರ್ವರು ಹೇಳಿದ್ದಾರೆ. ಭಯಾನಕ ವಿಡಿಯೊವಿದು, ಮೊಬೈಲ್ ಫೋನ್ ಕೈಯಲ್ಲಿ ಹಿಡಿಯಲು ಭಯವಾಗುತ್ತೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ರಾತ್ರಿ ಹೊತ್ತು ರಸ್ತೆಯಲ್ಲಿ ಕಾರು ನಿಲ್ಲಿಸಿದ ಮಹಿಳೆಯರು ಕದ್ದಿದ್ದೇನು ಗೊತ್ತಾ? ತಮಾಷೆಯ ವಿಡಿಯೊ ಫುಲ್​ ವೈರಲ್​

Viral Video: ಫಾಂಟಾ ಕೋಲ್ಡ್ ಡ್ರಿಂಕ್ಸ್​ ವಿತ್ ನೂಡಲ್ಸ್ ಸವಿದಿದ್ದೀರಾ? ಹೆಸರು ಕೇಳಿಯೇ ಕನ್​ಫ್ಯೂಸ್​ ಆದ ನೆಟ್ಟಿಗರು

Published On - 12:21 pm, Mon, 22 November 21