Pillow fighting: ಹೀಗೊಂದು ದಿಂಬಿನ ಕುಸ್ತಿ; ಹೊಸ ಆಟದ ಸ್ಪರ್ಧೆ ನೋಡಲು ಮುಗಿಬಿದ್ದ ಜನ

| Updated By: Pavitra Bhat Jigalemane

Updated on: Feb 02, 2022 | 1:05 PM

ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು ಕುಸ್ತಿಯ ರೀತಿ  ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಸಖತ್​ ವೈರಲ್​ ಆಗಿದೆ.

Pillow fighting: ಹೀಗೊಂದು ದಿಂಬಿನ ಕುಸ್ತಿ; ಹೊಸ ಆಟದ ಸ್ಪರ್ಧೆ ನೋಡಲು ಮುಗಿಬಿದ್ದ ಜನ
ದಿಂಬಿನ ಹೊಡೆದಾಟ
Follow us on

ಸಾಮಾನ್ಯವಾಗಿ ದಿಂಬಿನಿಂದ ಚಿಕ್ಕ ಮಕ್ಕಳು ತಮಾಷೆಗಾಗಿ ಹೊಡೆದಾಡುಕೊಳ್ಳುತ್ತಾರೆ. ಮನರಂಜನೆಗಾಗಿ ಮಾಡುವ ಈ ಹೊಡೆದಾಟ ಮಕ್ಕಳಿಗೆ ಒಂದು ರೀತಿಯ ವ್ಯಾಯಾಮ ಎಂದೇ ಹೇಳುತ್ತಾರೆ. ಆದರೆ ಈಗ ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು (Pillow fighting) ಕುಸ್ತಿಯ ರೀತಿ  ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಹರಿದಾಡುತ್ತಿದ್ದು ಸಖತ್  ವೈರಲ್​ ಆಗಿದೆ. ದಿಂಬಿನ ಕುಸ್ತಿಯನ್ನು ಫ್ಲೋರಿಡಾದಲ್ಲಿ ಜನವರಿಯಲ್ಲಿ ಆಯೋಜಿಸಲಾಗಿತ್ತು. professional Pillow Fighting Championship (PFC) ಎನ್ನುವ ಸಂಸ್ಥೆ  ಸ್ಪರ್ಧೆಯನ್ನು  ಆಯೋಜಿಸಿತ್ತು. ಇದರ ವಿಡಿಯೋವನ್ನು ರಾಯಿಟರ್ಸ್​ ಹಂಚಿಕೊಂಡಿದೆ.

ಜನವರಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 24 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅವರಲ್ಲಿ 8 ಮಹಿಳೆಯರು ಮತ್ತು 16 ಮಂದಿ ಪುರುಷರು ಭಾಗವಹಿಸಿದ್ದರು. ವಿಡಿಯೋದಲ್ಲಿ ಈ ದಿಂಬಿನ ಕುಸ್ತಿಯನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ಕಾಣಬಹುದು. ವಿಡಿಯೋದಲ್ಲಿ ಬಣ್ಣ ಬಣ್ಣದ ದಿಂಬುಗಳನ್ನು ಹಿಡಿದುಕೊಂಡು ಇಬ್ಬರು ಸ್ಪರ್ಧಾಳುಗಳು ಕುಸ್ತಿ ಅಂಗಳದಲ್ಲಿ ಹೊಡೆದಾಡುವುದನ್ನು ಕಾಣಬಹುದು.

ಈ ಸ್ಪರ್ಧೆಯಲ್ಲಿ ಇಸ್ಟೆಲಾ ನ್ಯೂನ್ಸ್ ಎನ್ನುವ ಮಹಿಳೆ ಕೆಂಡಾಲ್ ವೋಲ್ಕರ್ ಎನ್ನುವ ಸ್ಪರ್ಧಿಯನ್ನು ಸೋಲಿಸಿ ಗೆಲುವು ಪಡೆದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಮಾರ್ಕಸ್ ಬ್ರಿಮೇಜ್ ಅವರನ್ನು ಸೋಲಿಸಿ ಹೌಲಿ ಟಿಲ್ಮನ್ ಎನ್ನುವವರು ಗೆಲುವನ್ನು ಸಾಧಿಸಿದ್ದಾರೆ. ಇಬ್ಬರೂ ವಿನ್ನರ್​ಗಳು 5 ಸಾವಿರ ಯುಎಸ್​ ಡಾಲರ್​ ಮತ್ತು ಒಂದು ಬೆಲ್ಟ್​ಅನ್ನು ಬಹುಮಾನವಾಗಿ ಪಡೆದಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ತಿಳಿಸಿದೆ.

ಸದ್ಯ ವಿಡಿಯೋ ನೋಡಿ ಬಳಕೆದಾರರೊಬ್ಬರು ಮುಂದಿನ ದಿನಗಳಲ್ಲಿ ದಿಂಬಿನ ಕುಸ್ತಿ ಅಧಿಕೃತವಾಗಿ ಜಾರಿಗೆ ಬರಬಹುದು. ಏಕೆಂದರೆ ಜನ ಈ ಹೊಸ ಕ್ರೀಡೆಯನ್ನು  ಮೆಚ್ಚಿಕೊಂಡಿದ್ದು, ತಾವೂ ಆಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:

ನಾಯಿಗೆ ಕೆಂಪು ಬಣ್ಣ ಬಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಯುವತಿ; ವಿಡಿಯೋ ವೈರಲ್