Viral News: ಫಸ್ಟ್​​​ ಟೈಮ್​​​ ವಿಮಾನ ಪ್ರಯಾಣ, ಟಾಯ್ಲೆಟ್‌ ಎಂದು ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದ ಮಹಿಳೆ

ಮೊದಲ ವಿಮಾನ ಪ್ರಯಾಣದ ವೇಳೆ ಮಹಿಳೆಯೊಬ್ಬರು ಟಾಯ್ಲೆಟ್‌ ಬಾಗಿಲು ಎಂದು ಭಾವಿಸಿ ಎಮರ್ಜೆನ್ಸಿ ಎಕ್ಸಿಟ್ ಡೋರ್​ ತೆಗೆದು ಎಡವಟ್ಟು ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಸದ್ಯ ಈ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

Viral News: ಫಸ್ಟ್​​​ ಟೈಮ್​​​ ವಿಮಾನ ಪ್ರಯಾಣ, ಟಾಯ್ಲೆಟ್‌ ಎಂದು ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದ ಮಹಿಳೆ

Updated on: Jul 10, 2024 | 5:27 PM

ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸ್ವಲ್ಪ ಭಯ, ಗೊಂದಲ ಆಗುವುದು ಸಹಜ. ಅದರಂತೆ ಇಲ್ಲೊಬ್ಬಳು ಮಹಿಳೆ ತನ್ನ ಮೊದಲ ವಿಮಾನ ಪ್ರಯಾಣದ ವೇಳೆ ಎಡವಟ್ಟು ಮಾಡಿಕೊಂಡಿದ್ದು, ಸದ್ಯ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆ ವಿಮಾನದಲ್ಲಿ ಟಾಯ್ಲೆಟ್​​​​ ಬಾಗಿಲು ಎಂದು ಭಾವಿಸಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಜುಲೈ 4 ರಂದು ಚೀನಾದ ಪೂರ್ವ ನಗರವಾದ ಕುಝೌದಿಂದ ಏರ್ ಚೀನಾ ವಿಮಾನವು ದೇಶದ ನೈಋತ್ಯ ಭಾಗದಲ್ಲಿರುವ ಚೆಂಗ್ಡುವಿಗೆ ಹಾರಬೇಕಿತ್ತು, ಆದರೆ ಮಹಿಳಾ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾರೆ. ಇದರಿಂದಾಗಿ ವಿಮಾನದಿಂದ ಪ್ರಯಾಣಿಕರನ್ನು ಹೊರತಂದು ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.

ಇದನ್ನೂ ಓದಿ: Joseph Radhik: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?

ವರದಿಗಳ ಪ್ರಕಾರ, ವಿಮಾನದ ಸಿಬ್ಬಂದಿಗಳನ್ನು ಕೇಳದೆ ಏಕಾಏಕಿ ತುರ್ತುನಿರ್ಗಮನದ ಬಾಗಿಲು ತೆರೆದ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. “ಶೌಚಾಲಯ ಎಲ್ಲಿದೆ” ಎಂದು ಸಿಬ್ಬಂದಿಯನ್ನು ಕೇಳಬಹುದಿತ್ತು’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ