Viral Post: ಕುಡಿದು ಟೈಟ್​​ ಆದ್ರೆ ನೋ ಪ್ರಾಬ್ಲಮ್, ‌ಈ ಬಾರ್‌ನಲ್ಲಿದೆ ಕುಡುಕರಿಗೆ ಉಚಿತ ಆಟೋ ವ್ಯವಸ್ಥೆ

ಗರ್ಭಿಣಿ ಮಹಿಳೆಯರಿಗೆ, ವಿಶೇಷ ಚೇತನರಿಗೆ, ವೃದ್ಧರಿಗೆ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸುವ ಹೃದಯವಂತರನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಬಾರ್‌ನಲ್ಲಿ ಕುಡಿದು ತೂರಾಡುವ ಕುಡುಕರಿಗೂ ಕೂಡಾ ಉಚಿತ ಆಟೋ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಕುರಿತ ಪೋಸ್ಟ್‌ ಒಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Viral Post: ಕುಡಿದು ಟೈಟ್​​ ಆದ್ರೆ ನೋ ಪ್ರಾಬ್ಲಮ್, ‌ಈ ಬಾರ್‌ನಲ್ಲಿದೆ ಕುಡುಕರಿಗೆ ಉಚಿತ ಆಟೋ ವ್ಯವಸ್ಥೆ
ವೈರಲ್​​ ಪೋಸ್ಟ್​​
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 10, 2024 | 6:18 PM

ಕುಡುಕರು ಅತಿಯಾಗಿ ಎಣ್ಣೆ ಹೊಡೆದ್ರೆ, ನಶೆಯಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಕೂಡಾ ಅವರಿಗೆ ಇರೋದಿಲ್ಲ. ಇನ್ನೂ ಕುಡಿದು ಟೈಟ್‌ ಆದ್ರೆ ಅವರಿಗೆ ನೆಟ್ಟಗೆ ನೆಲದ ಮೇಲೆ ನಿಲ್ಲಲು ಕೂಡಾ ಕಷ್ಟಸಾಧ್ಯವಾಗುತ್ತದೆ. ಹೀಗೆ ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ತೂರಾಡುತ್ತಾ ಹೋಗುವ, ಸಾರ್ವಜನಿಕರಿಗೆ ತೊಂದರೆ ಕೊಡುವ ಕುಡುಕರನ್ನೂ ನೀವು ಕೂಡಾ ನೋಡಿರುತ್ತಿರಿ ಅಲ್ವಾ. ಇಂತಹ ಕುಡುಕರಿಗೆ ಇದೀಗ ಇಲ್ಲೊಂದು ಬಾರ್‌ನಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಈ ಕುರಿತ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಕೆಲ ಸಮಯಗಳ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಇರುವ ರಚನಾ ಬಾರ್‌ & ರೆಸ್ಟೋರೆಂಟ್‌ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಾಗೂ ಬಾರ್‌ಗೆ ಬರುವ ಗ್ರಾಹಕರ ಹಿತ ದೃಷ್ಟಿಯಿಂದ ಉಚಿತ ವಾಹನ ವ್ಯವಸ್ಥೆಯ ಆಫರ್‌ ನೀಡಿತ್ತು. ಆಟೋದಲ್ಲಿ ಕುಡುಕರಿಗಾಗಿ ಇರುವ ಈ ಭರ್ಜರಿ ಆಫರ್‌ ಬಗ್ಗೆ ಬ್ಯಾನರ್‌ ಕೂಡಾ ಹಾಕಲಾಗಿತ್ತು. ಆಗ ಈ ಸುದ್ದಿ ಬಹಳ ವೈರಲ್‌ ಆಗಿತ್ತು. ಇದೀಗ ಈ ಕುರಿತ ಪೋಸ್ಟ್‌ ಒಂದು ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ವೈರಲ್​​ ಪೋಸ್ಟ್​​​​​ ( ಫೇಸ್​​​ಬುಕ್​​​ )

ಈ ಪೋಸ್ಟ್‌ ಅನ್ನು Namma Kudla – Mangalore ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಟೈಟ್‌ ಆದ್ರೆ ಫ್ರೀ ಡ್ರಾಮ್‌ ಸರ್ವಿಸ್‌” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಫೋಟೋದಲ್ಲಿ ಆಟೋವೊಂದರಲ್ಲಿ ಬಾರ್‌ ಒಂದು ಉಚಿತ ವಾಹನ ವ್ಯವಸ್ಥೆಯ ಆಫರ್‌ ನೀಡಿರುವ ಬ್ಯಾನರ್‌ ಅಂಟಿಸಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸ್ಕೂಲ್​​​ನಲ್ಲಿ ದೆವ್ವ, ಮಕ್ಕಳ ಭಯ ಹೋಗಲಾಡಿಸಲು ಅಮಾವಾಸ್ಯೆ ರಾತ್ರಿಯಂದು ಶಾಲೆಯಲ್ಲಿ ಒಂಟಿಯಾಗಿ ಮಲಗಿದ ಮೇಷ್ಟ್ರು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 600 ಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್‌ ಇದಂತೂ ತುಂಬಾನೇ ಒಳ್ಳೆಯ ಸರ್ವಿಸ್‌ʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ನೆಟ್ಟಿಗರಂತೂ ಈ ಭರ್ಜರಿ ಆಫರ್‌ ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Wed, 10 July 24

ತಾಜಾ ಸುದ್ದಿ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು