Viral Video: ಲಿಫ್ಟ್ನೊಳಗೆ ಮೂತ್ರ ಮಾಡಿದ ಬಾಲಕ ಶಾಕ್; ಮಾಡಿದ್ದುಣ್ಣೋ ಮಾರಾಯ ಎಂದ ನೆಟ್ಟಿಗರು
ಮಕ್ಕಳು ಹೋದಲ್ಲೆಲ್ಲ ಕಿತಾಪತಿ ಮಾಡುವುದು, ತರಲೆ ಮಾಡುವುದು ಸಾಮಾನ್ಯ. ಅದೇ ರೀತಿ ಬಾಲಕನೊಬ್ಬನಿಗೆ ಲಿಫ್ಟ್ ಹತ್ತುತ್ತಿದ್ದಂತೆ ತರಲೆ ಐಡಿಯಾವೊಂದು ಬಂದಿದೆ. ಚಡ್ಡಿ ಬಿಚ್ಚಿದ ಆತ ಕ್ಲೀನಾಗಿದ್ದ ಲಿಫ್ಟ್ನೊಳಗೆ ಹಾಗೂ ಲಿಫ್ಟ್ ಬಟನ್ಗಳ ಮೇಲೆ ಮೂತ್ರ ಮಾಡಿದ್ದಾನೆ. ಆಮೇಲೆ ಏನಾಯ್ತು ಎಂದು ನೀವೇ ನೋಡಿ.
ಲಿಫ್ಟ್ನಲ್ಲಿ ತನ್ನ ಮನೆಗೆ ಹೋಗಲು ಲಿಫ್ಟ್ ಹತ್ತಿದ ಬಾಲಕನೊಬ್ಬನಿಗೆ ಸ್ವಲ್ಪ ತರಲೆ ಮಾಡುವ ಮನಸಾಯಿತು. ಹೀಗಾಗಿ, ಲಿಫ್ಟ್ ಬಟನ್ಗಳ ಮೇಲೆ ಮೂತ್ರ ಮಾಡಿದ್ದಾನೆ. ಆದರೆ, ಮೂತ್ರ ತಾಗುತ್ತಿದ್ದಂತೆ ಆ ಲಿಫ್ಟ್ ಜಾಮ್ ಆಗಿ ಮಧ್ಯದಲ್ಲೇ ನಿಂತುಬಿಟ್ಟಿತು. ಇದರಿಂದ ಶಾಕ್ ಆದ ಆ ಬಾಲಕ ತನ್ನ ಚಡ್ಡಿಯನ್ನು ಮೇಲೆತ್ತಿಕೊಂಡು ಕಿರುಚಾಡಿದ್ದಾನೆ, ತಲೆಕೂದಲು ಜಗ್ಗಿಕೊಂಡು ಗೋಳಾಡಿದ್ದಾನೆ. ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನ ಮಾಡಿ ಒದ್ದಾಡಿದ್ದಾನೆ. ಈ ದೃಶ್ಯ ಲಿಫ್ಟ್ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಷ್ಯಾದ ಅಪಾರ್ಟ್ಮೆಂಟ್ವೊಂದರಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಬಾಲಕನನ್ನು ಲಿಫ್ಟ್ನಿಂದ ಹೊರಗೆ ತಂದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇನ್ಸ್ಟಂಟ್ ಕರ್ಮ ಎಂದರೆ ಇದೇ ನೋಡಿ ಎಂದು ಲೇವಡಿ ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos