AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಾವಿರಾರು ಅಡಿ ಎತ್ತರದಲ್ಲಿ ಆಫ್​ ಆದ ವಿಮಾನವನ್ನು ಸ್ಟಾರ್ಟ್ ಮಾಡಲು ಪೈಲಟ್ ಮಾಡಿದ್ದೇನು ಗೊತ್ತಾ..!

ಇತ್ತೀಚೆಗಷ್ಟೇ ಪೈಲಟ್‌ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಸುದ್ದಿಯಾಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸಾವಿರಾರು ಅಡಿ ಎತ್ತರದ ವಿಮಾನವನ್ನು ಗಾಳಿಯಲ್ಲಿ ಹಾರಿಸುತ್ತಿರುವುದು ಕಂಡುಬಂದಿದೆ.

Viral Video: ಸಾವಿರಾರು ಅಡಿ ಎತ್ತರದಲ್ಲಿ ಆಫ್​ ಆದ ವಿಮಾನವನ್ನು ಸ್ಟಾರ್ಟ್ ಮಾಡಲು ಪೈಲಟ್ ಮಾಡಿದ್ದೇನು ಗೊತ್ತಾ..!
ಆಫ್ ಆದ ವಿಮಾನವನ್ನು ಆನ್ ಮಾಡುತ್ತಿರುವ ಪೈಲಟ್
TV9 Web
| Edited By: |

Updated on: Apr 04, 2022 | 10:07 AM

Share

ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಮೈ ಝುಮ್ ಎನ್ನುವಂತಹ ಅದ್ಭುತವಾದ ಮತ್ತು ಅಪಾಯಕಾರಿ ಸ್ಟಂಟ್​ (Stunt) ಮಾಡುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಇದು ಕೆಲವರಿಗೆ ನೋಡಲು ಖುಷಿ ನೀಡಿದರೇ ಮತ್ತೆ ಕೆಲವರಿಗೆ ಭಯವಾಗುತ್ತದೆ. ಅನೇಕ ಜನರು ತಮ್ಮ ಪ್ರಾಣವನ್ನು ಸಹ ಪಣಕಿಟ್ಟು ಇಂತಹ ಅಪಾಯಕ್ಕೆ ಕೈಹಾಕುತ್ತಾರೆ. ಇಂತಹ ಹಲವು ವಿಚಿತ್ರ ಸ್ಟಂಟ್​ ಮಾಡುವ ವ್ಯಕ್ತಿಗಳ ವಿಡಿಯೋಗಳು ಅಂತರ್ಜಾಲದಲ್ಲಿ ತೀವ್ರವಾಗಿ ವೈರಲ್ ಆಗಿವೆ. ಇತ್ತೀಚೆಗೆ, ಇದೇ ರೀತಿಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದನ್ನು ನೋಡಿದ ನಂತರ ನಿಮ್ಮ ಬೆರಳನ್ನು ಕಚ್ಚಿಕೊಳ್ಳುತ್ತಿರಾ. ವಿಡಿಯೋದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ವಿಮಾನವೊಂದು ಗಾಳಿಯಲ್ಲಿ ನಿಂತಿದ್ದು, ಬಳಿಕ ಪೈಲಟ್ ಆಫ್ ಆದ  ಎಂಜಿನ್​ನ್ನು ಅಪಾಯಕಾರಿಯಾಗಿ ಸ್ಟಾರ್ಟ್ ಮಾಡುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

View this post on Instagram

A post shared by Aircraft Maintenance Engineer (@aircraftmaintenancengineer)

ಇತ್ತೀಚೆಗಷ್ಟೇ ಪೈಲಟ್‌ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಸುದ್ದಿಯಾಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸಾವಿರಾರು ಅಡಿ ಎತ್ತರದ ವಿಮಾನವನ್ನು ಗಾಳಿಯಲ್ಲಿ ಹಾರಿಸುತ್ತಿರುವುದು ಕಂಡುಬಂದಿದೆ. ಅಷ್ಟರಲ್ಲಿ ವಿಮಾನದ ಇಂಜಿನ್ ಸ್ಥಗಿತಗೊಳ್ಳುತ್ತದೆ. ಆಗ  ಬುದ್ಧಿವಂತಿಕೆಯಿಂದ ಪೈಲಟ್‌ನ ಅಪಾಯಕಾರಿ ನಿರ್ಧಾರವು ಆತನ ಜೀವವನ್ನು ಉಳಿಸುತ್ತದೆ. ವಿಡಿಯೊದಲ್ಲಿ, ಪೈಲಟ್ ವಿಮಾನದ ಎಂಜಿನ್​ನ್ನು ಸರಿಪಡಿಸಲು ಗಾಳಿಯಲ್ಲಿ ವಿಮಾನದಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ವಿಮಾನದಿಂದ ನಿರ್ಗಮಿಸುವ ಮೊದಲು, ಪೈಲಟ್ ತನ್ನನ್ನು ಸುರಕ್ಷಿತವಾಗಿ ತನ್ನ ದೇಹಕ್ಕೆ ಹಗ್ಗವನ್ನು ಕಟ್ಟಿಕೊಳ್ಳುತ್ತಾನೆ. ನಂತರ ಪೈಲಟ್ ವಿಮಾನದ ಬಾಗಿಲು ತೆರೆದು ಹೊರಗೆ ಹೋಗಿ ವಿಮಾನದ ಪ್ರೊಪೆಲ್ಲರ್ ಅನ್ನು ಕೈಯಿಂದ ಚಲಾಯಿಸಲು ಪ್ರಯತ್ನಿಸುತ್ತಾನೆ. ಈ ಮಧ್ಯೆ, ಪ್ರೊಪೆಲ್ಲರ್‌ಗಳು ಚಲಿಸಲು ಪ್ರಾರಂಭಿಸುತ್ತವೆ ಮತ್ತು ವ್ಯಕ್ತಿಯು ಸುರಕ್ಷಿತವಾಗಿ ವಿಮಾನದಲ್ಲಿ ಹಿಂತಿರುಗುತ್ತಾನೆ.

ಇಂಟರ್‌ನೆಟ್‌ನಲ್ಲಿ ಈ ವಿಡಿಯೋ ನೋಡಿದ ನಂತರ ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಡಿಯೋ ಇದುವರೆಗೆ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅದೇ ಸಮಯದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ 9 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ:

Viral Story: ಈ ಫೋಟೋದಲ್ಲಿರುವ ಪಕ್ಷಿಯನ್ನು ಗುರುತಿಸಲಾರದೆ ಹೆಣಗಾಡಿದ ನೆಟ್ಟಿಗರು; ನೀವು ಗುರುತಿಸಬಲ್ಲಿರಾ..!

Viral Story: ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವತಃ ತಾವೇ ರಸ್ತೆ ನಿರ್ಮಾಣ ಮಾಡಿದ ಗ್ರಾಮಸ್ಥರು

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?