Viral Story: ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವತಃ ತಾವೇ ರಸ್ತೆ ನಿರ್ಮಾಣ ಮಾಡಿದ ಗ್ರಾಮಸ್ಥರು
ಸೆಪ್ಟೆಂಬರ್ 6, 2020 ರಂದು, ಸುರ್ಗುಜಾದ ಕಡ್ನೈ ಗ್ರಾಮದ ಗರ್ಭಿಣಿ ಮಹಿಳೆಯನ್ನು ನದಿಯ ಮೂಲಕ ತಾತ್ಕಾಲಿಕ ಬುಟ್ಟಿಯಲ್ಲಿ ಸಾಗಿಸಿರುವ ಕುರಿತಾಗಿ ವರದಿಯಾಗಿದೆ. ಏಕೆಂದರೆ ಸರಿಯಾದ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ.
ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ಸರಿಯಾದ ರಸ್ತೆ (Road) ಇಲ್ಲದ ಹಿನ್ನೆಲೆಯಲ್ಲಿ ಗುರುವಾರ ಪರಪತಿಯಾ ಗ್ರಾಮದ ನಿವಾಸಿಗಳು ಸ್ವತಃ ತಾವೇ ರಸ್ತೆ ನಿರ್ಮಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ಕುರಿತು ಮಾತನಾಡಿದ ಗ್ರಾಮಸ್ಥರೊಬ್ಬರು ನಾವು ಸಾಕಷ್ಟು ಅರ್ಜಿಗಳನ್ನು ನೀಡಿದ್ದೇವೆ ಆದರೆ ಯಾರೂ ನಮ್ಮ ಮಾತನ್ನು ಕೇಳಲಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಮುಖ್ಯ ರಸ್ತೆಯು ನಮ್ಮ ಗ್ರಾಮದಿಂದ 6 ಕಿಲೋಮೀಟರ್ ದೂರದಲ್ಲಿದೆ. ನಮಗೆ ಸರಿಯಾದ ಸಂಪರ್ಕ ರಸ್ತೆ ಬೇಕು. ಇದರಿಂದ ಜನರು ಅನಾರೋಗ್ಯದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಬಹುದಾಗಿದೆ. ಶೀಘ್ರದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಸುರ್ಗುಜ ಜಿಲ್ಲಾಧಿಕಾರಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ಸುರ್ಗುಜಾ ಸಂಜೀವ್ ಕುಮಾರ್ ಝಾ ಮಾತನಾಡಿದ್ದು, ಮಂಜೂರಾತಿಗೆ ಪ್ರಸ್ತಾವನೆ ಕಳುಹಿಸಿದ್ದು, ಶೀಘ್ರ ಮಂಜೂರಾತಿ ನೀಡಲಾಗುತ್ತದೆ. ಕೂಡಲೇ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
Chhattisgarh | In the absence of a proper road, residents of Parpatiya village in the Surguja district have started constructing a road on their own. pic.twitter.com/ehAyYKFlOY
— ANI MP/CG/Rajasthan (@ANI_MP_CG_RJ) March 31, 2022
ಸೆಪ್ಟೆಂಬರ್ 6, 2020 ರಂದು, ಸುರ್ಗುಜಾದ ಕಡ್ನೈ ಗ್ರಾಮದ ಗರ್ಭಿಣಿ ಮಹಿಳೆಯನ್ನು ನದಿಯ ಮೂಲಕ ತಾತ್ಕಾಲಿಕ ಬುಟ್ಟಿಯಲ್ಲಿ ಸಾಗಿಸಿರುವ ಕುರಿತಾಗಿ ವರದಿಯಾಗಿದೆ. ಏಕೆಂದರೆ ಸರಿಯಾದ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ. ಅದೇ ವರ್ಷದಲ್ಲಿ, ಮಾಟ್ರಿಂಗಾ ಗ್ರಾಮದ ಸ್ಥಳೀಯ ನಿವಾಸಿಗಳು ಆ ಪ್ರದೇಶದಲ್ಲಿನ ನೀರಿನ ಬಿಕ್ಕಟ್ಟನ್ನು ನೀಗಿಸಲು ಪೈಪ್‌ಲೈನ್‌ಗಳ ಜಾಲವನ್ನು ಹಾಕಿದರು. ಅದನ್ನು ಸ್ವಲ್ಪ ದೂರದಲ್ಲಿರುವ ಪರ್ವತದ ನೈಸರ್ಗಿಕ ಹೊಳೆಗೆ ಸಂಪರ್ಕಿಸಿದರು. ಇದೇ ವೇಳೆ ಮಟ್ರಿಂಗ ಗ್ರಾಮದ ಸರಪಂಚ್ ರಾಮ್, ಮಲೆನಾಡಿನ ನೀರಿನ ತೊರೆಯಿಂದ ನೀರು ತರಲು ಗ್ರಾಮಸ್ಥರು ಪರದಾಡಬೇಕಾಗಿದ್ದು, ಈ ಕಾರಣದಿಂದ ಗ್ರಾಮಕ್ಕೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
Home Minister Movie: ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ನೋಡಿ ಶಿವಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿದ ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್ ರೈಲು; ಇಬ್ಬರಿಗೆ ಗಾಯ