ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​

ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ತಲೆ ನೋವು ಬಂದರೆ ಸಾಕು ಚಹ. ಜೋರಾಗಿ ಮಳೆ ಬರುತ್ತಿದ್ದುದು ಕಂಡರೆ ಸಾಕು ಬಿಸಿಬಿಸಿ ಚಹದ ನೆನಪಾಗುತ್ತೆ. ಪ್ರಿಯರಿಗಂತೂ ಚಹಾ ಕುಡಿಯುವುದು ಒಂದು ರೀತಿಯ ಚಟ. ಹಾಗಂತ ಮಾಡಿದ ತಪ್ಪಿಗೆ ಪೊಲೀಸರು ಬಂಧಿಸಲು ಎಳೆದೊಯ್ತಾ ಇದ್ರೂ ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​
ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!
Updated By: Lakshmi Hegde

Updated on: May 30, 2021 | 2:11 PM

ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂಗತಿಗಳು ಹೇಗೆ ವೈರಲ್​ ಆಗುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಂದು ಚಹಾ ಪ್ರಿಯರಿಬ್ಬರ ವಿಡಿಯೋ ಒಂದು ಹೆಚ್ಚು ಸುದ್ದಿಯಲ್ಲಿದೆ. ಯಾವುದೋ ಕಾರಣಕ್ಕೆ ಪೊಲೀಸರು ಇಬ್ಬರು ಯುವಕರನ್ನು ಎಳೆದೊಯ್ಯುತ್ತಿದ್ದರೂ ಕೂಡಾ ಆ ಯುವಕರಿಬ್ಬರು ಮಾತ್ರ ಚಹಾ ಕಪ್​ನ್ನು ಮಾತ್ರ ಬಿಡುತ್ತಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಚಹಾ ಪ್ರಿಯರಾದ ಯುವಕರಿಗೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. ‘ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾ ಕಪ್​ ಮಾತ್ರ ಬಿಡುತ್ತಿಲ್ಲ ನೋಡಿ’ ಎಂದು ತಮಾಷೆಯಾಗಿ ಹೇಳಿದ್ದಾರೆ.

ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ತಲೆ ನೋವು ಬಂದರೆ ಸಾಕು ಚಹ. ಜೋರಾಗಿ ಮಳೆ ಬರುತ್ತಿದ್ದುದು ಕಂಡರೆ ಸಾಕು ಬಿಸಿಬಿಸಿ ಚಹದ ನೆನಪಾಗುತ್ತೆ. ಪ್ರಿಯರಿಗಂತೂ ಚಹಾ ಕುಡಿಯುವುದು ಒಂದು ರೀತಿಯ ಚಟ. ಹಾಗಂತ ಮಾಡಿದ ತಪ್ಪಿಗೆ ಪೊಲೀಸರು ಬಂಧಿಸಲು ಎಳೆದೊಯ್ತಾ ಇದ್ರೂ ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!

ವಿಡಿಯೋದಲ್ಲಿ ನೀವು ಗಮನಿಸವಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸುತ್ತಾರೆ. ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯುವಕರ ಕೈಗಳನ್ನು ಹಿಡಿದು ಜೀಪಿನತ್ತ ಕರೆದೊಯ್ಯುತ್ತಿರುತ್ತಾರೆ. ಆದರೆ ಗಮನ ಸೆಳೆದ ವಿಷಯವೆಂದರೆ, ಚಹಾದ ಲೋಟ ಮಾತ್ರ ಕೆಳಗೆ ಬೀಳದಂತೆ ಇಬ್ಬರು ಎಚ್ಚರವಹಿಸಿ ನಡೆದು ಸಾಗುತ್ತಾರೆ. ಯುವಕನೋರ್ವ ಜೀಪ್​ ಹತ್ತುವಾಗ ಬಹಳ ಎಚ್ಚರಿಕೆಯಿಂದ ಹತ್ತುತ್ತಾನೆ. ಇನ್ನೋರ್ವ ಒಂದು ಸಿಪ್​ ಚಹ ಕುಡಿದು ನಂತರ ಜೀಪ್​ ಹತ್ತುವ ತಯಾರಿ ನಡೆಸುತ್ತಾನೆ.

ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇವರಿಗಿಂತಲೂ ಹೆಚ್ಚು ಇಷ್ಟಪಡುವ ಚಹಾದ ಪ್ರೇಮಿಗಳಿಗೆ ಟ್ಯಾಗ್​ ಮಾಡಿ ಎಂದು ಸವಾಲು ಹಾಕುವ ಮೂಲಕ ಪೋಸ್ಟ್​ ಹಂಚಿಕೊಳ್ಳಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘ಇದು ನನ್ನ ಚಹಾ ಕಪ್​, ಉಳಿದ ವಿಷಯಗಳಿಗೆ ನಂತರ ತಲೆಕೆಡಿಸಿಕೊಳ್ತೇನೆ’ ಎಂದು ತಮಾಷೆಯಾಗಿ ನೆಟ್ಟಿಗರೋರ್ವರು ಬರೆದುಕೊಂಡಿದ್ದಾರೆ. ಪೊಲೀಸರು, ಯುವಕರನ್ನು ಎಳೆದೊಯ್ಯುತ್ತಿದ್ದಾರೆ. ಆದರೆ ಚಹಾದ ಕಪ್​ಗಳನ್ನು ಎಸೆಯಲಿಲ್ಲ ನೋಡಿ, ಚಹಾ ಕುಡಿಯುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಅವರಲ್ಲಿ ನನಗೆ ಇಷ್ಟವಾದ ಗುಣವಿದು ಎಂದು ಇನ್ನೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

‘ನಾನು ಬಂದೇ ಬರುತ್ತೇನೆ, ಧೈರ್ಯವಾಗಿರಿ..’: ಮತ್ತೆ ರಾಜಕೀಯಕ್ಕೆ ಬರಲಿದ್ದಾರೆ ಅಮ್ಮನ ಆಪ್ತೆ ವಿ.ಕೆ.ಶಶಿಕಲಾ, ವೈರಲ್​ ಆಯ್ತು ಆಡಿಯೋ

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

Published On - 12:10 pm, Sun, 30 May 21