ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು.

ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !
ವಾಷಿಂಗ್​ ಮಷಿನ್​ನಲ್ಲಿ ಕಂಡುಬಂದ ಪ್ರಾಣಿ
Follow us
Lakshmi Hegde
|

Updated on:May 29, 2021 | 10:49 PM

ಮಹಿಳೆಯೊಬ್ಬರು ತಮ್ಮ ಮನೆಯ ವಾಷಿಂಗ್​ ಮಷಿನ್​ ಬಾಗಿಲು ತೆಗೆಯುತ್ತಿದ್ದಂತೆ ಹೊರಬಂದ ಮುಖವನ್ನು ನೋಡಿ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ವಾಷಿಂಗ್​ ಮಷಿನ್​ನಲ್ಲಿ ಬೆಕ್ಕು ಹೊಕ್ಕುವುದು ಸಾಮಾನ್ಯ. ಆದರೆ ಈ ಮಹಿಳೆಯನ್ನು ಹೆದರಿಸಿದ್ದು ಬೆಕ್ಕಲ್ಲ !

ಘಟನೆ ನಡೆದಿದ್ದು ಲಂಡನ್​ನಲ್ಲಿ. ಮಹಿಳೆ ಟ್ವಿಟರ್​​ನಲ್ಲಿ ತಮಗಾದ ಅನುಭವ ಹೇಳಿಕೊಂಡಿದ್ದಲ್ಲದೆ, ವಾಷಿಂಗ್​ ಮಷಿನ್​ ಒಳಗಿನಿಂದ ಮುಖವನ್ನಷ್ಟೇ ಹೊರಹಾಕಿ ಇಣುಕುತ್ತ ನಿಂತ ನರಿಯ ಫೋಟೋವನ್ನೂ ಅಪ್ಲೋಡ್ ಮಾಡಿದ್ದಾರೆ.

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು. ಆಗ ಬಹುಶಃ ಈ ನರಿ ಒಳ ಸೇರಿರಬೇಕು ಎನ್ನುತ್ತಾರೆ ನತಾಶಾ. ಅದು ಹೇಗೋ ಒಳ ಸೇರಿದ ನರಿ, ಬಳಿಕ ಅಡಗಲು ಒಂದು ಸುರಕ್ಷಿತ ಸ್ಥಳವನ್ನು ಹುಡುಕಿದೆ. ಆಗ ಕಾಣಿಸಿದ ವಾಷಿಂಗ್​ ಮಷಿನ್​ನಲ್ಲಿ ಹೊಕ್ಕಿದೆ ಎಂಬುದು ನತಾಶಾ ಅವರ ಅಭಿಪ್ರಾಯ. ಇದೀನ ನತಾಶಾ ಪ್ರಯಾಗ್​ ಪೋಸ್ಟ್ ಮಾಡಿರುವ ಫೋಟೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಮೊದಲು ನರಿಯ ಕೂಗು ಕೇಳಿತು. ನಾವು ಹುಡುಕಿದೆವು. ಮೊದಲು ಅಡುಗೆ ಮನೆ, ಕಿಟಕಿಯ ಹತ್ತಿರ ಪರೀಕ್ಷಿಸಿ, ತಿರುಗುವಷ್ಟರಲ್ಲಿ ವಾಷಿಂಗ್​ ಮಷಿನ್​ನಲ್ಲಿ ಒಂದು ಕಿವಿ ಕಂಡುಬಂತು. ಪೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ನರಿ ಇರುವುದು ಗೊತ್ತಾಯಿತು. ಅದನ್ನು ನೋಡಿ ನಾವು ಸಿಕ್ಕಾಪಟೆ ಕಂಗಾಲಾದೆವು. ನಂತರ ಅದನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸಲಾಗಿದೆ ಎಂದು ನತಾಶಾ ಆ ಸಂದರ್ಭವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ

Published On - 10:49 pm, Sat, 29 May 21

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ