Viral Video: ಪೊಲೀಸ್ ಯುನಿಫಾರಂ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಪೊಲೀಸ್ ಸಿಬ್ಬಂದಿಯೊಬ್ಬರು  ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

Viral Video: ಪೊಲೀಸ್ ಯುನಿಫಾರಂ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್
ಪೊಲೀಸ್ ಯುನಿಫಾರಂ ಧರಿಸಿ ಡ್ಯಾನ್ಸ್ ಮಾಡುತ್ತಿರುವುದು.
Updated By: ಅಕ್ಷತಾ ವರ್ಕಾಡಿ

Updated on: Dec 20, 2022 | 1:05 PM

ಹೊಸದಿಲ್ಲಿ: ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಸಮವಸ್ತ್ರ(Uniform) ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪೊಲೀಸ್ ಸಿಬ್ಬಂದಿಯೊಬ್ಬರು  ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಈ ಪೊಲೀಸ್ ಕುಟುಂಬ ಸದಸ್ಯರೊಂದಿಗೆ ನೃತ್ಯ ಮಾಡುತ್ತಿರುವಾಗ ಹಲವಾರು ಜನರು ವಿಡಿಯೋ ಮಾಡಿದ್ದು, ಸಾಕಷ್ಟು ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೊಲೀಸ್ ಅಧಿಕಾರಿ ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಸಮಾರಂಭದಲ್ಲಿದ್ದರು ಎಂದು ವರದಿಯಾಗಿದೆ.

ಪೊಲೀಸ್ ಯುನಿಫಾರಂ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಇಲ್ಲಿದೆ.

ಹಿರಿಯ ಪೋಲೀಸ್ ಅಧಿಕಾರಿಯು ಸನ್‌ಗ್ಲಾಸ್‌ ಹಾಕಿಕೊಂಡು ನೃತ್ಯ ಮಾಡುತ್ತಿರುವುದು, ಜೊತೆಗೆ ನೃತ್ಯಕ್ಕೆ ನೋಟುಗಳನ್ನು ಸುರಿಯುತ್ತಿರುವುದು ಕೂಡ ಕಂಡುಬಂದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದಂತೆ ನೆಟ್ಟಿಗರು ಇವರ ಮೇಲೆ ಕ್ರಮ ಕೈಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕೈ ಬೆರಳಿಗೆ ಕಚ್ಚಿದ ಸಾಕಿದ ಬೆಕ್ಕು, 15 ಆಪರೇಷನ್ ಮಾಡಿದ್ರೂ ಉಳಿಯಲಿಲ್ಲ ಜೀವ

ಈ ಪೊಲೀಸ್ ಅಧಿಕಾರಿ ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಸಮಾರಂಭದಲ್ಲಿದ್ದರು ಎಂದು ವರದಿಯಾಗಿದೆ. “ಬಲಂ ತಾನೆದಾರ” ಹಾಡಿಗೆ ನೃತ್ಯ ಮಾಡಲು ಅವರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು. ಇವರು ಅಂದು ರಜೆಯಲ್ಲಿದ್ದು ಇವರ ಜೊತೆಗೆ ಇತರ ಕೆಲವು ಪೊಲೀಸರು ಸಹ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: