ಈ ಹಿಂದೆ ಪುಷ್ಟಪ ಚಿತ್ರದ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿ ಸುದ್ದಿಯಾಗಿದ್ದ ವಿದೇಶಿ ಗರ್ಭಿಣಿ ಅಬ್ಬೇ ಸಿಂಗ್ ಇದೀಗ ಗಂಗೂಬಾಯಿ ಕಠವಾಡಿಯ ಸಿನಿಮಾದ ಡೈಲಾಗ್ ಮಾತ್ತು ಹಾಡಿಗೆ ಹೆಜ್ಜೆಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಠವಾಡಿಯ ಬಾಲಿವುಡ್ನ ಬಹುನೀರೀಕ್ಷಿತ ಚಿತ್ರವಾಗಿದೆ. ಭಾರತೀಯ ಮೂಲದ ಮನಿ ಸಿಂಗ್ ಎನ್ನುವ ವ್ಯಕ್ತಿಯನ್ನು ಮದುವೆಯಾಗಿರುವ ಅಬ್ಬೇ ಸಿಂಗ್ ಅವರು 2ನೇ ಮಗುವಿನ ತಾಯಿಯಾಗುತ್ತಿದ್ದಾರೆ. ಇವರು ಮಾಡರ್ನ್ ಸಿಂಗ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದಾರೆ.
ಮಾಡರ್ನ್ ಸಿಂಗ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡ್ಯಾನ್ಸ್ನ ವಿಡಿಯ ಹಂಚಿಕೊಳ್ಳಲಾಗಿದೆ. ನೀಲಿ ಬಣ್ಣದ ಫ್ರಾಕ್ ಧರಿಸಿ, ಬಿಳಿಯ ಶೂ ಧರಿಸಿದ ಅಬ್ಬೇ ಸಿಂಗ್ ಸಖತ್ ಹೆಜ್ಜೆ ಹಾಕಿದ್ದಾರೆ. ಆಲಿಯಾ ಭಟ್ರಂತೆ ಹೆಜ್ಜೆ ಹಾಕಿದ ಅಬ್ಬೇ ಸಿಂಗ್ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಅಬ್ಬೇ ಸಿಂಗ್ ಡ್ಯಾನ್ಸಿಂಗ್ ವಿಡಿಯೋ 29 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ವಿಡಿಯೋ ನೋಡಿದ ನೆಟ್ಟಿಗರು ಕ್ಯೂಟ್ ಡ್ಯಾನ್ಸಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಗರ್ಭಿಣಿಯಾಗಿದ್ದರೂ ಡ್ಯಾನ್ಸ್ ಬಗೆಗಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಬೀದಿಗೆ ಬಂದ ಮದುವೆ ಮನೆ ಜಗಳ: ಆರತಕ್ಷತೆ ವೇಳೆ ರಸ್ತೆ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್