Pune Horror: ಪತ್ನಿಯ ಗುಪ್ತಾಂಗಕ್ಕೆ ಮೊಳೆ ಚುಚ್ಚಿ ಬೀಗ ಹಾಕಿ ವಿಕೃತಿ ಮೆರೆದ ಪತಿ !

|

Updated on: May 19, 2024 | 4:09 PM

ಪತ್ನಿ ಪರ ಪುರುಷರ ಜೊತೆ ಸಂಬಂಧ ಇಟ್ಟುಕೊಳ್ಳಬಹುದು ಎಂಬ ಭಯದಲ್ಲಿ ಪಾಪಿ ಪತಿ ಪತ್ನಿಯ ಜನನಾಂಗದ ಮೇಲೆ ಎರಡು ಮೊಳೆ ಹೊಡೆದು ಆಕೆಯ ಖಾಸಗಿ ಭಾಗಗಳಿಗೆ ಬೀಗ ಹಾಕಿದ್ದಾನೆ. ಬಳಿಕ ಬೀಗವನ್ನು ಬಿಸಾಕಿದ್ದಾನೆ. ಪತ್ನಿಯ ನರಳಾಟ ಕೇಳಿ ನೆರೆಹೊರೆಯವರು ಧಾವಿಸಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

Pune Horror: ಪತ್ನಿಯ ಗುಪ್ತಾಂಗಕ್ಕೆ ಮೊಳೆ ಚುಚ್ಚಿ ಬೀಗ ಹಾಕಿ ವಿಕೃತಿ ಮೆರೆದ ಪತಿ !
ಸಾಂದರ್ಭಿಕ ಚಿತ್ರ
Follow us on

ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನಗೊಂಡು ಪತಿ ಅಮಾನುಷ ಕೃತ್ಯ ಎಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಇದೀಗ ಪತಿಯನ್ನು ವಕಾಡ್ ಪೊಲೀಸರು ಬಂಧಿಸಿದ್ದು, ಆತನ ಪತ್ನಿಯ ದೂರಿನ ಆಧಾರದ ಮೇಲೆ ಎಫ್​​ ಐ ಆರ್​​ ದಾಖಲಾಗಿದೆ. ಪತ್ನಿ ಇನ್ನೊಬ್ಬನ ಜೊತೆ ಸಂಬಂಧ ಇಟ್ಟುಕೊಳ್ಳಬಹುದು ಎಂಬ ಭಯದಲ್ಲಿ ಆರೋಪಿ ಉಪೇಂದ್ರ ಬಲ್ಬಹದ್ದೂರ್ ಹುಡ್ಕೆ (30) ಪತ್ನಿಯ ಜನನಾಂಗದ ಮೇಲೆ ಎರಡು ರಂಧ್ರಗಳನ್ನು ಕೊರೆದು ಮೊಳೆ ಹೊಡೆದು ಆಕೆಯ ಖಾಸಗಿ ಭಾಗಗಳಿಗೆ ಬೀಗ ಹಾಕಿದ್ದಾನೆ. ಬಳಿಕ ಬೀಗವನ್ನು ಬಿಸಾಕಿದ್ದಾನೆ.

ಮೇ 11 ರಂದು ರಾತ್ರಿ 10 ಗಂಟೆಯ ವೇಳೆ ಈ ವಿಕೃತ ಘಟನೆ ನಡೆದಿದ್ದು, ಮಹಿಳೆಯ ಕಿರುಚಾಟ ಕೇಳಿದ ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ದೂರಿನ ಪ್ರಕಾರ ” ಆತ ತನ್ನನ್ನು ದುಪಟ್ಟಾದಿಂದ ಕಟ್ಟಿಹಾಕಿ ಅಡುಗೆಮನೆಯ ಚಾಕುವಿನಿಂದ ತನ್ನಖಾಸಗಿ ಭಾಗಗಳ ಮೇಲೆ ಎರಡು ರಂಧ್ರಗಳನ್ನು ಕೊರೆದಿದ್ದಾನೆ. ಬಳಿಕ ಜನನಾಂಗದ ಪ್ರದೇಶಕ್ಕೆ ಬೀಗ ಹಾಕಿದ್ದಾನೆ” ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ

ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 326, 506 (2) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 323 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳ ಬಳಕೆಯಿಂದ ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ