ಕೆಲವರು ಶಕ್ತಿ ಮತ್ತು ಸಕಾರಾತ್ಮಕತೆಯ ಪ್ರತಿರೂಪ. ಜೀವನದಲ್ಲಿ ಅದೆಷ್ಟೇ ಕಷ್ಟ ನೋವುಗಳಿರಲಿ ನಗುವಿನೊಂದಿಗೆ ಎಲ್ಲವನ್ನೂ ಸಹಿಸಿಕೊಂಡು ಸರಿದೂಗಿಸಿಕೊಂಡು ಹೋಗುತ್ತಾರೆ. ಅಂತಹುದೇ ಒಂದು ಸ್ಪೂರ್ತಿ ತುಂಬುವ ಸುದ್ದಿ ಇಲ್ಲಿದೆ. ವೃದ್ಧೆಯೋರ್ವರು ಪುಣೆಯ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಾರೆ. ಸ್ವಾಲಂಬಿಯಾಗಿ ಪೆನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಉದ್ಯಮಿ ಶಿಖಾ ಅವರು, ವೃದ್ಧೆ ನಗುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿಕ್ಕದಾದ ರಟ್ಟಿನ ಪೆಟ್ಟಿಗೆಯಲ್ಲಿ ಪೆನ್ನುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ಆ ವೇಳೆ ಕ್ಲಿಕ್ಕಿಸಿದ ಚಿತ್ರ ಇದಾಗಿದೆ.
ವೃದ್ಧೆಯ ಹೆಸರು ರತನ್. ಇತರರಿಂದ ಸಹಾಯ ಕೇಳಲು ಇಷ್ಟವಿಲ್ಲದೇ ತನ್ನ ಜೀವನವನ್ನು ಸ್ವಾವಲಂಬಿಯಾಗಿ ನಡೆಸಲು ಪುಣೆಯ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡುತ್ತಾರೆ. ವಯಸ್ಸಾಗಿದ್ದರೂ ಸಹ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಅವರು ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ‘ನಾನು ಭಿಕ್ಷೆ ಬೇಡುವುದಿಲ್ಲ’ ದಯವಿಟ್ಟು ಖರೀದಿಸಿ ರೂ. 10 ರೂಪಾಯಿಗೆ ನೀಲಿ ಬಣ್ಣದ ಪೆನ್ನುಗಳು, ಧನ್ಯವಾದಗಳು ಎಂದು ಸಣ್ಣ ಪೆಟ್ಟಿಗೆಯ ಮೇಲೆ ಬರೆದು ಪೆನ್ನು ಮಾರಾಟ ಮಾಡುತ್ತಿದ್ದಾರೆ.
ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶಿಖಾ ಹೀಗೆ ಬರೆದಿದ್ದಾರೆ. ಇಂದು ನಾನು ನಿಜ ಜೀವನದ ನಾಯಕ ಚಾಂಪಿಯನ್ ರತನ್ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಸ್ನೇಹಿತರ ಜೊತೆ ಹೊರಹೋಗಿದ್ದಾಗ ಅವರು ನಮ್ಮಲ್ಲಿ ಪೆನ್ನು ಖರೀದಿ ಮಾಡುವಂತೆ ಹೇಳಿದರು. ಪೆಟ್ಟಿಗೆಯ ಮೇಲೆ ಬರೆದಿದ್ದನ್ನು ಕಂಡ ಕ್ಷಣವೇ ನನ್ನ ಸ್ನೇಹಿತರು ಪೆನ್ನು ಖರೀದಿ ಮಾಡಿದರು. ಖರೀದಿ ಮಾಡಿದಕ್ಕೆ ಖುಷಿಯಿಂದ ನಮಗೆ ಧನ್ಯವಾದ ತಿಳಿಸಿದರು. ಅವರಲ್ಲಿನ ಆ ನಗು ಮತ್ತಷ್ಟು ಪೆನ್ನುಗಳನ್ನು ಖರೀದಿ ಮಾಡುವಂತೆ ಮಾಡಿತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೃದ್ದೆಯ ಪ್ರಮಾಣಿಕತೆ ನೆಟ್ಟಿಗರ ಹೃದಯ ಗೆದ್ದಿದೆ. ತುಂಬಾ ಸುಂದರವಾಗಿದೆ ಎಂದು ಓರ್ವರು ಹೇಳಿದ್ದಾರೆ. ಕಾಯಲು ಸಾಧ್ಯವಿಲ್ಲ, ಬಹುಬೇಗ ಆಕೆಯನ್ನು ಭೇಟಿ ಮಾಡಬೇಕು ಎಂದು ಮತ್ತೋರ್ವರು ಹೇಳಿದ್ದಾರೆ. ವೃದ್ಧೆಯ ನಗು ತುಂಬಾ ಸುಂದರವಾಗಿದೆ ಎಂಬ ಪ್ರತಿಕ್ರಿಯೆ ಕೇಳಿ ಬಂದಿದೆ.
ಇದನ್ನೂ ಓದಿ:
Ind vs Eng: ಮೊಣಕಾಲಿನಿಂದ ರಕ್ತ ಸುರಿಯುತ್ತಿದ್ದರೂ ಬೌಲಿಂಗ್ ಮುಂದುವರೆಸಿದ ಜೇಮ್ಸ್ ಆಂಡರ್ಸನ್! ಫೋಟೋ ನೋಡಿ
Published On - 9:36 am, Tue, 19 October 21