Viral : ಬೇರೆ ಕೆಲಸದ ಆಫರ್‌ ಇಲ್ಲದೇನೇ ಇನ್ಫೋಸಿಸ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಟೆಕ್ಕಿ, ಪೋಸ್ಟ್ ವೈರಲ್

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಹಂಚಿಕೊಳ್ಳುವ ಕೆಲವೊಂದು ಸ್ಟೋರಿಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಇದೀಗ ಪುಣೆ ಮೂಲದ ಇಂಜಿನಿಯರೊಬ್ಬರು ಮತ್ತೊಂದು ಕೆಲಸದ ಆಫರ್‌ ಇಲ್ಲದೇನೇ ಇನ್ಫೋಸಿಸ್‌ಗೆ ರಾಜೀನಾಮೆ ನೀಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಬೇರೆ ಕೆಲಸವು ಸಿಗದೇ ಈ ಉದ್ಯೋಗಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

Viral : ಬೇರೆ ಕೆಲಸದ ಆಫರ್‌ ಇಲ್ಲದೇನೇ ಇನ್ಫೋಸಿಸ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಟೆಕ್ಕಿ, ಪೋಸ್ಟ್ ವೈರಲ್
Pune Techie Leaves Infosys Job Without Another Job Offer In Hand
Edited By:

Updated on: Jan 12, 2025 | 10:57 AM

ಇತ್ತೀಚೆಗಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವವರು ಒತ್ತಡವನ್ನು ಅನುಭವಿಸುತ್ತಾರೆ. ಸಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳಲ್ಲಿ ರಾಜೀನಾಮೆ ನೀಡಿ ಬೇರೆ ಕೆಲಸವನ್ನು ಹುಡುಕುವುದನ್ನು ನೋಡಿರಬಹುದು. ಇದೀಗ ಪುಣೆ ಮೂಲದ ಇಂಜಿನಿಯರೊಬ್ಬರು ಮತ್ತೊಂದು ಕೆಲಸದ ಆಫರ್‌ ಇಲ್ಲದೇ ಇನ್ಫೋಸಿಸ್‌ಗೆ ರಾಜೀನಾಮೆ ನೀಡಿದ್ದಾರೆ. ಅದಲ್ಲದೇ ಬೇರೆ ಕೆಲಸವು ಸಿಗದೇ ಇನ್ಫೋಸಿಸ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಕಾರಣಗಳನ್ನು ಲಿಂಕ್ಡ್‌ ಇನ್‌ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಭೂಪೇಂದ್ರ ವಿಶ್ವಕರ್ಮ ಎನ್ನುವವರು ರಾಜೀನಾಮೆ ನೀಡಿದ ವ್ಯಕ್ತಿಯಾಗಿದ್ದು, ಇವರ ಕೆಲಸವನ್ನು ನಂಬಿಕೊಂಡು ಕುಟುಂಬವು ಜೀವನವನ್ನು ಸಾಗಿಸುತ್ತಿತ್ತು. ಆದರೆ, ಇದೀಗ ವಿಶ್ವಕರ್ಮ ಅವರು ಕುಟುಂಬಕ್ಕೆ ಆಧಾರವಾಗಿದ್ದ ಈ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರತಿಷ್ಠಿತ ಇನ್ಫೋಸಿಸ್‌ ಕಂಪನಿಗೆ ರಾಜೀನಾಮೆ ನೀಡಿರುವ ಹಿಂದಿರುವ ಕಾರಣವನ್ನು ತಿಳಿಸಿದ್ದು, ಇನ್ಫೋಸಿಸ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಹಲವಾರು ವ್ಯವಸ್ಥಿತ ಸಮಸ್ಯೆಗಳನ್ನು ಎದುರಿಸಿದೆ. ಅಂತಿಮವಾಗಿ ಯಾವುದೇ ಆಫರ್ ಇಲ್ಲದೆ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಾಲ್‌ನಲ್ಲಿ ಕೋತಿಯ ಕಾಟಕ್ಕೆ ಹೈರಾಣಾದ ಯುವತಿ; ವಿಡಿಯೋ ವೈರಲ್‌

ಕಳೆದ ಮೂರು ವರ್ಷಗಳ ಕಾಲ, ನಾನು ಕಷ್ಟಪಟ್ಟು ಕೆಲಸ ಮಾಡಿದೆ, ನಿರೀಕ್ಷೆಗಳನ್ನು ಪೂರೈಸಿದೆ ಮತ್ತು ತಂಡಕ್ಕೆ ಕೊಡುಗೆ ನೀಡಿದೆ, ಆದರೆ ನನ್ನ ಪ್ರಯತ್ನಗಳಿಗೆ ಯಾವುದೇ ಆರ್ಥಿಕ ಮನ್ನಣೆಯನ್ನು ಕಂಡಿಲ್ಲ. ಅವರ ತಂಡವು 50 ರಿಂದ 30 ಸದಸ್ಯರಿಗೆ ಕುಗ್ಗಿದಾಗ, ಹೆಚ್ಚುವರಿ ಕೆಲಸದ ಹೊರೆಯನ್ನು ಉಳಿದ ಉದ್ಯೋಗಿಗಳ ಮೇಲೆ ಹೊರೆಸುತ್ತಾರೆ. ಕೆಲಸದ ಸ್ಥಳದಲ್ಲಿ ಹೊಸ ನೇಮಕಾತಿಗಳಿಲ್ಲ ಹಾಗೂ ಯಾವುದೇ ಬೆಂಬಲವಿಲ್ಲ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗಳಿಸಿದರೂ, ಅದು ಬಡ್ತಿ, ಸಂಬಳ ಹೆಚ್ಚಳ ಅಥವಾ ವೃತ್ತಿ ಪ್ರಗತಿಯಾಗಿ ಪರಿಣಮಿಸಲಿಲ್ಲ. ಜೊತೆಗೆ ವೈಯಕ್ತಿಕ ಯೋಗಕ್ಷೇಮಕ್ಕೆ ಅವಕಾಶವಿಲ್ಲ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ