ಪಂಜಾಬಿಗಳ ಜೀವನ ಶೈಲಿಯೇ (life style) ಭಿನ್ನ ಮತ್ತು ಅನುಕರಣೀಯ. ಸಂಕಟಗಳು ಎದುರಾದಾಗ ಅವರು ಎದೆಗುಂದುವುದಿಲ್ಲ, ನಗುತ್ತಲೇ ಅದನ್ನು ಎದುರಿಸುತ್ತಾರೆ. ನಗು-ಮೋಜು-ಹಾಸ್ಯ-ತಮಾಷೆ ಮೊದಲಾದವನ್ನು ಅವರಿಂದ ಬೇರ್ಪಡಿಸಲಾಗದು. ಪಂಜಾಬಿಗಳ ಕುಟುಂಬದ ಒಂದು ವಿಡಿಯೋ ನಮಗೆ ಸಿಕ್ಕಿದೆ. ಐಪಿಎಸ್ ಅಧಿಕಾರಿ ಹೆಚ್ ಜಿಎಸ್ ಧಲಿವಾಲ್ (HGS Dhaliwal) ಸದರಿ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋನಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರೊಬ್ಬರ ಮನಸ್ಸು ಪ್ರಫುಲ್ಲಗೊಳಿಸಲು, ಕಾಯಿಲೆ ಬಗ್ಗೆ ಅವರಲ್ಲಿ ಮೂಡಿರಬಹುದಾದ ನಿರಾಶೆ, ಹತಾಷೆ, ನೋವು ಮತ್ತು ಖಿನ್ನತೆಯನ್ನು ದೂರಮಾಡಲು ಅವರ ಕುಟುಂಬದ ಸದಸ್ಯರು ಪಂಜಾಬಿ ಗಾಯಕ ಶ್ಯಾರಿ ಮಾನ್ ಅವರ 3 ಪೆಗ್ ಚೇತೋಹಾರಿ ಹಾಡಿಗೆ ಲಯಬದ್ಧವಾಗಿ ಕುಣಿಯುತ್ತಿದ್ದಾರೆ.
ಇದು ಆಸ್ಪತ್ರೆಯೊಂದರಲ್ಲಿ ಶೂಟ್ ಆಗಿರುವ ವಿಡಿಯೋ. ಕೆಮೆರಾ ಬೆಡ್ ಮೇಲೆ ಮಲಗಿರುವ ವಯಸ್ಕರ ಕಡೆ ತಿರುಗಿಸಿದಾಗ ಅವರು ತಮ್ಮ ಎಡಗೈಯನ್ನು ತಾಳಕ್ಕೆ ತಕ್ಕಂತೆ ಅಲ್ಲಾಡಿಸುವುದು, ಮುಗುಳ್ನಗುವುದು ಕಾಣಿಸುತ್ತದೆ. ಪೂರ್ತಿ ವಿಡಿಯೋ ಅಪ್ಯಾಯಮಾನವಾಗಿದೆ ಅನ್ನೋದು ಸತ್ಯ, ಆದರೆ ಇದರ ಅತ್ಯಂತ ಸುಂದರ ಮತ್ತು ರೋಮಾಂಚನ ಹುಟ್ಟಿಸುವ ಭಾಗವೆಂದರೆ ಒಬ್ಬ ಹಿರಿಯ ಮಹಿಳೆ-ಪ್ರಾಯಶಃ ಕಾಯಿಲೆಯಿಂದ ಬಳಲುತ್ತಿರುವ ಪತ್ನಿಯಿರಬಹುದು-ಅವರು ರೋಗಿಯ ಬಲಭಾಗಕ್ಕೆ ಬಂದು ಅವರ ಎಡಗೈಯನ್ನು ತಮ್ಮ ಎಡಗೈಯಲ್ಲಿ ತೆಗೆದುಕೊಂಡು ಡ್ಯಾನ್ಸ್ ಮಾಡೋದು.
ವಿಡಿಯೋನಲ್ಲಿ ಚಿಕ್ಕವರು, ಯುವಕರು ಮತ್ತು ವಯಸ್ಕರು-ಎಲ್ಲರೂ ಕುಣಿಯುತ್ತಿದ್ದಾರೆ.
ಧಲಿವಾಲ್ ಅವರ ವಿಡಿಯೋಗೆ ‘ಪಂಜಾಬಿಗಳ ಬತ್ತದ ಚೇತನ’ ಅಂತ ಶೀರ್ಷಿಕೆ ನೀಡಿದ್ದಾರೆ.
Punjabi’s undying spirit! pic.twitter.com/NwWWs9DGJa
— HGS Dhaliwal (@hgsdhaliwalips) August 22, 2022
ವಿಡಿಯೋ ನೋಡಿದವರೆಲ್ಲ ಕುಟುಂಬವನ್ನು ಪ್ರಶಂಸಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಯೂಸರ್, ಮನಸ್ಸಿಗೆ ಮುದ ನೀಡುವಂಥದ್ದು, ಕುಟುಂಬದ ಈ ಕೆಲಸ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸಂತೋಷ ನೀಡಿರುತ್ತದೆ ಮತ್ತು ಬೇಗ ಚೇತರಿಸಿಕೊಳ್ಳಲು ನೆರವಾಗುತ್ತದೆ, ಅಂತ ಕಾಮೆಂಟ್ ಮಾಡಿದ್ದಾರೆ.
Good caretakers help in the healing process indeed . Music n dance are therapeutic for many .
— Sonia Dhaliwal Jhaj (@jhaj_sonia) August 22, 2022
ಮತ್ತೊಬ್ಬರು ಸಂಗೀತಕ್ಕೆ ರೋಗವನ್ನು ಬೇಗ ವಾಸಿ ಮಾಡುವ ತಾಕತ್ತಿದೆ ಎಂದಿದ್ದಾರೆ.
Good caretakers help in the healing process indeed . Music n dance are therapeutic for many .
— Sonia Dhaliwal Jhaj (@jhaj_sonia) August 22, 2022
ನಾವು ಆಗಲೇ ಚರ್ಚಿಸಿದ ಹಾಗೆ ಅಜ್ಜಿ ಕಾಯಿಲೆಯಿಂದ ಬಳಲುತ್ತಿರುವ ವಯಸ್ಕರ ಕೈ ಹಿಡಿದು ಡ್ಯಾನ್ಸ್ ಮಾಡಿದ್ದು ಬಹಳ ಜನರಿಗೆ ಇಷ್ಟವಾಗುತ್ತಿದೆ.
Grandma ??
— Sukh ? (@S4Earthh) August 23, 2022
ಇದಕ್ಕೆ ಮೊದಲು ಅಮೆರಿಕಾದ ಅಲಬಾಮಾದ ವಧುವೊಬ್ಬಳು ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ತಂದೆಯೊಂದಿಗೆ ಡ್ಯಾನ್ಸ್ ಮಾಡುತ್ತಿರುವ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಮೇರಿ ಬರ್ನೆ ರಾಬರ್ಟ್ಸ್ ಹೆಸರಿನ ಮಹಿಳೆ (ವಧು) ಬಾಲ್ಯದಲ್ಲಿ ತಂದೆ ಜಿಮ್ ರಾಬರ್ಟ್ಸ್ ಅವರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಳಂತೆ ಮತ್ತು ಅವಳ ಮದುವೆಯಲ್ಲೂ ಅವರು ಜೊತೆಯಾಗಿ ಡ್ಯಾನ್ಸ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅವಳ ತಂದೆ ಮದುವೆಗೆ ವ್ಹೀಲ್ ಚೇರ್ ನಲ್ಲಿ ಬಂದಾಗ ಮೇರಿ ಚೇರನ್ನು ಸ್ಟೇಜ್ ಮೇಲೆ ತಳ್ಳಿಕೊಂಡು ಹೋಗಿ ಅಪ್ಪನೊಂದಿಗೆ ಡ್ಯಾನ್ಸ್ ಮಾಡುತ್ತಾಳೆ.
ಜಿಮ್ ಅತಿ ತ್ವರಿತವಾಗಿ ವೃದ್ಧಿಹೊಂದುವ ಮತ್ತು ವಾಸಿಯಾಗದ ಗ್ಲಿಯೋಬ್ಲಾಸ್ಟೋಮ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಮೇ 2017 ರಲ್ಲಿ ಅವರ ದೇಹದಲ್ಲಿ ರೋಗ ಪತ್ತೆಯಾದಾಗ ಕಳೆದ ಡಿಸೆಂಬರ್ ನಲ್ಲಿ ಜರುಗಿದ ಮೇರಿಯ ಮದುವೆಯನ್ನು ನೋಡುವ ಬಗ್ಗೆ ವಿಶ್ವಾಸ ಇಟ್ಟುಕೊಂಡಿರಲಿಲ್ಲವಂತೆ.