Viral: ಗಮನ ಸೆಳೆಯುತ್ತಿದೆ ಪುತ್ತೂರು ಪಿಲಿಗೊಬ್ಬು ಕಾರ್ಯಕ್ರಮದಲ್ಲಿನ ವಿನೂತನ ಸ್ವಚ್ಛತಾ ಆಂದೋಲನ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 3:44 PM

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇದೀಗ ಎರಡನೇ ಬಾರಿಗೆ ಪಿಲಿಗೊಬ್ಬು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದರ ಜೊತೆ ಜೊತೆಗೆ ಫುಡ್‌ ಫೆಸ್ಟ್‌ ಅನ್ನು ಕೂಡಾ ಆಯೋಜನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸಹಜವಾಗಿಯೇ ಸಾವಿರಾರು ಜನ ಸೇರುತ್ತಾರೆ. ಹಾಗಾಗಿ ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇದೀಗ ಎರಡನೇ ಬಾರಿಗೆ ʼಪುತ್ತೂರುದ ಪಿಲಿಗೊಬ್ಬುʼ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಈ ಬಾರಿ ಫುಡ್‌ ಫೆಸ್ಟ್‌ ಅನ್ನು ಕೂಡಾ ಆಯೋಜನೆ ಮಾಡಲಾಗಿದೆ. ನಿನ್ನೆ (ಅ.6) ಈ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರಕಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಹೀಗೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಕಸದ ಬುಟ್ಟಿಗಳನ್ನು ಇಟ್ಟರೂ ಕೂಡಾ ಅಲ್ಲಲ್ಲಿ ಕಸ ಕಡ್ಡಿಗಳು ಕಾಣಸಿಗುತ್ತಲೇ ಇರುತ್ತವೆ. ಹೀಗಿರುವಾಗ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ವಿಷಯವಾಗಿ ಒಂದು ಸಣ್ಣ ತಪ್ಪು ಕೂಡಾ ನಡೆಯಬಾರದು ಎಂದು ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಸ್ವಚ್ಛತೆಯ ಈ ವಿನೂತನ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ಕೂಡಾ ಲಭಿಸಿದೆ.

ಭಾನುವಾರ (ಅ.6) ರಂದು ಪುತ್ತೂರು ಪಿಲಿಗೊಬ್ಬು ಮತ್ತು ಫುಡ್‌ ಫೆಸ್ಟ್‌ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಎಲ್ಲೂ ಕೂಡಾ ಒಂದು ಕಸ-ಕಡ್ಡಿಗಳು ಕಾಣಸಿಕ್ಕಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗಿದೆ. ಈ ಕುರಿತ ಪೋಸ್ಟ್‌ ಒಂದನ್ನು ಉಮೇಶ್‌ ನಾಯಕ್‌ (Umesh Nayak) ಎಂಬವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಮಾರ್ಗದಲ್ಲಿ ಮತ್ತು ಆಹಾರ ಮಳಿಗೆಗಳ ಸುತ್ತಮುತ್ತ ನಿದ್ದಂತಹ ಕೆಳಗೆ ಬಿದ್ದಂತಹ ಸಣ್ಣ ಸಣ್ಣ ಕಸ ಕಡ್ಡಿಗಳನ್ನು ಕೂಡಾ ಹೆಕ್ಕಿ ಬುಟ್ಟಿಗೆ ಹಾಕುವ ಹಾಗೂ ಕಸದ ಬುಟ್ಟಿಯಲ್ಲಿ ಕಸ ತುಂಬಿ ತುಳುಕದಂತೆ ಮುಂಜಾಗೃತೆ ವಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರತರಾಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಬ್ಬಬ್ಬಾ ವಡಾಪಾವ್‌ ಮಾರಿಯೇ ತಿಂಗಳಿಗೆ 2.8 ಲಕ್ಷ ಗಳಿಸುತ್ತಾರಂತೆ ಈ ವ್ಯಕ್ತಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸ್ವಚ್ಛತೆಗೆ ಮೊದಲ ಆದ್ಯತೆ, ಇದು ಅತ್ಯುತ್ತಮ ಕಾರ್ಯʼ ಎಂಬ ಕಾಮೆಂಟ್‌ ಬರೆದು ಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೊಂದು ಎಲ್ಲಿಯೂ ಕಾಣದ ಅದ್ಭುತವಾದ ಕೆಲಸʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತ ಪರಿಕಲ್ಪನೆʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:37 pm, Mon, 7 October 24