Video Viral: ವೃದ್ಧೆಯನ್ನ ಸುತ್ತಿಕೊಂಡ ದೈತ್ಯ ಹೆಬ್ಬಾವು; 2 ಗಂಟೆಗಳ ಕಾರ್ಯಚರಣೆ ಬಳಿಕ ರಕ್ಷಣೆ

|

Updated on: Sep 20, 2024 | 3:45 PM

ಹೆಬ್ಬಾವಿನ ದಾಳಿಯಿಂದ ರಕ್ಷಿಸಿಕೊಳ್ಳಲು ಮಹಿಳೆ ಹೆಬ್ಬಾವಿನ ತಲೆಯನ್ನು ಹಿಡಿದಿದ್ದಾರೆ. ಅದೃಷ್ಟವಶಾತ್ ಮಹಿಳೆಯ ಕಿರುಚಾಟ ಕೇಳಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೃದ್ಧೆಯ ದೇಹದ ಹಲವು ಭಾಗಗಳಿಗೆ ಹೆಬ್ಬಾವು ಕಚ್ಚಿದ ಪರಿಣಾಮ ರಕ್ಷಿಸಿದ ಕೂಡಲೇ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Video Viral: ವೃದ್ಧೆಯನ್ನ ಸುತ್ತಿಕೊಂಡ ದೈತ್ಯ ಹೆಬ್ಬಾವು; 2 ಗಂಟೆಗಳ ಕಾರ್ಯಚರಣೆ ಬಳಿಕ ರಕ್ಷಣೆ
ವೃದ್ಧೆಯನ್ನ ಸುತ್ತಿಕೊಂಡ ದೈತ್ಯ ಹೆಬ್ಬಾವು
Follow us on

ಇತ್ತೀಚೆಗಷ್ಟೇ ಥಾಯ್ಲೆಂಡ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿ ವೃದ್ಧೆಯೊಬ್ಬರು ತನ್ನ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಹೆಬ್ಬಾವೊಂದು ಸುತ್ತುವರಿದಿದೆ. ಇದಲ್ಲದೆ, ಮಹಿಳೆಗೆ ಹಲವಾರು ಬಾರಿ ಕಚ್ಚಿದ್ದು, ಮಹಿಳೆಯ ಕತ್ತು ಸುತ್ತಲು ಪ್ರಯತ್ನಿಸಿದೆ. ಹೆಬ್ಬಾವಿನ ದಾಳಿಯಿಂದ ರಕ್ಷಿಸಿಕೊಳ್ಳಲು ಮಹಿಳೆ ಹೆಬ್ಬಾವಿನ ತಲೆಯನ್ನು ಹಿಡಿದಿದ್ದಾಳೆ. ಅದೃಷ್ಟವಶಾತ್ ಮಹಿಳೆಯ ಕಿರುಚಾಟ ಕೇಳಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಆಘಾತಕಾರಿ ಘಟನೆಯು ಬ್ಯಾಂಕಾಕ್‌ನ ದಕ್ಷಿಣದಲ್ಲಿರುವ ಸಮುತ್ ಪ್ರಕಾನ್‌ನಲ್ಲಿ ನಡೆದಿದೆ. 64 ವರ್ಷದ ಅರೋಮ್ ಅರುಣ್ರೋಜ್ ಎಂಬ ಮಹಿಳೆಯ ಮೇಲೆ 13 ಅಡಿ ಉದ್ದದ ಹೆಬ್ಬಾವು ದಾಳಿ ನಡೆಸಿದೆ. ಹಾವು ಮಹಿಳೆಯನ್ನು ಸುತ್ತಿಕೊಂಡಿದ್ದರಿಂದ ಅರೋಮ್ ಕುಳಿತ ಸ್ಥಳದಿಂದ ಕದಲಲಿಲ್ಲ. ಈ ವಿಷಯ ತಿಳಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ವೃದ್ಧೆಯನ್ನು ರಕ್ಷಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹೃದಯ ಶ್ರೀಮಂತ, ಬೆಂಗಳೂರಿನ ಬೀದಿ ಬದಿ ಪ್ರಾಣಿಗಳಿಗೆ ಹೊಸ ಬದುಕು ಕಟ್ಟಿ ಕೊಟ್ಟ ಚಮ್ಮಾರ

ವೃದ್ಧೆಯ ದೇಹದ ಹಲವು ಭಾಗಗಳಿಗೆ ಹೆಬ್ಬಾವು ಕಚ್ಚಿದ ಪರಿಣಾಮ ರಕ್ಷಿಸಿದ ಕೂಡಲೇ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ