
ಯಾವುದೇ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಗೂಗಲ್ ಮಾಹಿತಿಯನ್ನು ಒದಗಿಸುತ್ತದೆ. ಹೀಗಾಗಿ ಗೂಗಲ್ ಎಲ್ಲರಿಗೂ ಕೂಡ ಚಿರಪರಿಚಿತ. ಇನ್ನು ಈ ಗೂಗಲ್ ಡೂಡಲ್ (Google Doodle) ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ವಿಶೇಷ ವಿಚಾರ, ವಿಶೇಷ ದಿನ ಹಾಗೂ ಆಚರಣೆಯನ್ನು ಗೂಗಲ್ ಆಕರ್ಷಕ ಡೂಡಲ್ ಒದಗಿಸುತ್ತದೆ. ಇದೀಗ ನವೆಂಬರ್ 12 ರಂದು ಗೂಗಲ್‌ನ ಡೂಡಲ್ ಪ್ರಮುಖ ಗಣಿತದ ಸೂತ್ರವಾದ ವರ್ಗ ಸಮೀಕರಣ (quadratic equation) ಪ್ರದರ್ಶಿಸಿ ಗೌರವ ಸಲ್ಲಿಸಿದೆ. ಇದು ಶೈಕ್ಷಣಿಕವಾಗಿಯೂ ಪ್ರಸ್ತುತವಾಗಿದ್ದು, ಮಕ್ಕಳಿಗೆ ಕಷ್ಟವಾಗುತ್ತಿರುವ ಈ ಸೂತ್ರವು ಇಷ್ಟವಾಗುವಂತೆ ಮಾಡಿದೆ.
ಗಣಿತದ ಅತ್ಯಂತ ಮೂಲಭೂತ ಸೂತ್ರಗಳಲ್ಲಿ ಒಂದಾದ ವರ್ಗ ಸಮೀಕರಣವನ್ನು ಆಚರಿಸಲು ವಿಶೇಷ ಡೂಡಲ್ ಒಳಗೊಂಡಿದೆ. ತಂತ್ರಜ್ಞಾನ ದೈತ್ಯ ತನ್ನ ಸರ್ಚ್ ಇಂಜಿನ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಮೀಕರಣಗಳಲ್ಲಿ ಒಂದಾದ ವರ್ಗ ಸಮೀಕರಣಕ್ಕೆ ಸಲ್ಲಿಸಿದ ಗೌರವವಾಗಿದೆ. ax²+bx+c=0 ಈ ಸೂತ್ರವು ಪ್ರಪಂಚದಾದ್ಯಂತದ ಎಲ್ಲಾ ವಿದ್ಯಾರ್ಥಿಗಳನ್ನು ಆಕರ್ಷಿಸಿದೆ. ಈ ಅನಿಮೇಟೆಡ್ ಕಲಾಕೃತಿಯು ಸಮೀಕರಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸಿ, ಈ ಸಮೀಕರಣವನ್ನು ಬಿಡಿಸಲು ಸಂಪನ್ಮೂಲಗಳನ್ನು ಒದಗಿಸುತ್ತದೆ.
ಇದನ್ನೂ ಓದಿ:Women’s Cricket World Cup 2025: ಮಹಿಳಾ ಏಕದಿನ ವಿಶ್ವಕಪ್ ಆರಂಭ; ವಿಶೇಷ ಡೂಡಲ್ ಹಂಚಿಕೊಂಡು ಸಂಭ್ರಮಿಸಿದ ಗೂಗಲ್
ಭಾರತದಲ್ಲಿ, ಡೂಡಲ್ ಲರ್ನಿಂಗ್ ದಿ ಕ್ವಾಡ್ರಾಟಿಕ್ ಸಮೀಕರಣವನ್ನು ನವೆಂಬರ್ 12, 2025 ರಂದು ಬಿಡುಗಡೆ ಮಾಡಲಾಗಿದೆ. ಸೃಜನಾತ್ಮಕ ವಿನ್ಯಾಸ ಮತ್ತು ರಚನೆಯ ಮೂಲಕ ವರ್ಗ ಸಮೀಕರಣವನ್ನು ಗೂಗಲ್ ಡೂಡಲ್ ಒದಗಿಸಿದೆ. ಈ ಅನಿಮೇಟೆಡ್ ಕಲಾಕೃತಿಯು “ಗೂಗಲ್” ಪದದಲ್ಲಿ ಮೊದಲ ಪದವಾದ G ಯೂ ಎರಡನೇ O ಅನ್ನು ಒದೆಯುವಂತೆ ಇದೆ, ಇದು ಬ್ಯಾಸ್ಕೆಟ್‌ಬಾಲ್‌ನಂತೆ ಕಾಣುತ್ತಿದ್ದು, ಆದರೆ L ತನ್ನ ಹಿಂದಿನ ಎಲ್ಲಾ ಅಕ್ಷರವನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ತಳ್ಳುವಂತೆ ಕಾಣುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ