ಹಿಮದಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣ: ಫೋಟೋ ಹಂಚಿಕೊಂಡ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ ಅವರು ಶ್ರೀನಗರದಲ್ಲಿ ಹಿಮದಿಂದ ಆವೃತವಾಗಿರುವ ರೈಲ್ವೇ ನಿಲ್ದಾಣದ ಫೋಟೋವನ್ನು ಹಂಚಿಕೊಂಡಿದ್ದಾರೆ.  ಮೂರು ಫೋಟೋಗಳನ್ನು ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಿಮದಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣ: ಫೋಟೋ ಹಂಚಿಕೊಂಡ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​
ಹಿಮದಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣ
Edited By:

Updated on: Jan 11, 2022 | 4:51 PM

ಶ್ರೀನಗರ: ಚಳಿಗಾಲ ಆರಂಭವಾಗಿದೆ. ಉತ್ತರ ಭಾರತದಲ್ಲಿ ಹಿಮ ಬೀಳುತ್ತಿದ್ದು, ಬಿಳಿಯ ಹಿಮ ಆವರಿಸಿ ಪ್ರಕೃತಿಯ ಸೌಂದರ್ಯ ಇಮ್ಮಡಿಯಾಗಿದೆ.  ಹೀಗಾಗಿ ಪ್ರವಾಸಿಗರ ಸಂಖ್ಯೆಯೂ ಈ ಸಮಯದಲ್ಲಿ ಕಾಶ್ಮೀರ, ಶ್ರೀನಗರದಲ್ಲಿ ಹೆಚ್ಚಾಗಿಯೇ ಇರುತ್ತದೆ.  ಬಿಳಿಯ ಹಿಮಗಳು ಮೋಡಗಳಂತೆ ಆವರಿಸಿ ನೋಡುಗರನ್ನು ಹೊಸ ಲೋಕಕ್ಕೇ ಕರೆದೊಯ್ಯುತ್ತದೆ. ಇದೀಗ ಜಮ್ಮು ಕಾಶ್ಮೀರ, ಶ್ರೀನಗರದಲ್ಲಿ ಹಿಮ ಬೀಳುತ್ತಿದ್ದು ಕಣ್ಸೆಳೆಯುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ ಅವರು ಶ್ರೀನಗರದಲ್ಲಿ ಹಿಮದಿಂದ ಆವೃತವಾಗಿರುವ ರೈಲ್ವೇ ನಿಲ್ದಾಣದ ಫೋಟೋವನ್ನು ಹಂಚಿಕೊಂಡಿದ್ದಾರೆ.  ಮೂರು ಫೋಟೋಗಳನ್ನು ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಚಿವರು ಹಂಚಿಕೊಂಡಿರುವ ಫೋಟೊಗಳು ವೈರಲ್​ ಆಗಿದ್ದು ಭಾರತದ ಸೌಂದರ್ಯಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ

ಮೂರು ಫೋಟೋಗಳಲ್ಲಿ ಹಿಮದಿಂದ ಆವೃತವಾದ  ರೈಲು ಹಳಿಗಳು. ರೈಲ್ವೆ ಸ್ಟೇಷನ್​ ಹಾಗೂ ಶ್ರೀನಗರ ಎಂದು ಬರೆದುಕೊಂಡಿರುವ ಬೋರ್ಡ್​ ಮೇಲೆಯೂ ಹಿಮ ತುಂಬಿರುವುದನ್ನು ಕಾಣಬಹುದು. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳು ಮತ್ತು ಮೇಲ್ಛಾವಣಿಗಳು ಹಿಮದ ದಟ್ಟವಾದ ಹೊದಿಕೆಗಳಿಂದ ಆವೃತವಾಗಿವೆ. ಜತೆಗೆ ಹಿಮಪಾತವಾತ್ತಿರುವ ಚಿತ್ರದಲ್ಲಿ ಬಿಳಿಯ ಉಂಡೆಗಳು ಬಿದ್ದಂತೆ ಕಾಣುತ್ತದೆ.


ಫೊಟೋ ನೋಡಿ ನೆಟ್ಟಿಗರು ಭೂಮಿಯ ಮೇಲೆ  ಸ್ವರ್ಗ ಎಂದು ಇದ್ದರೆ ಅದು ಶ್ರೀನಗರದಲ್ಲಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಹಲವರು ಅದ್ಭುತ ಭಾರತ ಎಂದರೆ ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರ ಎಂದಿದ್ದಾರೆ. ಸಚಿವರು ಹಂಚಿಕೊಂಡಿರುವ ಫೋಟೋಗಳು 12 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿವೆ.

 ಇದನ್ನೂ ಓದಿ:

ಜಿಂಕೆಗಳಿಗಾಗಿ ವಯಲಿನ್ ನುಡಿಸಿದ ಯುವತಿ: ಆನಂದಿಸುತ್ತಾ ಹತ್ತಿರ ಬಂದ ಜಿಂಕೆಗಳು