ಕೆಲವೊಬ್ಬರಿಗೆ ಎಲ್ಲೆಂದರಲ್ಲಿ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳುವುದೆಂದರೆ ವಿಪರೀತ ಕ್ರೇಜ್. ಇನ್ನೂ ಕೆಲವರಂತೂ ತುಂಬಿ ಹರಿಯುವ ನದಿ, ಜಲಪಾತ ಮುಂತಾದ ಅಪಾಯಕಾರಿ ಸ್ಥಳಗಳಿಗೆ ಹೋಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹೀಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ದಂಪತಿಗಳಿಬ್ಬರು ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ, ಇದ್ದಕ್ಕಿದ್ದಂತೆ ರೈಲು ಬಂದಿದ್ದು, ಪ್ರಾಣ ಉಳಿದರೆ ಸಾಕೆಂದು ಈ ದಂಪತಿ 90 ಅಡಿ ಕಂದಕಕ್ಕೆ ಹಾರಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ರಾಜಸ್ಥಾನದ ಪಾಲಿ ಎಂಬಲ್ಲಿ ನಡೆದಿದ್ದು, ಇಲ್ಲಿನ ಗೋರ್ಮಾಘಾರ್ ರೈಲು ಸೇತುವೆಯ ಮೇಲೆ ದಂಪತಿಗಳಿಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಇದ್ದಕ್ಕಿದ್ದಂತೆ ರೈಲು ಬಂದಿದ್ದು, ಈ ಅಪಾಯದಿಂದ ತಪ್ಪಿಸಿಕೊಳ್ಳಲು ದಂಪತಿ 90 ಅಡಿ ಆಳದ ಕಂದಕಕ್ಕೆ ಜಿಗಿದಿದ್ದಾರೆ. ಈ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸ್ಥಳೀಯ ಅಧಿಕಾರಿಗಳು ಯೋಜಿಸುತ್ತಿದ್ದಾರೆ.
#WATCH: Couple On Photoshoot Jumps Into 90-Ft Gorge To Avoid Getting Run Over By Train#ViralVideo #Couple #Rajasthan #Pali #Viral pic.twitter.com/nTpAqiNg2e
— TIMES NOW (@TimesNow) July 15, 2024
ಮತ್ತಷ್ಟು ಓದಿ: ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಆರೂವರೆ ಅಡಿ ಎತ್ತರದ ಗೇಟ್ ಹಾರಿ ವೃದ್ಧಾಶ್ರಮದಿಂದ ಪರಾರಿಯಾದ 92ರ ಅಜ್ಜಿ
TimesNow ಅಧೀಕೃತ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಗೋರ್ಮಾಘಾರ್ ರೈಲು ಸೇತುವೆಯ ಮೇಲೆ ನಿಂತು ದಂಪತಿಗಳಿಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಇದ್ದಕ್ಕಿದ್ದಂತೆ ರೈಲು ಬಂದಿದ್ದು, ಆ ಸಂದರ್ಭದಲ್ಲಿ ಪ್ರಾಣ ಉಳಿದರೆ ಸಾಕು ಎಂದು ಇವರಿಬ್ಬರೂ ಒಂದು ಕ್ಷಣ ಯೋಚಿಸದೆ 90 ಅಡಿ ಆಳದ ಕಂದಕಕ್ಕೆ ಜಿಗಿಯುವ ಭೀಕರ ದೃಶ್ಯವನ್ನು ಕಾಣಬಹುದು.
ಜುಲೈ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 399 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ