Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ; ಗ್ಯಾಸ್​ ಡೆಲಿವರಿ ಹುಡುಗನ ಮನೆಯಲ್ಲಿ ಶವ ಪತ್ತೆ

ಬಾಲಕಿಗಾಗಿ ಹುಡುಕಾಟ ನಡೆಸುತ್ತಿರುವ ವೇಳೆ ಗ್ಯಾಸ್​ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು ಎಂಬಾತನ ಮನೆಯ ಮುಂದೆ ಬಾಲಕಿಯ ಚಪ್ಪಲಿ ಕಂಡು ಬಂದಿದೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಬಾಲಕಿಯ ಕುಟುಂಬಸ್ಥರು ಮನೆಯ ಕಿಟಕಿಯಿಂದ ಇಣುಕಿ ನೋಡಿದಾಗ ಮನೆಯೊಳಗೆ ಬಾಲಕಿಯ ಶವ ಪತ್ತೆಯಾಗಿದೆ.

ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ; ಗ್ಯಾಸ್​ ಡೆಲಿವರಿ ಹುಡುಗನ ಮನೆಯಲ್ಲಿ ಶವ ಪತ್ತೆ
Follow us
ಅಕ್ಷತಾ ವರ್ಕಾಡಿ
|

Updated on: Jul 16, 2024 | 11:43 AM

ಆಂಧ್ರಪ್ರದೇಶ: ಗುಂಟೂರು ಜಿಲ್ಲೆಯ ಚೇಬ್ರೋಲುವಿನ ಕೊತ್ತರೆಡ್ಡಿಪಾಲೆನಿಯ ಶೈಲಜಾ (13) ಎಂಬ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಕೊಟ್ಟಾ ರೆಡ್ಡಿಪಾಲೆಂನ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಬೆಳಗ್ಗೆ ಶಾಲೆಗೆ ಹೋಗಿ ಅನಾರೋಗ್ಯದ ಕಾರಣ ಮಧ್ಯಾಹ್ನದ ವೇಳೆಗೆ ಶಾಲೆ ಬಿಟ್ಟಿರುವುದಾಗಿ ಶಾಲಾ ಅಧ್ಯಾಪಕರು ತಿಳಿಸಿದ್ದಾರೆ. ಆದರೆ ಸಂಜೆಯಾದರೂ ಮಗಳು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಪೋಷಕರು ಗ್ರಾಮದ ಹಲವೆಡೆ ಹುಡುಕಾಟ ನಡೆಸಿದ್ದಾರೆ.

ಊರಿನ ಪ್ರತೀ ಮನೆಯಲ್ಲಿ ಬಾಲಕಿಗಾಗಿ ಹುಡುಕಾಟ ನಡೆಸುತ್ತಿರುವ ವೇಳೆ ಗ್ಯಾಸ್​ ಡೆಲಿವರಿ ಹುಡುಗ ನಾಗರಾಜು ಎಂಬಾತನ ಮನೆಯ ಮುಂದೆ ಬಾಲಕಿಯ ಚಪ್ಪಲಿ ಇರುವುದು ಗಮನಕ್ಕೆ ಬಂದಿದೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಬಾಲಕಿಯ ಕುಟುಂಬಸ್ಥರು ಮನೆಯ ಕಿಟಕಿಯಿಂದ ಬಾಲಕಿಯ ಶವ ಪತ್ತೆಯಾಗಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬೀಗ ಒಡೆದು ಬಾಲಕಿಯನ್ನು ಹೊರಗೆ ತಂದಿದ್ದಾರೆ. ಬಳಿಕ ಬಾಲಕಿಯನ್ನು ಗುಂಟೂರು ಜಿಜಿಎಚ್‌ಗೆ ಸ್ಥಳಾಂತರಿಸಿದ್ದಾರೆ. ಮೃತ ಬಾಲಕಿಯ ಸಂಬಂಧಿಕರು, ಗ್ರಾಮಸ್ಥರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದು,ಬಾಲಕಿಯನ್ನು ಕೊಲೆ ಮಾಡಿದ ಆರೋಪಿ ನಾಗರಾಜುಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಶಾಲೆಯಿಂದ ಏಕಾಂಗಿಯಾಗಿ ಹೊರಗೆ ಕಳುಹಿಸಿದ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಗೂಳಿ ಕಾಳಗ; ಅಂಗಡಿಗೆ ನುಗ್ಗಿ ಇಬ್ಬರು ಯುವತಿಯರನ್ನು ತುಳಿದು ಹಾಕಿದ ಗೂಳಿಗಳು

ಆರೋಪಿ ನಾಗರಾಜು ಈಗಾಗಲೇ ಮದುವೆಯಾಗಿದ್ದು, ಆದರೆ ಪತ್ನಿ ಜತೆಗಿನ ಭಿನ್ನಾಭಿಪ್ರಾಯದಿಂದ ಕಳೆದ ಮೂರು ವರ್ಷಗಳಿಂದ ನಾಗರಾಜು ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ನಾಗರಾಜು ವಿರುದ್ಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಚೇಬ್ರೋಳು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ